ಬಂಟ್ವಾಳ: ಶಾಸಕರ ಹಾಗೂ ಸಂಸದರ 20 ಲಕ್ಷ ರೂ. ಅನುದಾನದಲ್ಲಿ ಕಾಂಕ್ರೀಟೀಕರಣಗೊಂಡ ಬೋಳಂತೂರು ಬಂಡಸಾಲೆ ರಸ್ತೆ ಕಾಮಗಾರಿಯನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಜಯರಾಮ ರೈ, ಚಂದ್ರಶೇಖರ ಪೂಜಾರಿ, ಉದಯ, ಜಯರಾಮ ಶೆಟ್ಟಿ, ಕುಲ್ಯಾರ್ ನಾರಾಯಣ ಶೆಟ್ಟಿ, ಚಂದ್ರಶೇಖರ ಬಾಯಿಲ, ಸುಲೈಮಾನ್, ಬಾಲಕೃಷ್ಣ ಸೆರ್ಕಳ, ಶೋಭಾ, ರೇವತಿ ಉಪಸ್ಥಿತರಿದ್ದರು.