ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್(ರಿ) ಬಂಟ್ವಾಳ ಬಿಸಿರೋಡ್ ವಲಯ ಹಾಗೂ ಸೆಲ್ಕೋ ಸೋಲಾರ್ ಲೈಟ್, ಫ್ರೈ. ಲಿ ಇದರ ಜಂಟಿ ಆಶ್ರಯದಲ್ಲಿ ಬಿಸಿರೋಡ್ ವಲಯದ ಕುರಿಯಾಳ ಒಕ್ಕೂಟದ ದುರ್ಗಾ ನಗರ ದ ಸಮಾಜ ಮಂದಿರದಲ್ಲಿ ಸೋಲಾರ್ ಜೀವನದಾರಿತ ಸ್ವಉದ್ಯೋಗ ಮಾಹಿತಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಕುರಿಯಾಳ ಒಕ್ಕೂಟ ಹಾಗೂ ಬಿಸಿರೋಡ್ ವಲಯದ ಅಧ್ಯಕ್ಷ ಶೇಖರ ಸಾಮಾನಿ ಉದ್ಘಾಟಿಸಿ ಶ್ರೀ ಕ್ಷೇ. ಧ. ಗ್ರಾ. ಯೋಜನೆ ಕೇವಲ ಸಂಘದ ಸದಸ್ಯರಿಗೆ ಸಾಲದ ವ್ಯವಹಾರ ಮಾತ್ರ ಅಲ್ಲದೆ ಸಂಘದ ಸದಸ್ಯರು ಸಂಘಕ್ಕೆ ಸೇರಿ ಸ್ವಂತ ಉದ್ಯೋಗ ಮಾಡಿ ಸ್ವಾವಲಂಬಿಗಳಾಗಿ ಬದಕಲು ಅವಕಾಶ ಮಾಡಿ ಕೊಡಲು ಹಲವಾರು ಉತ್ತಮ ಮಾಹಿತಿ ಕಾರ್ಯಕ್ರಮಗಳನ್ನು ನೀಡುತಿದ್ದು, ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳಲು ವಿನಂತಿಸಿದರು. ತಾಲೂಕಿನ ಕೃಷಿ ಮೇಲ್ವಿಚಾರಕ ಜನಾರ್ದನ ಅವರು ಸೋಲಾರ್ ಉಪಯೋಗಿಸುವುದರಿಂದ ಆಗುವ ಪ್ರಯೋಜನದ ಬಗ್ಗೆ ತಿಳಿಸಿದರು. ಸೆಲ್ಕೋ ಸೋಲಾರ್ ನ ರವೀನಾ ಕುಲಾಲ ಅವರು ಸೋಲಾರ್ ನಲ್ಲಿ ಕೇವಲ ಲೈಟ್ ಮಾತ್ರ ಅಲ್ಲ 61 ರೀತಿಯ ಉಪಯೋಗವಿದೆ. ಸೋಲಾರ್ ಜೆರಾಕ್ಸ್ ಮಿಶನ್ ಟೈಲರ್, ಮಿಶನ್, ಪಂಪ್, ಮಡಕೆ ತಯಾರಿ, ಕತಿ ರೆಡಿ ಮಾಡಲು ಹೀಗೆ ಹಲವಾರು ಸೋಲಾರ್ ನ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು. ವಲಯದ ಮೇಲ್ವಿಚಾರಕ ಕೇಶವ ಕೆ. ಕಾರ್ಯಕ್ರಮ ಅನುಷ್ಠಾನ ದ ಬಗ್ಗೆ ಮಾಹಿತಿ ನೀಡಿದರು ಈ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿ ನಾಗೇಶ್ ಉಪಸ್ಥಿತಿರಿದ್ದರು. ಒಕ್ಕೂಟದ ಸೇವಾ ಪ್ರತಿನಿಧಿ ಅಮಿತಾ ಸ್ವಾಗತಿಸಿ, ವಂದಿಸಿದರು.