ಬಂಟ್ವಾಳ: ಡಿ.15 ರಂದು ಶ್ರೀ ರಾಮ ವಿದ್ಯಾಕೇಂದ್ರದಲ್ಲಿ ಹೊನಲು ಬೆಳಕಿನ ವಾರ್ಷಿಕ ಕ್ರೀಡೋತ್ಸವ ನಡೆಯಲಿದೆ ಎಂದು ಕಲ್ಲಡ್ಕ ಡಾ! ಪ್ರಭಾಕರ ಭಟ್ ಅವರು ಹೇಳಿದರು. ‌

ಅವರು ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರ ದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಈ ಸಂಸ್ಥೆ ಯ ಎಲ್ಲಾ ವಿಧ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸುವುದೇ ವಿಶೇಷ.
ಚಂದ್ರಯಾನ ಉಡಾವಣೆ, ಮತ್ತು ಆಯೋಧ್ಯೆ ಯ ವಿಷಯ ಬಗ್ಗೆ ಚಿತ್ರಣಗಳು, ಈ ಬಾರಿ ವಿಶೇಷವಾಗಿ ಸನ್ನಿವೇಶಗಳು ನಡೆಯಲಿವೆ ಎಂದು ಅವರು ತಿಳಿಸಿದರು. ‌
ಪುದುಚೇರಿಯ ಲಿಪ್ಟಿನೆಂಟ್ ಗವರ್ನರ್ ಡಾ ಕಿರಣ್ ಬೇಡಿ, ಕೇಂದ್ರ ದ ಮಂತ್ರಿಗಳಾದ ಸುರೇಶ್ ಅಂಗಡಿ, ಸದಾನಂದ ಗೌಡ, ಗೃಹ ಮಂತ್ರಿ ಬಸವರಾಜ್ ಬೊಮ್ಮಾಯಿ, ಸಚಿವೆ ಶಶಿಕಲಾ ಜೊಲ್ಲೆ, ಸಚಿವ ನಾಗೇಶ್ , ಉಸ್ತವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದರಾದ ನಳಿನ್ ಕುಮಾರ್, ಕರಡಿಸಂಗಣ್ಣ, ಸಹಿತ ಸಂಸದರು, ರಾಜ್ಯದ ಅನೇಕ ಶಾಸಕರು ಮಾಜಿ ಶಾಸಕರು ಮತ್ತು ಐ.ಪಿ.ಎಸ್. ಅಧಿಕಾರಿಗಳಾದ ಆಶಿತ್ ಮೋಹನ್ ಪ್ರಸಾದ್, ಸೀಮಂತ್ ಕುಮಾರ್ ಸಿಂಗ್, ಚಂದ್ರಶೇಖರ್ , ಪಿ.ಎಸ್. ಹರ್ಷ ಹಾಗೂ ಸಿನೆಮಾ ನಟರು ಈ ಕ್ರೀಡಾ ಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

73 ಮಕ್ಕಳಿಂದ 1980 ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಪ್ರಸ್ತುತ ಸುಮಾರು 15 ಎಕ್ರೆ ಪ್ರದೇಶದಲ್ಲಿ ಸುಸಜ್ಜಿತ ವಾದ ರಾಜ್ಯದ ಖಾಸಗಿ ಅತೀ ದೊಡ್ಡ ವಿದ್ಯಾ ಸಂಸ್ಥೆ ಯಾಗಿ ಬೆಳೆದಿದೆ.
ಚಾರಿತ್ರ್ಯ ನಿರ್ಮಾಣ, ಶಿಸ್ತು, ಸಾಮಾಜಿಕ ಪರಿವರ್ತನೆ ಯ ಮತ್ತು ಸಂಸ್ಕಾರ ದ ಕೇಂದ್ರ ವಾಗಿ ಬೆಳೆಯುತ್ತಿದೆ.
ವೈಶಿಷ್ಟ್ಯ ಪೂರ್ಣಸಂಸ್ಥೆ ಇದಾಗಿದ್ದು, ವರ್ಷ ಪೂರ್ತಿಯಾಗಿ ಧರ್ಮ, ಸಂಸ್ಕೃತಿ, ಕೃಷಿ ಆಧ್ಯತೆ,ಅಧ್ಯಯನದ ಚಿಂತನೆ ಯಲ್ಲಿ ಗುರುಕುಲ ಪದ್ಧತಿಯಲ್ಲಿ ಶಿಕ್ಷಣ ನೀಡಲಾಗುತ್ತಿದೆ ಎಂದು ಅವರು ವಿದ್ಯಾಸಂಸ್ಥೆ ಯ ಬಗ್ಗೆ ತಿಳಿಸಿದರು.

ಕನ್ನಡ ಶಾಲೆ ಉಳಿಯಬೇಕು
ಇಂಗ್ಲಿಷ್ ಭಾಷೆ ಅಂತರಾಷ್ಟ್ರೀಯ ಭಾಷೆಯಾಗಿ ಹೆಚ್ಚು ಸಮಯ ಉಳಿಯಲಲ್ಲ.
ಈ ದೇಶದಲ್ಲಿ ಹುಟ್ಟಿದ ಭಾಷೆ ರಾಷ್ಟ್ರೀಯ ಭಾಷೆ.
ಅಯಾಯ ಭಾಗದ ಭಾಷೆಯನ್ನು ಜೀವನದಲ್ಲಿ ಅಳವಡಿಸಕೊಂಡು ಮಾತನಾಡಿದಾಗ ಜೀವನ ಮೌಲ್ಯ ಗಳಿಗೆ ಸಮಸ್ಯೆ ಅಗುವುದಿಲ್ಲ. ದೇಶದ ಸಂಸ್ಕೃತಿ ಉಳಿಯಬೇಕಾದರೆ ಅಯಾಯ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಬೇಕಾಗಿದೆ ಎಂದು ಅವರು ತಿಳಿಸಿದರು.
ಭಾಷೆಗಳ ಜೊತೆಯಲ್ಲಿ ಸಂಸ್ಕೃತಿ ಬರುತ್ತದೆ.
ಸ್ವಾಭಿಮಾನದ ಪ್ರತೀಕವಾಗಿ ಭಾಷೆಯನ್ನು ಉಳಿಸಿ ಬೀಳದ ಬೇಕಾದ ಅನಿವಾರ್ಯತೆ ಇದೆ.
ಮೂಲ ಭಾಷೆಯಲ್ಲಿ ಶಿಕ್ಷಣ ನೀಡಿದಾಗ ಮಗುವಿನ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here