ಬಂಟ್ವಾಳ: ಪೌರತ್ವ ಕಾಯ್ದೆ ಭಾರತವನ್ನು ವಿಭಜನೆ ಮಾಡುತ್ತದೆ, ಇದು ಭಾರತೀಯ ರಿಗೆ ಹಿತವಾದುದಲ್ಲ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಬಂಡವಾಳ ಶಾಹಿಗಳಿಗೆ ಹಿತವಾದ ಎನ್.ಡಿ.ಎ.ಸರಕಾರ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ.
ಈ ಕಾಯ್ದೆ ಸಮಾಜದ ಸಾಮರಸ್ಯಕ್ಕೆ ತೊಂದರೆ ಕೊಡುವ ಕಾಯ್ದೆಯಾಗಿದೆ, ಇದರ ವಿರುದ್ದ ಎಲ್ಲಾ ಜಾತಿ ಮತದ ಬಾಂಧವರು ಸೇರಿಕೊಂಡು ಪ್ರತಿಭಟನೆ ನಡೆಸುತ್ತಿದ್ದೇವೆ.


ಬೇಟಿಪಡಾವೋ ಬೇಟಿ ಬಚಾವೋ ಕಾರ್ಯಕ್ರಮದ ವಿರುದ್ದ ಇವರ ಸರಕಾರ ಕೆಲಸ ಮಾಡುತ್ತಿದೆ ಎಂಬುದು ದೇಶದ ಲ್ಲಿ ನಡೆಯುವ ಅತ್ಯಾಚಾರಗಳೇ ಸಾಕ್ಷಿ.

ಜಾತಿ ಬಣ್ಣ ಧರ್ಮದಿಂದ ಮನುಷ್ಯನ ಪ್ರೀತಿ ಮಾಡಬಾರದು .
ಜನ್ ದನ್ ಖಾತೆಯಿಂದ ಹಿಡಿದು ಯಾವುದೇ ಯೋಜನೆಗಳು ಈಡೇರಿಲ್ಲ, ಕಪ್ಪು ಹಣವನ್ನು ತರಿಸಲು ಸಾಧ್ಯವಾಗಿಲ್ಲ ಎಂಬುದು ಸತ್ಯ,
ಮತೀಯವಾದವನ್ನು ಮುಂದಿಟ್ಟುಕೊಂಡು,
ಸಬ್ ಸಾಥ್ ಸಬ್ ಕಾ ವಿಕಾಶ್ ಹೆಸರು ಕೇವಲ ಭಾಷಣಕ್ಕೆ ಸೀಮಿತವಾಗಿದೆ ನಡವಳಿಕೆಯಲ್ಲಿ ಬದಲಾವಣೆ ಇಲ್ಲ. ಅನೇಕ ಕಂಪೆನಿಗಳು ಮುಚ್ಚುಗಡೆ ಆಗಿದೆ,
ನಿರುದ್ಯೋಗ, ದಿನಬಳಕೆಯ ವಸ್ತುಗಳ ಮೇಲೆ ಬೆಲೆಏರಿಕೆ, ಹೀಗೆ ಸರಕಾರದ ವೈಪಲ್ಯಗಳು ಅನೇಕ ಇದೆ. ವೈಪಲ್ಯ ದೌರ್ಬಲ್ಯ ವನ್ನು ಜನರಿಗೆ ಮುಚ್ಚಿಡುವ ಉದ್ದೇಶದಿಂದ ಎನ್.ಆರ್.ಸಿ.ಕಾಯ್ದೆಯನ್ನು ಜಾರಿ ಮಾಡಿದ್ದಾರೆ ಇದೇ ರೀತಿ ಬೇರೆ ಬೇರೆ ದಾರಿಗಳನ್ನು ಹುಡುಕುತ್ತಿದ್ದಾರೆ ಎಂದು ಅವರು ಹೇಳಿದರು.

ರಾಷ್ಟ್ರ ಪೌರತ್ವ ತಿದ್ದುಪಡಿ ಕಾಯ್ದೆ ಎನ್ನುವುದು ಬಿಜೆಪಿಯ ಮತಗಳಿಕೆಯ ಕಾನೂನೇ ಹೊರತು ದೇಶದ ಅಭಿವೃದ್ಧಿಗಲ್ಲ‌. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಹಿನ್ನೆಲೆಯಲ್ಲಿ ಒಂದು ಸಮುದಾವನ್ನು ವಿಭಜಿಸುವ ಗಲಭೆ ಪೀಡಿತ ಹಿಂಸಾ ಮಾತೃ ಭೂಮಿಯಾಗಲಿದೆ.
ನಮಗೆ ಹಿಟ್ಲರ್ ಭಾರತ ಬೇಕಾಗಿಲ್ಲ. ಗಾಂಧೀ ಪ್ರೇರಿತ ಭಾರತ ಬೇಕಾಗಿದೆ ಎಂದು, ಪ್ರಚಲಿತ ವಿದ್ಯಾಮಾನಗಳ, ಕೇಂದ್ರ ಹಾಗೂ ರಾಜ್ಯ ಸರಕಾರ ವಿರುದ್ಧ ಸುದೀರ್ ಕುಮಾರ್  ಅವರು ವಾಗ್ದಾಳಿ ನಡೆಸಿದರು.

ಕಾಂಗ್ರೇಸ್ ಪ್ರಮುಖರಾದ  ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ಎಂ.ಎಸ್.ಮಹಮ್ಮದ್, ಮಂಜುಳಾ ಮಾದವ ಮಾವೆ, ಅಬ್ಬಾಸ್ ಆಲಿ, ಸುದೀಪ್ ಕುಮಾರ್ ಶೆಟ್ಟಿ, ಮಾಯಿಲಪ್ಪ ಸಾಲ್ಯಾನ್ ಹಾಗೂ ಪಕ್ಷದ ಎಲ್ಲಾ ಪ್ರಮುಖರು ಹಾಜರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here