ವಿಟ್ಲ: ವಿಟ್ಲ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಬಂಟ್ವಾಳ ತಾಲೂಕು ವ್ಯಾಪ್ತಿಯ 7 ಶಾಲೆಗಳ ವಿದ್ಯಾರ್ಥಿಗಳಿಂದ ಸಾಮಾಜಿಕ ಸಂದೇಶಗಳೊಂದಿಗೆ ಜಾಗೃತಿ ಮೂಡಿಸುವ ಕಿರು ನಾಟಕಗಳು ಪ್ರದರ್ಶನಗೊಂಡವು.

ಕುಳ ಗ್ರಾಮದ ಓಜಾಲ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸ್ವಚ್ಛತೆ, ಶಿಕ್ಷಣ, ಭ್ರಷ್ಟಾಚಾರದ ವಿಷಯದಡಿಯಲ್ಲಿ ಜಾಗೃತಿ ಮೂಡಿಸುವ ರಾಣಿ ಚೆನ್ನಮ್ಮ ನಾಟಕವನ್ನು ಪ್ರದರ್ಶಿಸಿದರು. ಕಂಬಳಬೆಟ್ಟು ಶಾಲೆಯ ಮಕ್ಕಳಿಂದ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆಯಿಂದ ಭೂಮಿ, ಗಾಳಿ, ನೀರು ಮಲಿನವಾಗುತ್ತಿರುವ ಕುರಿತು ’ಪ್ಲಾಸ್ಟಿಕ್ ಭೂತ’ ನಾಟಕದ ಮೂಲಕ ಬೆಳಕು ಚೆಲ್ಲಿದರು. ಪಡಿಬಾಗಿಲು ಶಾಲೆಯ ವಿದ್ಯಾರ್ಥಿಗಳು ಕೈಗಾರಿಕೋದ್ಯಮದ ಹೆಸರಲ್ಲಿ ಆಹುತಿಯಾಗುತ್ತಿರುವ ಸಮೃದ್ಧ ಕೃಷಿಭೂಮಿ ಒತ್ತುವರಿಯಾಗುತ್ತಿರುವುದನ್ನು ಪರಿಸರ ನಾಶ ನಾಟಕದಲ್ಲಿ ತೋರಿಸಿಕೊಟ್ಟು ಎಚ್ಚರಿಕೆ ಮೂಡಿಸಿದರು.
ವಿಟ್ಲ ಮಾದರಿ ಶಾಲೆಯ ವಿದ್ಯಾರ್ಥಿಗಳಿಂದ ತನ್ನವರನ್ನು, ನೆಲವನ್ನು ಪ್ರೀತಿಸುವ ಹೆತ್ತವರನ್ನು ಅನಾಥವಾಗಿ ರಸ್ತೆಗೆ ದಬ್ಬುವ ಮಕ್ಕಳನ್ನು ಚಿತ್ರೀಕರಿಸುವ ಕೋಲು ಮಿಠಾಯಿ ಪ್ರದರ್ಶಿಸಿದರು. ಕಡೇಶ್ವಾಲ್ಯ ಶಾಲೆಯ ವಿದ್ಯಾರ್ಥಿಗಳು ಶ್ರೇಷ್ಠ ಮಿತ್ರತ್ವವನ್ನು ಪ್ರತಿನಿಧಿಸುವ ಕೃಷ್ಣ ಸುಧಾಮರ ಪೌರಾಣಿಕ ನಾಟಕವನ್ನು ಪ್ರದರ್ಶೀಸಿದರೆ, ದರು. ಮೂಡಂಬೈಲು ಶಾಲೆಯ ವಿದ್ಯಾರ್ಥಿಗಳು ಏಕಾಗ್ರತೆಯಿದ್ದಾಗ ಮಾತ್ರ ಯಾವುದೇ ಉದ್ದೇಶಿತ ಕಾರ್ಯ ಸಾಧಿಸಬಹುದು, ಏಕಾಗ್ರತೆ ಇಲ್ಲದಾಗ ಮರ್ಕಟಗಳ ಮನಸ್ಸಿನಂತಾಗುತ್ತದೆ ಎಂದು ’ಮಂಗಗಳ ಉಪವಾಸ’ ನಾಟಕದಲ್ಲಿ ಹಾಸ್ಯಮಿಶ್ರಿತವಾಗಿ ತೋರಿಸಿಕೊಟ್ಟರು. ಕಾಡುಮಠ ಶಾಲೆಯ ವಿದ್ಯಾರ್ಥಿಗಳು ಸಮಾಜದಲ್ಲಿ ಹಿಂದೆ ನಡೆಯುತ್ತಿದ್ದ ಹೆಣ್ಣು ಗಂಡು ಲಿಂಗ ತಾರತಮ್ಯ ತೋರಿಸುವ ನಾಟಕವನ್ನು ಪ್ರದರ್ಶಿಸಿದರು.
ನೀರ್ಕಜೆ ಶಾಲೆಯ ಭವಿಷ್ಯ ಸ್ವಾಗತಿಸಿದರು. ಪಡಿಬಾಗಿಲು ಶಾಲೆಯ ಆದರ್ಶಿನಿ ವಂದಿಸಿದರು. ಕನ್ಯಾನ ಶಾಲೆಯ ಸುಶ್ಮಿತಾ ಬಿ. ಕಾರ್ಯಕ್ರಮ ನಿರೂಪಿಸಿದರು.
ಚಿತ್ತ ಚಿತ್ತಾರ:
ಬಂಟ್ವಾಳ ತಾಲೂಕಿನ ಕವಿಗಳು ಬರೆದು ಪ್ರಕಟಿಸಿದ ಹಾಡನ್ನು ಆಧರಿಸಿ ಏಕಕಾಲಕ್ಕೆ ಹಾಡುವುದು, ಅಭಿನಯಿಸುವುದು, ಚಿತ್ರ ಬಿಡಿಸುವ ಕಾರ್ಯಕ್ರಮದಲ್ಲಿ ೮ ತಂಡಗಳು ಭಾಗವಹಿಸಿದರು.
ನೀರ್ಕಜೆ, ಪೆರುವಾಯಿ, ಪುಣಚ ಶ್ರೀದೇವಿನಗರ, ಸೂರ್ಯ, ಕಾಡುಮಠ, ಪಡಿಬಾಗಿಲು, ಮಂಚಿ, ಚಂದಳಿಕೆ, ಕಲ್ಲಂಗಳ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದರು.
ಕಂಬಳಬೆಟ್ಟು ಶಾಲೆಯ ಅಲಿಮತ್ ಸಹದಿಯಾ ಸ್ವಾಗತಿಸಿದರು. ಅಡ್ಯನಡ್ಕ ಶಾಲೆಯ ಆಶಿತ ವಂದಿಸಿದರು. ಕೇಪು ಶಾಲೆಯ ವಿಶಿತಾ ಉಕ್ಕಿನಡ್ಕ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here