ಒಡಿಯೂರು: ಆತ್ಮನಿಷ್ಠ ಸಂಸ್ಕೃತಿಯ ಸೊಬಗು ದತ್ತತತ್ತ್ವದಲ್ಲಿದೆ. ಅದೊಂದು ಸುಂದರವಾದ ಸಂಸ್ಕೃತಿ. ದತ್ತ ತತ್ತ್ವವೇ ಸಮರಸ ತತ್ತ್ವ. ಸಮರಸ ತತ್ತ್ವವೇ ಆತ್ಮ ತತ್ತ್ವ. ಆತ್ಮತತ್ತ್ವವನ್ನು ಅರಿತರೆ ಎಲ್ಲರಲ್ಲೂ ಭಗವಂತನಿದ್ದಾನೆ ಎಂಬ ಅರಿವು ನಮಗಾಗುತ್ತದೆ. ಆಗ ನಮ್ಮಿಂದ ಯಾವುದೇ ದುಷ್ಕರ್ಮಗಳು ಆಗುವುದಕ್ಕೆ ಸಾಧ್ಯವಿಲ್ಲ. ಅದೊಂದು ಅನುಭಾವದ ವಿಚಾರವಾಗಿದೆ ಎಂದು ಒಡಿಯೂರು ಶ್ರೀಗುರುದೇದದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ದತ್ತ ಜಯಂತಿ ಮಹೋತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹದ ಎರಡನೆಯ ದಿನ ಜರಗಿದ ಶ್ರೀ ಗುರುಚರಿತಾಮೃತ ಪ್ರವಚನದ ವೇಳೆ ಅವರು ದಿವ್ಯ ಉಪಸ್ಥಿತಿಯನ್ನು ಕರುಣಿಸಿ ಸಂಸ್ಕಾರದಿಂದ ಸಂಸ್ಕೃತಿ ಉಳಿಯಲು ಸಾಧ್ಯ. ಸುಸಂಸ್ಕೃತ ಸಮಾಜ ನಿರ್ಮಾಣವಾಗಬೇಕಾದರೆ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಉಜ್ಜುವುದರಿಂದ ಉಜ್ವಲತೆ ಹೆಚ್ಚಾಗುತ್ತದೆ. ಇಹದಿಂದ ಪರಕ್ಕೆ ದಾರಿ ತೋರುವವನೇ ಗುರು. ಅವರೇ ಭಗವಾನ್ ದತ್ತಾತ್ರೇಯರು. ಭೋಗದ ಬದುಕು ಶಾಶ್ವತವಲ್ಲ. ಆಧ್ಯಾತ್ಮಿಕ ಜೀವನವೇ ಶಾಶ್ವತ ಎಂದು ಜಗತ್ತಿಗೆ ಸಾರಿದವರು. ಮರಳುವ ಮುನ್ನ ಅರಳಬೇಕು. ಆಗಲೇ ಜೀವನದ ಸಾರ್ಥಕತೆ ಎಂದರು.
ಗುರುತತ್ತ್ವದ ಪ್ರವಚನವನ್ನುಗೈದ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರು ಬುದ್ಧಿಯ ಮಟ್ಟಕ್ಕೆ ಮನಸ್ಸನ್ನು ತರುವುದು. ಮನಸ್ಸಿನ ಮಟ್ಟದಿಂದ ಬುದ್ಧಿಯ ಮಟ್ಟಕ್ಕೆ ಹೋಗುವುದಕ್ಕೆ ದಾರಿ ತೋರಿಸುವವನೇ ಗುರು. ಜಗತ್ತಿನಲ್ಲಿರುವ ಎಲ್ಲವನ್ನು ಗುರುವಾಗಿಸಿಕೊಂಡವರು ಶ್ರೀ ಗುರುದತ್ತಾತ್ರೇಯರು. ಇದರಿಂದ ನಮಗೂ ಪಾಠ ಇದೆ. ಯಾವುದನ್ನು ಜೀವನದಲ್ಲಿ ಅಂಟಿಸಿಕೊಳ್ಳದೇ ತನ್ನಷ್ಟಕ್ಕೆ ತಾನೇ ಜೀವಿಸುವುದು ಉತ್ತಮ. ಇನ್ನೊಬ್ಬರೊಂದಿಗೆ ಬೆರೆಯುವ ಗುಣ ನಮ್ಮಲ್ಲಿರಬೇಕು. ಬದುಕುವುದಕ್ಕಾಗಿ ಉಣ್ಣಬೇಕೆ ಹೊರತು ಉಣ್ಣುವುದಕ್ಕಾಗಿ ಬದುಕುವುದಲ್ಲ. ಸಮುದ್ರದಂತೆ ಬದುಕಿನಲ್ಲಿ ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುವವರು ನಾವಾಗಬೇಕು ಎಂದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here