ಹುಟ್ಟಿನ ಕಾರಣ
ಸಾವಿನ ದಿನ
ಇವೆರಡೂ ಬಿಟ್ಟು
ಬೇರೆ ಎಲ್ಲಾ ಗೊತ್ತು ಈ ಗೂಗಲ್ ಗೇ..!
ಊರಲ್ಲದ ಊರಿನಲ್ಲಿ
ದಾರಿ ಹೇಳಿಕೊಟ್ಟಿದೆ.
‘ಅಣ್ಣ ದಾರಿ ಎಲ್ಲಿ’ ಕೇಳುವ ತಾಪತ್ರಯ ತಪ್ಪಿಸಿದೆ.
ಹಲ್ಲು ಬಿಟ್ಟು ನಗುಮುಖ ತೋರಿಸಿ
ಧನ್ಯವಾದ ಅರ್ಪಿಸುವ
ಗುಣವನ್ನೇ ಮರೆಸಿದೆ.
ಮುಂದೆ ಅ ಇ ಕಲಿಸಲು
ಗುರುವೇ ಬೇಕಿಲ್ಲ
ಆ ಶಾಲೆ,ಕರೀ ಬೋರ್ಡ್
ಎಲ್ಲಾ ಮಾಯಾ
ಮನೆಯಲ್ಲೇ ಕೂತು
ಗೂಗಲ್ ಓಪನ್ ಮಾಡಿ
ಅದರಲ್ಲೊಬ್ಬ ಮೇಷ್ಟ್ರನ್ನು ಹುಡುಕಿ
ಆನ್ ಲೈನ್ ನಲ್ಲೇ ಫೀಸ್ ಕಟ್ಟಿ
ಇಂಜಿನಿಯರೇ ಆಗಬಲ್ಲ
ಕೊನೆಗೆ “ಗೂಗಲ್ ಯುನಿವರ್ಸಿಟಿ”
ಸರ್ಟಿಫಿಕೇಟ್..!
ಗಂಡಿಗೆ ಹೆಣ್ಣು
ಹೆಣ್ಣಿಗೆ ಗಂಡು
ಹುಡುಕಿ ಕೊಟ್ಟದ್ದು ಇದೆ.
ಮದುವೆ ಮಾಡಿದ್ದು,
ಕೊನೆಗೆ ಡೈವೋರ್ಸ್ ಗೆ ಉಪಾಯ ನೀಡಿದ್ದು
ಎಲ್ಲವೂ ಇದೇ.
ಕಟ್ಟಲು ಕೆಡವಲು ಎಲ್ಲವೂ
ಹೇಳಿ ಕೊಟ್ಟಿದೆ..!
ಯಾವತ್ತೂ ಬಯಸಿಲ್ಲ
ಮಾಡಿದ ಉಪಕಾರಕ್ಕೊಂದು
ಕೃತಜ್ಞತೆ
ಏಕೆಂದರೆ ಉಪಕಾರಕ್ಕೆಲ್ಲ
ಶುಲ್ಕ ಪಡೆದು ಕೊಂಡಿದೆ.!
ಕಾಲವೇ ಹಾಗೇ
ಸಂಬಂಧವನ್ನೇ ದುಡ್ಡಿಗೆ ಮಾರಿಕೊಂಡಿದೆ..!
ಚಡ್ಡಿ ದೋಸ್ತಿಗಿಂತ ಇನ್ವೈಟ್ ಫ್ರೆಂಡ್ಸ್ ಹೆಚ್ಚು..!
ಧನ್ಯವಾದ ಅರ್ಪಿಸಲೇ ಬೇಕು
“ಗೊತ್ತಿಲ್ಲ” ಅನ್ನದ
ಗೂಗಲ್ ಗೇ..!
✍ಯತೀಶ್ ಕಾಮಾಜೆ