ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ಪುತ್ತೂರು ತೆಂಕಿಲದ ಆವರಣದಲ್ಲಿ ನವೆಂಬರ್ ೩೦30 ಮತ್ತು ಡಿಸೆಂಬರ್ 1ರಂದು ನಡೆದ ’ಅನ್ವೇಷಣಾ-2019’ ರಾಜ್ಯ ಮಟ್ಟದ ಅಗ್ರಿ ಟಿಂಕರಿಂಗ್ ಫೆಸ್ಟನಲ್ಲಿ ಶ್ರೀರಾಮ ಪ್ರೌಢ ಶಾಲೆಯಿಂದ 24, ಶ್ರೀರಾಮ ಪ್ರಾಥಮಿಕ ವಿಭಾಗದಿಂದ 17 ಹಾಗೂ ಪಿ.ಯು.ಸಿ ವಿಭಾಗದಿಂದ 6 ವಿದ್ಯಾರ್ಥಿಗಳು ಒಟ್ಟು 28 ಮಾದರಿಗಳನ್ನು ವಿವಿಧ ವಿಭಾಗಗಳಲ್ಲಿ ಪ್ರದರ್ಶಿಸಿರುತ್ತಾರೆ.


ಹೊಸ ಬಗೆಯ ಕೃಷಿ ಯಂತ್ರೋಪಕರಣಗಳಲ್ಲಿ ಪಶುಸಂಗೋಪನೆಗೆ ಸಹಾಯವಾಗುವ ದನಗಳಿಗೆ ಹಸಿ ಹುಲ್ಲನ್ನು ಕೆತ್ತುವ ಯಂತ್ರದ ಮಾದರಿಯನ್ನು ತಯಾರಿಸಿ ಜೂನಿಯರ್ ವಿಭಾಗದಲ್ಲಿ 9ನೇ ತರಗತಿಯ ರಂಜಿತ್ ಮತ್ತು ಸಬ್ ಜೂನಿಯರ್ ವಿಭಾಗದಲ್ಲಿ 7ನೇ ತರಗತಿಯ ಖುಷಿ ಮತ್ತು ಚಿನ್ಮಯಿ ತಯಾರಿಸಿರುವ ’ಸ್ಮಾರ್ಟ್ ಶೆಡ್’ ಮಾದರಿಯಲ್ಲಿ ದನದ ಕೊಟ್ಟಿಗೆಯಲ್ಲಿ ಸ್ವಯಂಚಾಲಿತ ಯಂತ್ರದ ಸಹಾಯದಿಂದ ಸಮಯಕ್ಕೆ ಸರಿಯಾಗಿ ದನಗಳಿಗೆ ಮೇವನ್ನು ಒದಗಿಸುವ ಮಾದರಿಯು ಪ್ರಥಮ ಬಹುಮಾನವನ್ನು ಪಡೆದಿರುತ್ತದೆ.
ಹಾಗೂ 8 ನೇ ತರಗತಿಯ ವಿಘ್ನೇಶ್ ಮತ್ತು ಚರಿತ್ ಮಳೆ ಸಂವೇಧಿ ಸೂಚಕವನ್ನು ಬಳಸಿ ತಯಾರಿಸಲಾದ ’ರೂಫ್ ಕಂಟ್ರೋಲ್ಡ್ ಅರೆಕಾ ಡ್ರೈಯರ್’ ಮಾದರಿಯು ಲಘು ಉದ್ಯೋಗ ಭಾರತಿ ಸಂಸ್ಥೆಯ ಕಡೆಯಿಂದ ಮೆಂಟರ್‌ಶಿಪ್ ಮಾನ್ಯತೆಯನ್ನು ಪಡೆದಿದೆ.
ಸಾರ್ವಜನಿಕ ವಿಭಾಗದಲ್ಲಿ ಕೃಷಿಯಲ್ಲಿ ಹೊಸ ಅವಿಷ್ಕಾರಗಳ ವಿಭಾಗದಲ್ಲಿ ಸಂಸ್ಥೆಯ ಶಿಕ್ಷಕಿ ಗಾಯತ್ರಿ ಮಾತಾಜಿ ಇವರು ಬಾಳೆಗೊನೆಯನ್ನು ಪ್ರಾಣಿಗಳಿಂದ ಸಂರಕ್ಷಿಸುವ ಮಾದರಿಯನ್ನು ಪ್ರದರ್ಶಿಸಿ ಜನಮನ್ನಣೆ ಮತ್ತು ಬೇಡಿಕೆಯನ್ನು ಪಡೆದಿರುತ್ತಾರೆ.
ಮಕ್ಕಳಲ್ಲಿನ ಸೃಜನಾತ್ಮಕ ಶಕ್ತಿಗೆ ನಾವೀನ್ಯ ರೂಪ ಕೊಡಲು ಶ್ರೀರಾಮ ವಿದ್ಯಾಕೇಂದ್ರದ ’ಅಟಲ್ ಟಿಂಕರಿಂಗ್ ಲ್ಯಾಬ್’ ನಿರಂತರವಾಗಿ ಸಹಕಾರ ಒದಗಿಸುತ್ತದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here