ನನಗೊಂದು
ಶಕ್ತಿ ದೊರಕಿತು..!?
ಕಂಡ ಕನಸುಗಳೆಲ್ಲ
ನಿಜವಾಗುವ ಶಕ್ತಿ..!
ರಾತ್ರಿ ಕಂಡ ಕನಸುಗಳು
ಬೆಳಗೆ ಕಣ್ಣು ತೆರೆಯುವ ಹೊತ್ತಿಗೆ ನಿಜವಾಗುತ್ತಿತ್ತು..!
ಅದಕ್ಕೆಂದೇ ಇಂತಹದೇ ಕನಸು
ಬೀಳಬೇಕೆಂದು ಯೋಚಿಸಿ
ಮಲಗುತ್ತಿದ್ದೆ..
ನಿನ್ನೆ ಬಡವನಾಗಿದ್ದವನು
ಇವತ್ತು ಶ್ರೀಮಂತ..
ಉಣ್ಣಲು ಕುಡಿಯಲು ಬಂಗಾರದ ಬಟ್ಟಲು,ಲೋಟ..
ಒಂದು ಸೈಕಲಿಗೆ ಗತಿ ಇಲ್ಲದವನು,
ಇಂದು ನೂರಾರು ಕಾರುಗಳ ಒಡೆಯ
ಮೈಸೂರು ಅರಮನೆ ನಂದೆ,
ತಾಜ್ ಮಹಲ್ ನನ್ನಾಕೆಗೆ ಕೊಟ್ಟ
ಉಡುಗೊರೆ.!
ಚಂದ್ರ,ಮಂಗಳ,ಸೂರ್ಯ ಅಷ್ಟೇ ಯಾಕೆ
ಇಡೀ ಸೌರಮಂಡಲ ಸುತ್ತಿ
ಬಂದವನು ನಾನು..!
ಇದೆಲ್ಲಾ ಗಳಿಸಿದ್ದು ಕೇವಲ ರಾತ್ರಿಯ ಕನಸಿಂದ.
ಎದುರಾಳಿಯೇ ಇಲ್ಲ ನನಗೆ
ಯುಕ್ತಿಯಲ್ಲಿ ಆಗಲಿ ಶಕ್ತಿಯಲ್ಲಾಗಲಿ..
ಶತ್ರುವನ್ನು ಮುಟ್ಟದೇ ನೆತ್ತರು ಹರಿಸಬಲ್ಲೆ
ಜಗತ್ತಿನಲ್ಲಾರು ತಯಾರಿಸದ ಯುದ್ಧ ಉಪಕರಣ
ತಯಾರಿಸಿ ಬಿಡುವೆ
ಇದಕ್ಕೆಲ್ಲ
ಒಂದೇ ಒಂದು ಕನಸು ಕಂಡರೆ ಸಾಕು.
ಕನಸನ್ನು ನನಸಾಗಿಸುವ
ಪ್ರಯತ್ನ ನಾ ಪಡಬೇಕಿಲ್ಲ
ಕನಸು ನನಸಾಗಿರುತ್ತೆ..
ಕನಸು ಕಾಣುವುದೇ ಈಗೀಗ ಬೋರು
ಏಕೆಂದರೆ ನನಸಾಗಲೂ ಏನು ಉಳಿದಿಲ್ಲ..
ಮತ್ತೆ ಮತ್ತೆ ಏನು ಕನಸ ಕಾಣಲಿ..?
ಕನಸ ಕಂಡರೆ ಸಾಲದು..
ನನಸಾಗಿಸುವ
ಮನಸ್ಸಿರಬೇಕು..!
✍ಯತೀಶ್ ಕಾಮಾಜೆ.