ಬಂಟ್ವಾಳ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿ ದೇವಾಲಯದ ಬ್ರಹ್ಮಕಲಶೋತ್ಸವದ ಅಂಗವಾಗಿ ಬಿಸಿರೋಡಿನ ಹೋಟೆಲ್ ರಂಗೋಲಿಯಲ್ಲಿ ಜ.5 ರಂದು ಅದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಪೂರ್ವಭಾವಿ ಸಭೆ ನಡೆಯಲಿದೆ ಎಂದು
ಬಂಟ್ವಾಳ ತಾಲೂಕು ಸಮಿತಿ ಸಂಚಾಲಕರಾದ
ಚಂದ್ರಹಾಸ ಡಿ ಶೆಟ್ಟಿ ರಂಗೋಲಿ. ,
ಭುವನೇಶ್ ಪಚ್ಚಿನಡ್ಕ ಅವರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ

ಕಟೀಲು ತಾಯಿಯ ದೇವಳದಲ್ಲಿ ಜನವರಿ 22ರಿಂದ ಫೆಬ್ರವರಿ3 ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ,ಸಹಸ್ರ ಚಂಡಿಕಾಯಾಗ,ಕೋಟಿ ಜಪ ಯಜ್ಞ ಹಾಗೂ ಅಷ್ಟಪವಿತ್ರ ನಾಗಮಂಡಲ ನಡೆಯಲಿದ್ದು , ಶುಭವಾಸರದಲ್ಲಿ ಜಗನ್ಮಾತೆಯ ಸೇವೆಯನ್ನು ಮಾಡುವ ಅವಕಾಶವು ನಮಗೆಲ್ಲರಿಗೂ ಆಯಾಚಿತವಾಗಿ ಬಂದಿರುವುದು ನಮ್ಮ ಸೌಭಾಗ್ಯವೇ ಸರಿ .ನಮ್ಮ ಜೀವಿತಾವಧಿಯಲ್ಲಿ ಅಪರೂಪಕ್ಕೆ ಸಿಗಬಹುದಾದ ಈ ಅವಕಾಶವನ್ನು ಸದುಪಯೋಗಪಡಿಸುವ ದೃಷ್ಟಿಯಿಂದ ಬಂಟ್ವಾಳ ತಾಲೂಕಿನ ಎಲ್ಲ ಗ್ರಾಮಗಳ ಭಗವದ್ಭಕ್ತರಿಂದ ಹೊರೆಕಾಣಿಕೆ ಸಮರ್ಪಣೆ ಹಾಗೂ ಇನ್ನಿತರ ಜವಾಬ್ದಾರಿಗಳ ಬಗ್ಗೆ ಚರ್ಚಿಸಲು ಜ. 5 ಆದಿತ್ಯವಾರ ಬೆಳಿಗ್ಗೆ ಗಂಟೆ 10ಕ್ಕೆ ಸರಿಯಾಗಿ ಹೋಟೆಲ್ ರಂಗೋಲಿ ಬಿ ಸಿ ರೋಡ್ ಇಲ್ಲಿ ತಾಲೂಕಿನ ಎಲ್ಲ ದೇವಸ್ಥಾನ ದೈವಸ್ಥಾನ ಗಳ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು, ವಿವಿಧ ಭಜನಾ ಮಂಡಳಿಗಳ ಅಧ್ಯಕ್ಷರುಗಳು , ಸಂಘಸಂಸ್ಥೆಗಳ ಅಧ್ಯಕ್ಷ ರುಗಳ ಸಮಾಲೋಚನಾ ಸಭೆಯನ್ನು ಕರೆಯಲಾಗಿದೆ ಅಲ್ಲದೆ ಈ ಸಭೆಯಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ,ಶ್ರೀ ಮೋಹನದಾಸ ಸ್ವಾಮೀಜಿ ಶ್ರೀ ಧಾಮ ಮಾಣಿಲ ,ಶಾಸಕರಾದ ರಾಜೇಶ್ ನಾಯ್ಕ್ ,ಮಾಜಿ ಸಚಿವರಾದ ರಮಾನಾಥ್ ರೈ ಹಾಗೂ ಹಲವು ಗಣ್ಯರು ಮಾರ್ಗದರ್ಶನ ಮಾಡಲಿದ್ದಾರೆ.‌ಈ ಪೂರ್ವಭಾವಿ ಸಭೆಯಲ್ಲಿ ಭಕ್ತರು ಪಾಲ್ಗೊಳ್ಳಲು ಅವರು ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here