


ಬಂಟ್ವಾಳ: ಶ್ರೀ ರಾಮ ಭಜನಾ ಮಂದಿರ ದೈಪಲದಲ್ಲಿ ಶ್ರೀ ಕಟೀಲು ದೇವಿಯ ಬ್ರಹ್ಮಕಲಶದ ಅಂಗವಾಗಿ ನಡೆಯುವ ಕೊಟಿ ಜಪ ಯಜ್ಞ ಯಾಗದ ಸಮಾಲೋಚನ ಸಭೆಯಲ್ಲಿ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿಯರು ಆಶೀವ೯ಚನ ನೀಡಿದರು. ಶ್ರೀ ರಾಮ ಮಂದಿರದ ದಶಮಾನೋತ್ಸವದ ಧಾಮಿ೯ಕ ಕಾಯ೯ಕ್ರಮಕ್ಕೆ ಸ್ವಾಮಿಜೀಯವರ ಗೌರವಧ್ಯಕ್ಷತೆಯೊಂದಿಗೆ ಸಮಿತಿ ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಎ. ನೇಮಿರಾಜ್ ಶೆಟ್ಟಿ ಕೊಡಂಗೆ ಇವರನ್ನು ಸವಾ೯ನುಮತದಿಂದ ಅಯ್ಕೆ ಮಾಡಲಾಯಿತು ಹಾಗೂ ಸೀತಾಮಾತ ಮಹಿಳಾ ಮಂಡಳಿಯನ್ನು ರಚಿಸಲಾಯಿತು.


