ಬಂಟ್ವಾಳ, ಡಿ. ೨: ಕೋಳಿ ತ್ಯಾಜ್ಯವನ್ನು ಸಂಗ್ರಹಿಸಿ ನಾಯಿಯ ಆಹಾರ ತಯಾರಿಸುವ ಕೈಗಾರಿಕೆಯೊಂದರಿAದ ತ್ಯಾಜ್ಯವನ್ನು ಹೊರ ಬಿಡುವುದರಿಂದ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಅಽಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ ಘಟನೆ ಸೋಮವಾರ ಚೇಳೂರು ಗ್ರಾಮದ ತಗ್ಗು ಅಗಲಗುರಿಯಲ್ಲಿ ನಡೆದಿದೆ.
ಈ ಕೈಗಾರಿಕೆಗೆ ಮಾಲಕರು ಪರಿಸರ ನಿಯಂತ್ರಣ ಮಂಡಳಿ ಹಾಗೂ ಸಜೀಪಪಡು ಗ್ರಾ.ಪಂ.ನಿAದ ಅನುಮತಿ ಪಡೆದಿದ್ದರೂ, ನಿಯಮದ ಪ್ರಕಾರ ತ್ಯಾಜ್ಯವನ್ನು ಶುದ್ದೀಕರಿಸದೆ ಹೊರಗೆ ಬಿಡುತ್ತಿದ್ದರು. ಇದರಿಂದ ತೋಡಿನ ನೀರು ಕಲುಷಿತವಾಗುವ ಜತೆಗೆ ದರ್ನಾತದಿಂದ ಕುಳಿತುಕೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆರೋಗ್ಯ ಸಚಿವರು ಸೇರಿದಂತೆ ಸಂಬAಧಪಟ್ಟವರಿಗೆ ದೂರು ನೀಡಿದ್ದರು.
ಹೀಗಾಗಿ ಸೋಮವಾರ ತಹಶೀಲ್ದಾರ್ ರಶ್ಮಿ ಎಸ್.ಆರ್, ಟಿಎಚ್‌ಒ ಡಾ| ದೀಪಾ ಪ್ರಭು, ಸಜೀಪಪಡು ಅಭಿವೃದ್ಧಿ ಅಽಕಾರಿ ಶ್ವೇತಾ ಹಾಗೂ ಗ್ರಾಮಕರಣಿಕ ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟಕದಿಂದ ತ್ಯಾಜ್ಯ ಹೊರ ಬಿಡುವ ಕುರಿತು ಗಮನಕ್ಕೆ ಬಂದಿದ್ದು, ಸ್ಥಗಿತಗೊಳಿಸಲು ಸೂಚಿಸಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದ್ದು, ನಾವು ಗ್ರಾ.ಪಂ.ಗೆ ವರದಿ ನೀಡಲಿದ್ದೇವೆ ಎಂದು ಟಿಎಚ್‌ಓ ಡಾ| ದೀಪಾ ಪ್ರಭು ತಿಳಿಸಿದ್ದಾರೆ.