ವಿಟ್ಲ: ಕೊಳ್ನಾಡು ಗ್ರಾಮ ಪಂಚಾಯಿತಿ ಮಹಿಳಾ ಗ್ರಾಮ ಸಭೆಯು ಗ್ರಾಮ ಪಂಚಾಯಿತಿಯ ಸೌಹಾರ್ಧ ಭವನದಲ್ಲಿ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್. ಮಹಮ್ಮದ್ ರವರು ಮಹಿಳೆಯರಿಗೆ ಸರಕಾರ ೫೦% ರಾಜಕೀಯ ಮೀಸಲಾತಿ ನೀಡಿರುವುದರಿಂದ ಪ್ರಮುಖ ಹುದ್ದೆಗಳಲ್ಲಿ ನಾವು ಮಹಿಳೆಯರನ್ನು ಕಾಣಲು ಸಾಧ್ಯವಾಗಿದೆ. ಇನ್ನಿತರ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಕೊಟ್ಟಿರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಸ್ವಾವಲಂಬಿಗಳಾದಾಗ ಸಮಾಜ ಸದೃಢಗೊಳ್ಳುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ ಗ್ರಾ.ಪಂ. ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ ಮಹಿಳೆಯರ ಮೇಲೆ ವಿಶ್ವಾಸವಿಟ್ಟಿರುವ ಸರಕಾರ ಬದುಕಿಗೆ ಪೂರಕವಾಗಿರುವ ನಿವೇಶನ, ವಸತಿ, ಪಡಿತರ ಯೋಜನೆಗಳಲ್ಲದೇ ಹಾಗೂ ಇಲಾಖಾ ಸಹಾಯಧನಗಳನ್ನು ಮಹಿಳೆಯರಿಗೆ ಆದ್ಯೆತೆ ನೀಡಿದೆ. ಮಹಿಳೆಯರು ಸಾರ್ವಜನಿಕ ಜಾಗೃತಿ ಸಭೆಗಳಲ್ಲಿ ಕೂಡ ಹೆಚ್ಚಾಗಿ ಭಾಗವಹಿಸುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಸುಧಾ ಜೋಷಿ ಮಾತನಾಡಿ ಇಲಾಖಾ ಮಾಹಿತಿ ನೀಡಿ ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಹಾಗೂ ಬಾಲ್ಯವಿವಾಹದಂತಹ ಕಾನೂನಾತ್ಮಕ ರಕ್ಷಣೆ ನೀಡುವುದು ಇಲಾಖಾ ಕರ್ತವ್ಯ ಈ ಬಗ್ಗೆ ಮಹಿಳೆಯರು ಜಾಗೃತರಾಗಬೇಕೆಂದರು.
ಅತಿಥಿಗಳಾಗಿ ತಾಲೂಕು ಪಂಚಾಯಿತಿ ಸದಸ್ಯ ಕುಲ್ಯಾರು ನಾರಾಯಣ ಶೆಟ್ಟಿ ಮಾತನಾಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಯಮುನಾ ಲಕ್ಷ್ಮಣ ಗೌಡ, ಪಂಚಾಯಿತಿ ಸದಸ್ಯರುಗಳು ಉಪಸ್ಥಿತರಿದ್ದರು. ಪಿಡಿಒ ರೋಹಿಣಿ ಬಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಅಂಗನವಾಡಿ ಮೇಲ್ವಿಚಾರಕಿ ರೇಣುಕಾ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here