Friday, October 27, 2023

ಸಾಕಪ್ಪ ಸಾಕು ಗಲಾಟೆ : ಕರ್ಪ್ಯೂ ಸಡಿಲಿಕೆಯಾದ ಸಂದರ್ಭ ಮಂಗಳೂರು

Must read

ಚಿತ್ರ: ವಿಕೇಶ್ ಬಂಟ್ವಾಳ

*ಮಂಗಳೂರು* : ಭಾನುವಾರ ಕರ್ಪ್ಯೂ ಸಡಿಲಿಕೆಯಾದ ಸಂದರ್ಭದಲ್ಲಿ ಮಂಗಳೂರು ಸೆಂಟ್ರಲ್ ಮಾರ್ಕೆಟ್ ನಲ್ಲಿ ಜನರು ದಿನಬಳಕೆಯ ವಸ್ತುಗಳನ್ನು ಖರೀದಿಸಲು ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡುಬಂತು.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಗುರುವಾರ ನಡೆದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದು ಲಾಠಿ ಚಾರ್ಜ್ ಬಳಿಕ ಆಶ್ರವಾಯು ಕೊನೆಗೆ ಗೋಲಿಬಾರ್ ನಡೆದು ಎರಡು ಜೀವಗಳು ಬಲಿಯಾದ ಬಳಿಕ ಪರಿಸ್ಥಿತಿ ನಿಯಂತ್ರಣ ಕ್ಕೆ ಬರಲು ಕರ್ಪ್ಯೂ ಜಾರಿ ಮಾಡಲಾಗಿತ್ತು.
ಏಕಾಏಕಿ ಕರ್ಪ್ಯೂ ಜಾರಿ ಮಾಡಿದ ಹಿನ್ನೆಲೆಯಲ್ಲಿ ಮಂಗಳೂರು ಜನತೆ ದೈನಂದಿನ ವಸ್ತುಗಳಿಗೂ ಪರದಾಡುವ ಸ್ಥಿತಿ ಉಂಟಾಗಿತ್ತು.
ಅ ಬಳಿಕ ಶನಿವಾರ ಬೆಳಿಗ್ಗೆ ಸ್ವಲ್ಪ ಹೊತ್ತು ನಿತ್ಯದ ವಸ್ತುಗಳ ಖರೀದಿಗೆ ಕರ್ಪ್ಯೂ ಸಡಿಲಿಕೆ ಮಾಡಲಾಗಿತ್ತು.
ಇಲ್ಲಿನ‌ ಪರಿಸ್ಥಿತಿ ಅವಲೋಕನ ಮಾಡಲು ಬಂದಿದ್ದ ಸಿ.ಎಂ.ಯಡಿಯೂರಪ್ಪ ಹಾಗೂ ಗೃಹ ಮಂತ್ರಿ ಎಸ್.ಅರ್.ಬೊಮ್ಮಾಯಿ ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಕರ್ಪ್ಯೂ ಸಡಿಲಗೊಳಿಸಲು ಪೊಲೀಸರಿಗೆ ಸೂಚನೆ ನೀಡಿದ್ದರು.
ಅ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಕರ್ಪ್ಯೂ ಸಡಿಲಿಕೆ ಮಾಡಲಾಗಿದ್ದು, ಜನರು ಅವಸರದಲ್ಲಿ ದಿನಬಳಕೆಯ ವಸ್ತುಗಳನ್ನು ಖರೀದಿಸಿ ದರು.

More articles

Latest article