Wednesday, April 10, 2024

ಅದ್ಬುತ ಕಾರ್ಯಕ್ರಮ, ದೆಹಲಿಯಲ್ಲೂ ಅನಾವರಣಗೊಳ್ಳಲಿ ; ಕಿರಣ್ ಬೇಡಿ

    ಚಿತ್ರ: ಕಿಶೋರ್ ಪೆರಾಜೆ

ಬಂಟ್ವಾಳ:   ಶ್ರೀರಾಮವಿದ್ಯಾಕೇಂದ್ರದ ವಿದ್ಯಾರ್ಥಿಗಳ ಸಾಮೂಹಿಕ ಪ್ರದರ್ಶನ ದೆಹಲಿಯ ಗಣರಾಜ್ಯೋತ್ಸವದಲ್ಲಿ  ಪ್ರದರ್ಶನಗೊಳ್ಳುವುದರ ಮೂಲಕ ಭಾರತೀಯ ಸಂಸ್ಕೃತಿ  ರಾಷ್ಟ್ರಮಟ್ಟದಲ್ಲಿ ಅನಾವರಣಗೊಳ್ಳಬೇಕು ಎಂದು  ಪುದುಚೇರಿಯ ಲಿಪ್ಟಿನೆಂಟ್ ಗವರ್ನರ್ ಡಾ ಕಿರಣ್ ಬೇಡಿ ಹೇಳಿದ್ದಾರೆ.  ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಭಾನುವಾರ ಸಂಜೆ ನಡೆದ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಪ್ರಧಾನ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು  ಇದೊಂದು ಅದ್ಬುತ ಕಾರ್ಯಕ್ರಮ, ನನ್ನ ಜೀವಮಾನದಲ್ಲಿ  ಇಂತಹ ಕಾರ್ಯಕ್ರಮ ನೋಡಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹೆಣ್ಣು ಮತ್ತು ಗಂಡು ಜೊತೆಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಮಾದರಿಯಾಗಿದೆ ಎಂದ ಅವರು ಈ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಿರುವ ಹೆತ್ತವರಿಗೂ ವಿಶೇಷ ಅಭಿನಂದನೆ ಸಲ್ಲಿಸಿದರು.ಈ ಶಾಲೆಯ ಸಂಸ್ಥಾಪಕರು,ಶಿಕ್ಷಕರು ಅಭಿನಂದನಾರ್ಹರು ಭಾರತೀಯ ಸಂಸ್ಕೃತಿಯ ಬಗ್ಗೆ ಹೆಮ್ನೆ ಎನಿಸುತ್ತದೆ.ಇಂತಹ ಕಾರ್ಯಕ್ರಮ ದೇಶದ ಎಲ್ಲಾ ಶಾಲೆಗಳಲ್ಲಿಯು ಅನುಷ್ಠಾನಗೊಳ್ಳಬೇಕೆ ಎಂದು ಆಶಯ ವ್ಯಕ್ತ ಪಡಿಸಿದರು     ಜಾರ್ಖಂಡಿನ ಉದ್ಯಮಿ ಒಂಪ್ರಕಾಶ್ , ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನೇತ್ರತಜ್ಙ ಡಾ. ಕೃಷ್ಣ ಪ್ರಸಾದ್, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ  ಬರೋಡಾದ ಶಶಿಧರ ಶೆಟ್ಟಿ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ದಯಾನಂದ ಕತ್ತಲಸಾರ್ ,ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ರಹೀಂ ಉಚ್ಚಿಲ್, ಸಿನಿಮಾ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಬಳ್ಳಾರಿ ರಾಜಶೇಖರ ಮುಲಾನಿ,ವಿಹಿಪಂ.ನ ಶ್ರೀಧರ್ ನಾಡಿಗರ್ ,ರಾಘವೇಂದ್ರಸರ್ವಂ,ಶಾಸಕ ಹರೀಶ್ ಪೂಂಜಾ ಅವರು ಮಾತನಾಡಿದರು. ಕೇಂದ್ರದ ಸಚಿವ ಡಿ.ವಿ. ಸದಾನಂದ ಗೌಡ,ರಾಜ್ಯದ ಸಚಿವೆ ಶಶಿಕಲಾ ಜೊಲ್ಲೆ, ಸಂಸದರಾದ ಉಮೇಶ್ ಜಾದವ್ ,ಕೆ.ಸಿ.ರಾಮಮೂರ್ತಿ, , ಶಾಸಕರುಗಳಾದ  ರಾಜೇಶ್ ನಾಯ್ಕ್ ಉಳಿಪಾಡಿಗುತ್ತು,ಅರವಿಂದ ಬೆಲ್ಲದ,ಪಿ.ರಾಜೀವ್ , ಪೂರ್ಣಿಮ  ಅಮೃತ ದೇಸಾಯಿ, ,ಅವಿನಾಶ್ ಜಾದವ್,ಉಮಾನಾಥ ಕೋಟ್ಯಾನ್ ,ಎಸ್.ಎಲ್.ಬೋಜೇಗೌಡ,ಅರುಣ್ ಜೋಶಿ ,ಡಿಜಿಪಿ ಮೋಹನ್ ಪ್ರಸಾದ್ ,  ಭ್ರಷ್ಟಾಚಾರ ನಿಗ್ರಹದಳದ ಐಜಿ ಚಂದ್ರಶೇಖರ್,ಜಿಲ್ಲಾ ಎಸ್ಪಿ  ಲಕ್ಷ್ನಿಪ್ರಸಾದ್ , ಸಿನೆಮಾ ನಟಿ ಪ್ರಣೀತಾ ಸುಭಾಷ್ ,ಮಾಜಿ ಸಚಿವ ನಾಗರಾಜ ಶೆಟ್ಟಿ,  ಕೃಷ್ಣಪಾಲೇಮಾರ್,  ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಕ್ಯಾ.ಗಣೇಶ್ ಕಾರ್ಣಿಕ್ , ರಾಷ್ಟ್ರ ಸೇವಿಕಾದ ಸೀತಕ್ಕ. ಆರ್ ಎಸ್ ಎಸ್ ಮುಖಂಡ ಶ್ರೀಧರ್ ನಾಡಿಗರ್ ,ನಿವೃತ್ತ ಪೊಲೀಸ್ ಅಧಿಕಾರಿ  ಜಯಂತ ಶೆಟ್ಟಿ,ಕಮಲಾ ಪ್ರಭಾಕರ ಭಟ್,ಟಿ.ಜಿ.ರಾಜಾರಾಮ ಭಟ್,ಸುರೇಶ್ ಶೆಟ್ಟಿ ಗುರ್ಮೆ,ಎ.ಎಂ.ಖಾನ್,  ಎ.ವಿ.ರವಿ,ಪ್ರಕಾಶ್ ದಾಸನೂರು,ಭರತ್ ಜೈನ್,ಮಂಜುನಾಥ್ ಜಾರ್ಖಂಡ್,  ಪ್ರದೀಪ್ ಕುಮಾರ್ ಕಲ್ಕೂರ, ಜಗದೀಶ್ ಶೇಣವ, ಪ್ರಭಾಕರ ಪ್ರಭು,ಪ್ರಸಾದ್ ಕುಮಾರ್  ಹಾಗು ಹಲವಾರು ಗಣ್ಯರು ಈ ಕ್ರೀಡೋತ್ಸವದಲ್ಲಿ ಭಾಗವಹಿಸಿದ್ದರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್  ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ವಸಂತ ಮಾಧವ ಪ್ರಸ್ತಾವಿಸಿ, ಸ್ವಾಗತಿಸಿದರು.
ವಿದ್ಯಾಕೇಂದ್ರ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಸಹಸಂಚಾಲಕ ರಮೇಶ್, ಪದವಿ ಕಾಲೇಜು ಪ್ರಿನ್ಸಿಪಾಲ್ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ  ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಚಂದ್ರಯಾನ 2 ಉಡಾವಣೆ, ಮಾಜಿ ಉಪಪ್ರದಾನಿ ಎಲ್.ಕೆ.ಆಡ್ವಾಣಿಯವರ  ಆಯೋಧ್ಯಾ ರಥಯಾತ್ರೆ, ಕರಸೇವಕರು ಆಯೋಧ್ಯೆಯಲ್ಲಿ ನಡೆಸಿರುವ ಹೋರಾಟ ಹಾಗೂ ರಾಮಮಂದಿರದ ಚಿತ್ರಣಗಳು ಭಾನುವಾರ  ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಮೈದಾನದಲ್ಲಿ ನಡೆದ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ವಿದ್ಯಾರ್ಥಿಗಳು ಸಾಮೂಹಿಕ ಪ್ರದರ್ಶನದಲ್ಲಿ ಸಾದರಪಡಿಸುವ ಮೂಲಕ ನೆರದ ಜನಸ್ತೋಮ ಹಾಗೂ ಗಣ್ಯಾತಿಗಣ್ಯರನ್ನು  ಬೆರಗುಗೊಳಿಸಿದರು. ಆರಂಭದಲ್ಲಿ ಸಮವಸ್ತ್ರಧಾರಿ ವಿದ್ಯಾರ್ಥಿಗಳಿಂದ  ಘೋಷ ತಾಳಕ್ಕೆ ಸರಿಯಾಗಿ ಆಕರ್ಷಕ ಪಥ ಸಂಚಲನದ ಬಳಿಕ ಕೋವಿ ಸಮತಾ ಪ್ರದರ್ಶನ,ಶಿಶುನೃತ್ಯ, ಘೋಷ್ ಪ್ರದರ್ಶನ,ಜಡೆಕೋಲಾಟ,ನಿಯುದ್ಧ, ಯೋಗಾಸನ,ತುಳು ಹಾಡಿಗೆ ಪ್ರಾಥಮಿಕ ಶಾಲಾವಿದ್ಯಾರ್ಥಿಗಳಿಂದ ಆಕರ್ಷಕ ಚಿತ್ತಾರ ಮೂಡಿಸುವ ವಿವಿಧರಚನೆಯ ಸಾಮೂಹಿಕ ನೃತ್ಯ ಪ್ರದರ್ಶನ ಕಣ್ಮನ ಸೆಳೆಯಿತು.ತದನಂತರ ಕಾಲೇಜ್ ವಿದ್ಯಾರ್ಥಿಗಳಿಂದ ಕೊಲ್ಮಿಂಚು ಪ್ರದರ್ಶನ,ತುಳು,ಕನ್ನಡ,ಹಿಂದಿ ಭಾಷೆಯ ಭಜನೆಗೆ ನೃತ್ಯ ಭಜನೆ,ಪ್ರೌಢ ಸಾಲಾ ವಿದ್ಯಾರ್ಥಿಗಳಿಂದ ದೀಪಧಾರಿಗಳಾಗಿ ವಿವಿಧ ರಚನೆ ಮಲ್ಲಕಂಬ, ತಿರುಗುವ ಮಲ್ಲಕಂಬದಲ್ಲಿ ವಿಶೇಷ ಯೋಗಾಸನ ಪ್ರದರ್ಶನ,ಘೊಇಷ್ ಟಿಕ್,ಟಿಕ್ ಪ್ರದರ್ಶನ,ಚಕ್ರ ಸಮತೋಲನ,ಬೆಂಕಿಯಲ್ಲಿ ಸಾಹಸ,ನೃತ್ಯವೈವಿಧ್ಯ, ಕೇರಳದ ಚೆಂಡೆ ವಾದನ,ಕಾಲ್ಷಕ್ರ,ಕೂಪಿಕಸಮತೋಲನ, ಸ್ಥರಘೋಷ್ ಪ್ರದರ್ಶನ ನೆರೆದ ಜನಸ್ತೋಮ ಹಾಗೂ  ಗಣ್ಯಾತಿಗಣ್ಯರನ್ನು ಮಂತ್ರಮುಗ್ದರನ್ನಾಗಿಸಿತು.                   ಸಂಸ್ಥೆಯ ಶಿಶುಮಂದಿರದಿಂದ ಹಿಡಿದು ಪದವಿ ವಿದ್ಯಾರ್ಥಿಗಳವರೆಗೆ 3399 ಪ್ರತಿಭೆಗಳು ಹೊನಲು ಬೆಳಕಿನ ಈ ಬೃಹತ್ ಸಂಗಮದಲ್ಲಿ ಭಾಗವಹಿಸಿದ್ದರು, ಇವರಲ್ಲಿ ಸುಮಾರು 40ರಷ್ಟು ಮಂದಿ ವಿಶೇಷಚೇತನ ಮಕ್ಕಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು.  ಸುಮಾರು 3 ತಾಸುಗಳ ಕಾಲ ನಿರಂತರವಾಗಿ ನಡೆದ ಈ ಕ್ರೀಡೋತ್ಸವದಲ್ಲಿ ವಿದ್ಯಾರ್ಥಿಗಳಿಂದ ಒಟ್ಟು  20 ವಿವಿಧ ಪ್ರದರ್ಶನಗಳು ಅನಾವರಣಗೊಂಡಿತು.

More from the blog

ಎ.14ರ ಪ್ರಧಾನಿ ಮೋದಿ ಸಮಾವೇಶ ರದ್ದು : ರೋಡ್ ಶೋದಲ್ಲಿ ಮಾತ್ರ ಭಾಗಿ

ಮಂಗಳೂರು: ಏಪ್ರಿಲ್ 14 ರಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಧಾನಿ ಮೋದಿ ಬೃಹತ್ ಸಮಾವೇಶಕ್ಕೆ ಆಯೋಜನೆ ಮಾಡಲಾಗಿತ್ತು. ಆದರೆ ಇದೀಗ ಕೊನೆ ಕ್ಷಣದಲ್ಲಿ ಈ ಸಮಾವೇಶ ರದ್ದುಪಡಿಸಲಾಗಿದೆ. ಏಪ್ರಿಲ್ 14ರಂದು ಮಂಗಳೂರಿನಲ್ಲಿ...

ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ….?​ ಇಲ್ಲಿದೆ ಮಾಹಿತಿ

ಬೆಂಗಳೂರು: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶೇ 81.15 ಮಂದಿ ಉತ್ತೀರ್ಣಗೊಂಡಿದ್ದಾರೆ. 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 1,28,448 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ...

ದ್ವಿತೀಯ ಪಿಯು ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ

ಬೆಂಗಳೂರು: ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ, ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ....

ಶಾಲಾ ಸಮುದಾಯದತ್ತ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಮಾಣಿ: ಶೈಕ್ಷಣಿಕ ವಿಚಾರಗಳ ಸಂಬಂಧಿತವಾದ ಒಳ್ಳೆಯ ಚಚೆ೯ಗಳು ಮೂಡಿಬಂದಾಗ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಕೆಲಸಗಳು ಮೂಡಲು ಸಾಧ್ಯ ‌. ಪ್ರತಿಯೊಬ್ಬ ವಿದ್ಯಾರ್ಥಿ, ಪೋಷಕರು,ತನ್ನ ಶಾಲೆಯ ಬಗ್ಗೆ ಒಳ್ಳೆಯ ಭಾವನೆ, ಸಂಬಂಧ ಇರಬೇಕು...