ಪುಣಚ: ಭಾರತೀಯ ಅಂಚೆ ಇಲಾಖೆಯ ಪುತ್ತೂರು ವಿಭಾಗದ ಸಹಯೋಗದಲ್ಲಿ ಪುಣಚ ಗ್ರಾಮ ಪಂಚಾಯಿತಿ ಸಹಕಾರದಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ವಿಶೇಷ ಶಿಬಿರ ಪುಣಚ ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಶಿಬಿರವನ್ನು ಉದ್ಘಾಟಿಸಿದ ಪುಣಚ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ ಶ್ರೀಧರ ಶೆಟ್ಟಿ ಮಾತನಾಡಿ ಗ್ರಾಮದ ಹಲವಾರು ಮಂದಿ ಆಧಾರ್ ಕಾರ್ಡ್ ನೋಂದಣಿಗಾಗಿ ದೂರದೂರದ ನೋಂದಣಿ ಕೇಂದ್ರಗಳಿಗೆ ಅಲೆದಾಡುವುದನ್ನು ಮನಗಂಡು ಅಂಚೆ ಇಲಾಖೆಯಲ್ಲಿ ಮನವಿ ಸಲ್ಲಿಸಿದ್ದೆವು. ಆದರೆ ನೋಂದಣಿ, ತಿದ್ದುಪಡಿಗೆ ಇನ್ನೂ ಹೆಚ್ಚಿನ ಗ್ರಾಮಸ್ಥರು ಬಂದಿದ್ದರೂ, ಹಲವರು ಅವಕಾಶ ವಂಚಿತರಾಗಿದ್ದು, ಮುಂದಿನ ತಿಂಗಳು ಇನ್ನೂ ಎರಡುದಿನಗಳ ಶಿಬಿರ ನಡೆಸುವಂತೆ ಕೇಳಿಕೊಳ್ಳಲಾಗುವುದು ಎಂದರು.
ಅಂಚೆ ಇಲಾಖೆಯ ಸಹಾಯಕ ಅಧೀಕ್ಷಕ ಲೋಕೇಶ್ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಪಂಚಾಯಿತಿ ಉಪಾಧ್ಯಕ್ಷ ಮಹೇಶ್ ಶೆಟ್ಟಿ, ಪಿಡಿಒ ಲಾವಣ್ಯ, ಪಂಚಾಯಿತಿ ಸದಸ್ಯರಾದ ಲಲಿತ, ಉದಯಕುಮಾರ್ ದಂಬೆ, ನಾರಾಯಣ ನಾಯ್ಕ್, ಬಾಲಕೃಷ್ಣ ಹಿತ್ತಿಲು, ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪೋಟೊ-೧೦ವಿಟಿಎಲ್-ಆಧಾರ್

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here