ಬೆಳ್ತಂಗಡಿ : ಪತಿ ಪತ್ನಿಯನ್ನು ಕೊಲೆಗೈದ ಘಟನೆ ತಾಲೂಕಿನ ಗೇರುಕಟ್ಟೆಯ ಕಜೆ ಎಂಬಲ್ಲಿ ನಡೆದಿದ್ದು, ಈ ಘಟನೆ ಇಂದು ಮಧ್ಯಾಹ್ನ ಬೆಳಕಿಗೆ ಬಂದಿದೆ. ಆರೋಪಿಯ ಹೆಸರು ಉಮ್ಮರ್ ಫಾರೂಕ್ ಎಂದು ತಿಳಿದು ಬಂದಿದೆ. ಆತನ ಪತ್ನಿ ಮೂಲತಃ ಪುತ್ತೂರು ಸಾಲ್ಮರದ ತಸ್ಲೀಮ (25) ಮೃತರು. ತಸ್ಲೀಮ ಅವರ ಮೃತದೇಹ ಶೌಚಾಲಯದಲ್ಲಿ ಪತ್ತೆಯಾಗಿದ್ದು, ದೇಹದಲ್ಲಿ ಅಲ್ಲಲ್ಲಿ ಗಾಯದ ಗುರುತುಗಳಿವೆ ಎಂದು ತಿಳಿದುಬಂದಿದೆ. ಗಾಂಜಾ ವ್ಯಸನಿಯಾಗಿದ್ದ ಉಮರ್ ಫಾರೂಕ್ ಗೆ ಈಕೆ ಮೂರನೇ ಪತ್ನಿ ಎನ್ನಲಾಗುತ್ತಿದೆ. ಈಕೆಗೆ ನಾಲ್ಕು ವರ್ಷದ ಒಂದು ಹೆಣ್ಣು, ಒಂದು ವರ್ಷ ನಾಲ್ಕು ತಿಂಗಳ ಒಂದು ಗಂಡು ಮಗುವಿದೆ. ಈತನ ಮೇಲೆ ಗಾಂಜಾ ಪ್ರಕರಣ, ವರದಕ್ಷಿಣೆ ಕಿರುಕುಳ ಸೇರಿದಂತೆ ಬೆಳ್ತಂಗಡಿ, ವೇಣೂರು, ಚಿಕ್ಕಮಗಳೂರು ಠಾಣೆಗಳಲ್ಲಿ ಏಳು ಪ್ರಕರಣ ದಾಖಲಾಗಿದ್ದು ರೌಡಿ ಶೀಟರ್ ಎಂದು ತಿಳಿದು ಬಂದಿದೆ. ಈತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜೈಲಿನಿಂದ ಕೆಲ ದಿನಗಳ ಹಿಂದೆಯಷ್ಟೇ ಜಾಮೀನು ಮೇಲೆ ಹೊರಬಂದಿದ್ದ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.