ಬಂಟ್ವಾಳ: ಬಂಟ್ವಾಳ ದಂತಹ ಪ್ರದೇಶದಲ್ಲಿ ಅದ್ದೂರಿಯ ಕಾರ್ಯಕ್ರಮ ಆಯೋಜಿಸುವ ಮೂಲಕ ಚಿಣ್ಣರಲೋಕದ ಸೇವಾ ಟ್ರಸ್ಟ್ ಕಲಾವಿದರಿಗೆ ಬದುಕು ರೂಪಿಸುವ ಕೆಲಸ ಮಾಡಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಅವರು ಹೇಳಿದರು.
ಅವರು ಕನ್ನಡ ಸಂಸ್ಕೃತಿ ಇಲಾಖೆ, ಬೆಂಗಳೂರು, ಮತ್ತು ಚಿಣ್ಣರಲೋಕ, ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ.) ಬಂಟ್ವಾಳ ಇದರ ಆಶ್ರಯದಲ್ಲಿ ಹತ್ತು ದಿನಗಳ ಕಾಲ ಬಿಸಿರೋಡಿನ ಲ್ಲಿ ನಡೆಯುವ ಕರಾವಳಿ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ದ ಬಳಿಕ ಮಾತನಾಡಿದರು.
ಕರಾವಳಿ ಕಲೋತ್ಸವ ಕಾರ್ಯಕ್ರಮ ದಿಂದ
ಬಹಳಷ್ಟು ಹೆಮ್ಮೆಯಾಗುತ್ತಿದೆ.
ಯುವ ಕಲಾವಿದರಿಗೆ ಸಾಕಷ್ಟು ವೇದಿಕೆಯನ್ನು ನೀಡಿದೆ.
ಉತ್ತಮ ಕಲಾವಿದರಿಗೆ ಕಲಾಕ್ಷೇತ್ರ ಸಾಕಷ್ಟು ಹೆಸರು ಜೊತೆಗೆ ಬದುಕನ್ನು ರೂಪಿಸಿಕೊಳ್ಳುವ ಅವಕಾಶ ಸಿಕ್ಕಿದೆ.
ಬಿಸಿರೋಡಿನ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನದಲ್ಲಿ
ಕರಾವಳಿ ಕಲೋತ್ಸವದ ಜಾನಪದ ಮೆರವಣಿಗೆಯನ್ನು ಉದ್ಘಾಟಿಸಿ ದ ತಹಶೀಲ್ದಾರ್ ರಶ್ಮಿ. ಎಸ್.ಆರ್. ಅವರು ಬಳಿಕ ಮಾತನಾಡಿದ ಅವರು ಕಲಾವಿದನ ಜೊತೆ ಸರ್ವರಿಗೂ ಕಲೆಯ ಅಭಿರುಚಿ ನೀಡುತ್ತದೆ, ಈ ಸಂಸ್ಥೆ ರಾಷ್ಟ್ರ ಮಟ್ಟದಲ್ಲಿ ಹೆಸರುಪಡೆಯಲಿ ಎಂದು ಅವರು ಶುಭಹಾರೈಸಿದರು.
ಪ್ರತಿಭೆಗಳಿಗೆ ಇಂತಹ ವೇದಿಕೆಗಳು ಸಹಾಯ ಮಾಡುತ್ತದೆ. ತಾಳ್ಮೆಯಿಂದ ಕಲೆಯನ್ನು ಕಲಿಯಿರಿ ಎಂದು ಪುಟಾಣಿಗಳಿಗೆ ಕಿವಿಮಾತು ಹೇಳಿದರು.
ಚಿಣ್ಣರೋತ್ಸವ ಅದ್ಯಕ್ಷ ಆಶ್ಲೇಷ್ ಕೆ , ವಕೀಲ ಜಯರಾಮ್ ರೈ, ಮಾಜಿ ಪುರಸಭಾ ಸದಸ್ಯ ದೇವದಾಸ್ ಶೆಟ್ಟಿ, , ಬಾಲನಟಿ ಡಿ.ದೀಕ್ಷಾ ರೈ ಪುತ್ತೂರು, ಕಾಂತಾಡಿಗುತ್ತು ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು.
ಇದೇ ವೇದಿಕೆಯಲ್ಲಿ ಯಕ್ಷಗಾನ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ ಅವರಿಗೆ ಕರಾವಳಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಚಿಣ್ಣರ ಪ್ರಶಸ್ತಿ ಗೆ ಆಯ್ಕೆಯಾದ ಕು| ಜನ್ಯ ಪ್ರಸಾದ ಅನಂತಾಡಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕರಾವಳಿ ಕಲೋತ್ಸವ ದ ಸಂಚಾಲಕ
ಮೋಹನದಾಸ್ ಕೊಟ್ಟಾರಿ ಪ್ರಸ್ತಾವಿಕವಾಗಿ ಮಾತನಾಡಿದರು.
ಕರಾವಳಿ ಕಲೋತ್ಸವ ಇದರ ಅಧ್ಯಕ್ಷ ಸುದರ್ಶನ್ ಜೈನ್, ನಿವೃತ್ತ ಶಿಕ್ಷಕ ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.
ರಾಜೇಶ್ ಕೊಟ್ಟಾರಿ ಸನ್ಮಾನಪತ್ರ ವಾಚಿಸಿದರು.