Wednesday, October 18, 2023

ಪಠ್ಯದ ವಿಷಯದ ಜೊತೆಯಲ್ಲಿ ಶಾಲಾ ಕಾರ್ಯಕ್ರಮ ಗಳಲ್ಲಿ ಮಕ್ಕಳ ಪೋಷಕರು ಭಾಗವಹಿಸಿ : ಯು‌.ಟಿ.ಖಾದರ್

Must read

ಬಂಟ್ವಾಳ: ಮಕ್ಕಳ ಪೋಷಕರು ವಾರ್ಷಿಕೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಜೊತೆಗೆ ಶಾಲಾಪಠ್ಯ ವಿಚಾರಕ್ಕೆ ಸಂಬಂಧಿಸಿದ ಸಭೆಗಳಲ್ಲಿಯೂ ಸಹಭಾಗಿತ್ವ ಬೇಕಾಗಿದೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದ್ದಾರೆ.
ಅವರು ಫರಂಗಿಪೇಟೆ ಟುಡೇ ಫೌಂಡೇಶನ್ ಇದರ ಸಹಯೋಗದೊಂದಿಗೆ ದ.ಕ.ಜಿಪಂ ಪುದು-ಮಾಪ್ಲ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಕಾರ್ಯಕ್ರ‌ಮ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು.
ಟುಡೇ ಫೌಂಡೇಶನ್ ನ ಅಧ್ಯಕ್ಷ, ಮಾಜಿ ಜಿಪಂ ಸದಸ್ಯ ಉಮರ್ ಫಾರೂಕ್ ಸ್ವಾಗತಿಸಿ, ಶಾಲೆಯ ದತ್ತು ಸ್ವೀಕಾರದ ಬಳಿಕ ಕೆಲವೊಂದು ವಿಚಾರಗಳನ್ನು ಸಭೆಯ ಮುಂದಿತ್ತರು.
ವೇದಿಕೆಯಲ್ಲಿ ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪುದು ಗ್ರಾಪಂ ಉಪಾಧ್ಯಕ್ಷೆ ಲಿಡಿಯಾ ಪಿಂಟೊ, ಮಾಜಿ ತಾಪಂ ಸದಸ್ಯ, ಟ್ರಸ್ಟ್ ನ ಗೌರವಾಧ್ಯಕ್ಷ ಆಸಿಫ್ ಇಕ್ಬಾಲ್ ದರ್ಬಾರ್, ಎಸ್ಡಿಎಂಸಿ ಅಧ್ಯಕ್ಷ ರಮ್ಲಾನ್ ಕುಂಪನಮಜಲು, ಗ್ರಾಪಂ ಸದಸ್ಯರಾದ ಮುಹಮ್ಮದ್ ಮೋನು, ಇಕ್ಬಾಲ್ ಸುಜೀರ್, ಝೀನತ್, ಭಾಸ್ಕರ್ ರೈ, ಹುಸೈಲ್ ಪಾಡಿ, ಫರಂಗಿಪೇಟೆ ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಬಾವ, ಉದ್ಯಮಿಗಳಾದ ಕೆ.ಇ.ಎಲ್‌. ಇಸ್ಮಾಯಿಲ್, ನೋಬರ್ಟ್ ಡಿಸೋಜ, ಯೂಸುಫ್ ಅಲಂಕಾರ್, ಟಿ.ಕೆ ಬಶೀರ್, ಮೊಹಮ್ಮದ್ ಬಿ.ಎಂ. ತುಂಬೆ, ಮೌಲನಾ ಹಝ್ರತ್ ಶಾಲೆಯ ಮುಖ್ಯಶಿಕ್ಷಕ ಉಮರಬ್ಬ, ಮುಸ್ತಫ ಮೇಲ್ಮನೆ, ಮಜೀದ್ ಫರಂಗಿಪೇಟೆ, ಅಬೂಬಕರ್, ಇಸ್ಮಾಯಿಲ್, ಮಜೀದ್ ಪೆರಮಾರ್, ರಫೀಕ್ ಪೆರಿಮಾರ್, ಸಲಾಂ ಮಲ್ಲಿ, ಇಮ್ತಿಯಾಝ್ ತುಂಬೆ, ಹನೀಫ್ ಅಮ್ಮೆಮಾರ್, ಹಸನಬ್ಬ ಸುಜೀರ್, ಸುಲೈಮಾನ್, ಲತೀಫ್ ಮಲಾರ್, ಎಫ್.ಎ.ಖಾದರ್, ದಿಲ್ಸಾದ್ ಪೆರಿಮಾರ್, ಫಯಾಝ್, ಪುದು ಶಾಲಾ ಮುಖ್ಯ ಶಿಕ್ಷಕಿ ಶಶಿ ಮಂಗಳ, ಪುದು ಮಾಪ್ಲ ಶಾಲಾ ಮುಖ್ಯ ಶಿಕ್ಷಕಿ ಶಕುಂತಲಾಹಾಜರಿದ್ದರು.
ಸನ್ಮಾನ:
ನಲಿಕಲಿಯಲ್ಲಿ ರಾಜ್ಯಮಟ್ಟದಲ್ಲಿ ಸಾಧನೆಗೈದ ಶಿಕ್ಷಕಿ ಜ್ಯೋತಿ, ರಾಷ್ಟ್ರೀಯ ಕ್ರೀಡಾಪಟು ಮುಸ್ತಫಾ ಸುಜೀರ್ ಅವರನ್ನು ಟ್ರಸ್ಟ್ ವತಿಯಿಂದ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು. ಶಾಲಾ ಮುಖ್ಯಶಿಕ್ಷಕಿ ವರದಿ ವಾಚಿಸಿದರು. ಬಳಿಕ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

 

More articles

Latest article