ಬಂಟ್ವಾಳ: ಮೆಸ್ಕಾಂ ಮೀಟರ್ ರೀಡರ್ ಮಾಡುವ ತಪ್ಪಿಗೆ ಗ್ರಾಹಕರು ಬಡ್ಡಿ ಕಟ್ಟತ್ತಿರವುದು ಯಾವ ನ್ಯಾಯ? ಎಂದು ಪ್ರಾನ್ಸಿಸ್ ಮೊಂತೊರೋ ಸಭೆಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿದರು.
ಅವರು ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ನಿಯಮಿತ ಇದರ ಬಂಟ್ವಾಳ ನಂ. 1, ನಂ.2 ಉಪವಿಭಾಗ ವ್ಯಾಪ್ತಿಯ ಬಿಸಿರೋಡಿನ ಮೆಸ್ಕಾಂ ಕಚೇರಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ತನ್ನ ಮನೆಯ ಕರೆಂಟ್ ಬಿಲ್ ಸಬೆಗೆ ತೋರಿಸಿ ಪ್ರಸ್ತಾವಿಸಿದ ಅವರು ಮೀಟರ್ ರೀಡಿಂಗ್ ನಲ್ಲಿ ಸಿಬ್ಬಂದಿ ಮಾಡುವ ಎಡವಟ್ಟಿನಿಂದ ನಾವು ಬಡ್ಡಿಕಟ್ಟಬೇಕಾದ ಪರಿಸ್ಥಿತಿ ಉಂಟಾಗಿದೆ.
ಡಿಪಾರ್ಟ್ ಮೆಂಟ್ ಮಾಡುವ ತಪ್ಪಿಗೆ ಗ್ರಾಹಕರಿಗೆ ಬಡ್ಡಿ ವಿಧಿಸುವ ಕ್ರಮ ಸರಿಯಲ್ಲ ಎಂದು ಅವರು ಸಭೆಗೆ ದೂರಿಕೊಂಡರು.
ಮಂಗಳೂರು ಮೆಸ್ಕಾಂ ವೃತ್ತದ ಅಧೀಕ್ಷಕ ಮಂಜಪ್ಪ ಅವರು ಇದಕ್ಕೆ ಪ್ರತಿಕ್ರಿಯಿಸಿ, ಈ ರೀತಿ ಗೊಂದಲಗಳು ಉಂಟಾದರೆ, ಗ್ರಾಹಕರಿಗೆ ಮೆಸ್ಕಾಂ ಇಲಾಖೆಯಿಂದ ಮೊದಲು ಮಾಹಿತಿ ನೀಡಿ ಹಂತಹಂತವಾಗಿ ಸಮಸ್ಯೆ ಪರಿಹಾರಕ್ಕೆ ಸೂಚಿಸಿದರು.
ಜಿಲ್ಲೆಯ ಪರಿಶಿಷ್ಟ ಜಾತಿ, ಪಂಗಡದ ಕಾಲೋನಿಗಳಿಗೆ ದಾರಿದೀಪ ಅಳವಡಿಕೆ, ಹೆಚ್ಚುವರಿ ವಿದ್ಯುತ್ ಬಿಲ್ ನ ಸಮಸ್ಯೆಯನ್ನು ಪರಿಹರಿಸುವಂತೆ ಸಾಮಾಜಿಕ ನ್ಯಾಯ ಸಮಿತಿ ಸದಸ್ಯ, ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ ಆಗ್ರಹಿಸಿದರು.
ಹೆದ್ದಾರಿ ಕಾಮಗಾರಿ ಸಂದರ್ಭದಲ್ಲಿ ವಿದ್ಯುತ್ ಲೈನ್ ಆಪ್ ಮಾಡುವ ಕುರಿತು, ಅಳವು ಗೊಂದಲಗಳಿದ್ದು ಅದನ್ನು ಸರಿಪಡಿಸುವಂತೆ ಪುರಸಭಾ ಸದಸ್ಯ ಗೋವಿಂದ ಪ್ರಭು ತಿಳಿಸಿದರು.
ಮೆಸ್ಕಾಂ ಅಧಿಕ್ಷಕ ಇಂಜಿನಿಯರ್ ಮಂಜಪ್ಪ ಅವರು ಮಾತನಾಡಿ ಸ್ಥಳಕ್ಕೆ ಬೇಟಿ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಮೆಸ್ಕಾಂ ಅಧಿಕಾರಿಗಳಾದ ಪ್ರಶಾಂತ್ ಪೈ, ನಾರಾಯಣ ಭಟ್ ಉಪಸ್ಥಿತರಿದ್ದರು.