ಬಂಟ್ವಾಳ : ನರಿಕೊಂಬು ಕುಂಬಾರರ ಯಾನೆ ಕುಲಾಲರ ಸಂಘ ಹಾಗೂ ನರಿಕೊಂಬು ಕುಲಾಲರ ಮಹಿಳಾ ಸಂಘ ಇವುಗಳ ಜಂಟಿ ಆಶ್ರಯದಲ್ಲಿ ತಾಲೂಕು ಮಟ್ಟದ ಕ್ರೀಡೋತ್ಸವ-2019 ಡಿಸೆಂಬರ್ 22 ರಂದು ಮೊಗರ್ನಾಡು ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಬಳಿ ನಡೆಯಲಿದೆ.
ಮುಂಬಯಿ ಉದ್ಯಮಿ ರಾಜೇಶ್ ಜೀವಿತ ಕ್ರೀಡೋತ್ಸವ ಉದ್ಘಾಟಿಸಲಿದ್ದು, ಉದ್ಯಮಿ ಶ್ರೀನಾಥ್ ಕುಲಾಲ್ ಅಧ್ಯಕ್ಷತೆ ವಹಿಸುವರು. ಪುರುಷರಿಗೆ ಕಬಡ್ಡಿ, ವಾಲಿಬಾಲ್, ಹಗ್ಗ-ಜಗ್ಗಾಟ ಸ್ಪರ್ಧೆಗಳು ನಡೆಯಲಿದ್ದು, ವಿಜೇತರಿಗೆ ಪ್ರಥಮ ರೂ. 3,333/- ಹಾಗೂ ದ್ವಿತೀಯ 2,222/- ನಗದು ಮತ್ತು ಟ್ರೋಫಿ, ಹಾಗೂ ಮಹಿಳೆಯರಿಗೆ ತ್ರೋಬಾಲ್, ಹಗ್ಗ-ಜಗ್ಗಾಟ ಹಾಗೂ ಇತರ ಆಟೋಟ ಸ್ಪರ್ಧೆಗಳು ನಡೆಯಲಿದ್ದು, ವಿಜೇತರಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನ ಕ್ರಮವಾಗಿ 2,222/- ಹಾಗೂ 1,111/- ನಗದು ಮತ್ತು ಟ್ರೋಫಿ ನೀಡಲಾಗುವುದು. ಅಲ್ಲದೆ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ. ಈ ಪ್ರಯುಕ್ತ ಡಿ. 15 ರಂದು ರೂ. 500/- ಪ್ರವೇಶ ಶುಲ್ಕದೊಂದಿಗೆ ಕ್ರಿಕೆಟ್ ಪಂದ್ಯಾಟ ನಡೆಯಲಿದ್ದು, ವಿಜೇತರಿಗೆ ಪ್ರಥಮ ರೂ. 5,555/- ಹಾಗೂ ಕುಲಾಲ ಟ್ರೋಫಿ, ದ್ವಿತೀಯ ರೂ. 3,333/- ಹಾಗೂ ಕುಲಾಲ ಟ್ರೋಫಿ ನೀಡಲಾಗುವುದು. ಕ್ರೀಡೋತ್ಸವವು ಸ್ವಜಾತಿ ಬಾಂಧವರಿಗೆ ಮಾತ್ರ ಸೀಮಿತವಾಗಿದ್ದು, ಹೆಚ್ಚಿನ ವಿವರಗಳಿಗಾಗಿ ಮೊಬೈಲ್ ಸಂಖ್ಯೆ 9740765456, 9900828598 ಅಥವಾ 9902714267 ಅನ್ನು ಸಂಪರ್ಕಿಸಬಹುದು ಎಂದು ಕುಲಾಲರ ಸಂಘದ ಪ್ರಕಟಣೆ ತಿಳಿಸಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here