ಮಂಗಳೂರು : ಕೆಎಸ್‌ಆರ್‌ಟಿಸಿ ಮಂಗಳೂರಿನಿಂದ ಹೈದಾರಾಬಾದ್ ಪ್ರಯಾಣಕ್ಕೆ ಅಂಬಾರಿ ಡ್ರೀಮ್ ಕ್ಲಾಸ್ ಮಲ್ಟಿ ಆಯಕ್ಸಿಲ್ ಎಸಿ ಸ್ಲೀಪರ್ ಕ್ಲಾಸ್ ಎರಡು ಬಸ್ಸುಗಳಿಗೆ ಸೋಮವಾರ ಚಾಲನೆ ನೀಡಿದರು.
ಅಂಬಾರಿ ಡ್ರೀಮ್ ಕ್ಲಾಸ್, ರಾಜಹಂಸ, ವೋಲ್ವೋ ಸೇರಿದಂತೆ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗಕ್ಕೆ ಮಾರ್ಚ್‌ನೊಳಗೆ ಮತ್ತೆ 50 ಹೊಸ ಬಸ್ಸುಗಳ ಸೇರ್ಪಡೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಇಂದು ಪ್ರಯಾಣ ಆರಂಭಿಸಿರುವ ಎರಡು ಅಂಬಾರಿ ಡ್ರೀಮ್‌ಕ್ಲಾಸ್ ಮಲ್ಟಿ ಆಯಕ್ಸಿಲ್ ಎಸಿ ಸ್ಲೀಪರ್ ಬಸ್ಸುಗಳಿಂದ ಮಂಗಳೂರಿ ನಿಂದ ಹೈದರಾಬಾದ್ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಮುಂದೆ ಸೇರ್ಪಡೆಗೊಳ್ಳಲಿರುವ ಇನ್ನೆರಡು ಹೊಸ ಅಂಬಾರಿ ಡ್ರೀಮ್ ಕ್ಲಾಸ್ ಮಂಗಳೂರಿನಿಂದ ಅಂತಾರಾಜ್ಯ ಪ್ರಯಾಣವನ್ನು ಇನ್ನಷ್ಟೇ ನಿಗದಿಪಡಿಸೇಕಾಗಿದೆ ಎಂದು ಅವರು ಹೇಳಿದರು.
ಶಾಸಕ ವೇದವ್ಯಾಸ ಕಾಮತ್, ಕೆಎಆಸ್‌ಆರ್‌ಟಿಸಿ ಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಅರುಣಾ ಎಸ್.ಎನ್, ವಿಭಾಗೀಯ ಸಂಚಾರಾಧಿಕಾರಿ (ಪ್ರಭಾರ) ಇಸ್ಮಾಯಿಲ್ ಮೊದಲಾದವರು ಉಪಸ್ಥಿತರಿದ್ದರು.
ಅಂಬಾರಿ ಡ್ರೀಮ್ ಕ್ಲಾಸ್ ಮಲ್ಟಿ ಆಯಕ್ಸಿಲ್ ಎಸಿ ಸ್ಲೀಪರ್ ಬಸ್ಸಿನಲ್ಲಿ ಆರಾಮದಾಯಕ ಪ್ರಯಾಣಕ್ಕಾಗಿ ವೋಲ್ವೋ ಮಲ್ಟಿ ಆಕ್ಸಲ್ ಸ್ಲೀಪರ್, ಸುಲಭ ಚಾಲನೆಗಾಗಿ ವಿದ್ಯುನ್ಮಾನ ನಿಯಂತ್ರಿತ ಸಸ್ಪೆನ್ಷನ್ಸ್, ಪ್ರತ್ಯೇಕ ಮೊಬೈಲ್ ಚಾರ್ಜಿಂಗ್ ಪಾಯಿಂಟ್ಸ್, ನೀರಿನ ಬಾಟಲಿಗಾಗಿ ಸ್ಥಳ, ವಿಹಂಗಮ ನೋಟಕ್ಕಾಗಿ ವಿಶಾಲವಾದ ಕಿಟಕಿಗಳು, ಮೇಲ್ಛಾವಣಿ ಕಿಟಕಿ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ತುರ್ತು ನಿರ್ಗಮನ ಬಾಗಿಲುಗಳು ಇರುತ್ತದೆ.
ಮಂಗಳೂರಿನಿಂದ ಹೈದಾರಾಬಾದ್‌ಗೆ ಪ್ರತಿ ಪ್ರಯಾಣಿಕರಿಗೆ ಪ್ರಯಾಣ ದರ 1400 ರೂ. ನಿಗದಿ ಪಡಿಸಲಾಗಿದೆ.