Thursday, October 26, 2023

ಕೆ.ಡಿ.ಪಿ.ಸಭೆ

Must read

ಬಂಟ್ವಾಳ: ತಾಲೂಕು ಮಟ್ಟದ ಅಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನೆ ಸಭೆ ತಾ.ಪಂ.ನ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ತಾ.ಪಂ.ಅಧ್ಯಕ್ಷ. ಚಂದ್ರಹಾಸ ಕರ್ಕೇರ ಅವರ ಅಧ್ಯಕ್ಷ ತೆಯಲ್ಲಿ ಗುರುವಾರ ನಡೆಯಿತು.

ಹೊಸ ಸರಕಾರಿ ಬಸ್ ಗಳ ಕೊರತೆಯಿಂದ ಕೆಲವು ಪ್ರದೇಶಗಳಿಗೆ ಬಸ್ ಸಂಚಾರಕ್ಕೆ ಅನಾನುಕೂಲ ವಾಗುತ್ತಿದೆ ಎಂದು ಕೆ.ಎಸ್.ಆರ್.ಟಿ.ಸಿ. ಡಿಪೋ.ಅಧಿಕಾರಿ ಸಭೆಯ ಗಮನಕ್ಕೆ ತಂದರು.
ಶಿಕ್ಷಣ ಇಲಾಖೆಯಿಂದ ಪುಸ್ತಕ ಸೈಕಲ್, ಶೂ ಇನ್ನಿತರ ಪ್ರಮುಖ ಮೂಲಭೂತ ಸೌಕರ್ಯಗಳನ್ನು ಪೂರೈಕೆ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಸಭೆಗೆ ತಿಳಿಸಿದರು. ‌
ಪುರುಷರಿಗೆ ಸಂತಾನಹರಣ ಚಿಕತ್ಸೆ ಮೂರು ಪ್ರಕರಣಗಳು ಪ್ರಥಮ ಬಾರಿಗೆ ಬಂಟ್ವಾಳದಲ್ಲಿ ದಾಖಲಾಗಿದೆ ಎಂದು ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ದೀಪಪ್ರಭು ಸಭೆಯಲ್ಲಿ ತಿಳಿಸಿದರು.
ಲಸಿಕೆ, ಅರೋಗ್ಯ ಇಲಾಖೆಗೆ ಸಂಬಂಧಿಸಿದ ಇನ್ನಿತರ ಕಾರ್ಯಕ್ರಮಗಳನ್ನು ಅಭಿಯಾನದ ರೀತಿಯಲ್ಲಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಆಶ್ರಮ ಶಾಲಾ ಮಕ್ಕಳಿಗೆ ಊಟ ಮಾಡುವ ಸಂದರ್ಭದಲ್ಲಿ ಕುಡಿಯುವ ನೀರು ನೀಡುವ ಕ್ರಮ ಕೈಗೊಳ್ಳಲು ಸಮಾಜ ಕಲ್ಯಾಣ ಇಲಾಖೆ ಯ ಅಧಿಕಾರಿಗೆ ಇ.ಒ.ರಾಜಣ್ಣ ಸಭೆಯಲ್ಲಿ ತಿಳಿಸಿದರು.
ತಾಲೂಕನಲ್ಲಿ 50 ಅಂಗನವಾಡಿ ರಿಪೇರಿ ಮಾಡಲು ಹಣ ಬಿಡುಗಡೆ ಯಾಗಿದ್ದು , ಅದರಲ್ಲಿ 48 ಅಂಗನವಾಡಿ ಗಳ ರಿಪೇರಿ ಕಾರ್ಯ ಇನ್ನೂ ಕೂಡಾ ಶುರುವಾಗಿಲ್ಲ, ಶೀಘ್ರವಾಗಿ ಈ ಕಾಮಗಾರಿ ನಡೆಸುವಂತೆ ಅಧ್ಯಕ್ಷ ರ ಗಮನಕ್ಕೆ ಬಂಟ್ವಾಳ ಸಿ.ಡಿ.ಪಿ.ಒ.ಇಲಾಖೆಯ ಹಿರಿಯ ಮೇಲ್ವಿಚಾರಕಿ ಗಾಯತ್ರಿ ಕಂಬಳಿ ತಂದರು.
ಮಳೆಗಾಲ ಆರಂಭದಲ್ಲಿ ಯೇ ತೋಟಗಾರಿಕಾ ಇಲಾಖೆಯಿಂದ ಗಿಡಗಳನ್ನು ರೈತರಿಗೆ ನೀಡುವ ರೀತಿಯಲ್ಲಿ ಕಾರ್ಯಕ್ರಮ ಗಳನ್ನು ಹಾಕಿಕೊಳ್ಳುವ ಪ್ರಯತ್ನ ಮಾಡಲು ಇ.ಒ.ರಾಜಣ್ಣ ತೋಟಗಾರಿಕಾ ಇಲಾಖಾ ಅಧಿಕಾರಿ ದಿನೇಶ್ ಅವರಿಗೆ ತಿಳಿಸಿದರು.
ತಾ.ಪಂ.ನ ಸರ್ವೇ ಈಗಾಗಲೇ ನಡೆಸಲಾಗಿದೆ, ಉಳಿದಂತೆ ತಾಲೂಕಿನ ಎಲ್ಲಾ ಇಲಾಖೆಗಳ ಜಮೀನಿನ ಸರ್ವೇ ಕಾರ್ಯ ನಡೆಸಿ ಆರ್.ಟಿ.ಸಿ.ಗಳನ್ನು ಶೀಘ್ರವಾಗಿ ನೀಡಬೇಕು ಎಂದು ಇ.ಒ.ರಾಜಣ್ಣ ಕಂದಾಯ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ವಿ. ಶೆಟ್ಟಿ ಉಪಸ್ಥಿತರಿದ್ದರು.

More articles

Latest article