ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯನ್ವಯ ಕಳೆದ ಮೂರು ವರ್ಷದಿಂದ ಮಲಗಿದ ಸ್ಥಿತಿಯಲ್ಲಿರುವ ಕೊಡ್ಮಾಣು ಕೊಡಂಗೆ ನಿವಾಸಿ ಜನಾರ್ಧನ ಶೆಟ್ಟಿಗಾರ ಅವರಿಗೆ ನೀರಿನ ಹಾಸಿಗೆಯನ್ನು ಬಂಟ್ವಾಳ ಯೋಜನಾಧಿಕಾರಿ ಜಯಾನಂದ ಪಿ. ಮತ್ತು ಸೇವಾಂಜಲಿಯ ಕೆ. ಕೃಷ್ಣಕುಮಾರ ಪೂಂಜ ಅವರು ಹಸ್ತಾಂತರಿಸಿದರು. ಈ ಸಂದರ್ಭ ಯೋಜನೆಯ ಮೇಲ್ವಿಚಾರಕಿ ಮಮತ, ಸೇವಾ ಪ್ರತಿನಿಧಿ ಅಮಿತ, ಒಕ್ಕೂಟ ಅಧ್ಯಕ್ಷ ಪದ್ಮನಾಭ ಗೋವಿಂದೋಟ ಮತ್ತು ಪ್ರಶಾಂತ್ ಕುಮಾರ್ ತುಂಬೆ ಉಪಸ್ಥಿತರಿದ್ದರು.