ಬಂಟ್ವಾಳ: ಬಂಟ್ವಾಳ ರಿಕ್ಷಾ ಚಾಲಕ-ಮಾಲಕರ ನೂತನ ಅಧ್ಯಕ್ಷರಾಗಿ ಸತೀಶ್ ಭಂಡಾರಿಬೆಟ್ಟು ಅವರು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅವರು ಇತ್ತೀಚಿಗೆ ಲಯನ್ಸ್ ಕ್ಲಬ್ ಬಿಸಿರೋಡು ಇಲ್ಲಿ ಅಧ್ಯಕ್ಷ ವಸಂತ ಮಣಿಹಳ್ಳ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಸಲಾಗಿದೆ. ಸಂಘದ ಉಪಾಧ್ಯಕ್ಷರಾಗಿ ವಿಶ್ವನಾಥ ಕುಕ್ಕಜೆ, ಸುಧಾಕರ ಕಲ್ಪನೆ, ಉಮಾಶಂಕರ ಬಡ್ಡಕಟ್ಟೆ, ಮಂಜುನಾಥ ಬಂಟ್ವಾಳ, ಗೋಪಾಲಣ್ಣ ಪಾಣೇರ್, ಮೋಹನ ಕಾಮಾಜೆ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ, ಜೊತೆ ಕಾರ್ಯದರ್ಶಿ ರಮೇಶ, ಕೃಷ್ಣಪ್ಪ ಪಾಣೇರ್, ಸಾಹುಲ್ ಬಿಸಿರೋಡ್, ಸತೀಶ ಮೆಲ್ಕಾರ್, ರವಿ ಕೋಟ್ಯಾನ್, ರೋಹಿತ ಬಂಟ್ವಾಳ, ಸಂಘಟನಾ ಕಾರ್ಯದರ್ಶಿ ಮಂಜುನಾಥ, ಶಿವಚಂದ್ರ, ಗುರುವಪ್ಪ, ಹರೀಶ ಕುಲಾಲ್, ಲಕ್ಷ್ಮಣ, ಗುರುವಪ್ಪ, ಕೋಶಾಧಿಕಾರಿ ರವಿ ಪಾಣೆಮಂಗಳೂರು ಹಾಗೂ ವಿವಿಧ ವಲಯದ ಪದಾಧಿಕಾರಿಗಳ ಅಯ್ಕೆ ನಡೆಯಿತು.