ಮಂಗಳೂರು : ನಿಲ್ಲಿಸಿದ್ದ ಕಾರಿನ ಗಾಜು ಪುಡಿಗೈದು ಕಾರಿನೊಳಗಿದ್ದ 15 ಲಕ್ಷ ರೂ. ದರೋಡೆಗೈದ ಘಟನೆ ನಗರದ ಚಿಲಂಬಿಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಹಣದ ವಾರಸುದಾರರು ಕಾರನ್ನು ಚಿಲಿಂಬಿಯಲ್ಲಿ ಪಾರ್ಕ್ ಮಾಡಿ ಡೋರ್ ಲಾಕ್ ಮಾಡಿ ಸೌತ್ ಇಂಡಿಯಾ ಬ್ಯಾಂಕಿಗೆ ತೆರಳಿದ್ದರೆನ್ನಲಾಗಿದೆ. ಈ ವೇಳೆ ಕಾರಿನ ಹಿಂಬದಿ ಸೀಟಿನ ಬಾಗಿಲಿನ ಗಾಜು ಪುಡಿಗೈದು ಒಳಗಿದ್ದ 15 ಲಕ್ಷ ರೂ. ನಗದು ಎಗರಿಸಿ ಪರಾರಿಯಾಗಿದ್ದರೆನ್ನಲಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here