ಬಂಟ್ವಾಳ: ಮುಖ್ಯ ಮಂತ್ರಿ ಪರಿಹಾರ ನಿಧಿ ಹಾಗೂ ಪಾಕೃತಿಕ ವಿಕೋಪದಡಿ ಮಂಜೂರಾದ 6.47.000 ರೂ ಮೌಲ್ಯದ ಚೆಕ್ ವಿತರಣೆಯನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಶಾಸಕರ ಕಚೇರಿಯಲ್ಲಿ ಫಲಾನುಭವಿಗಳಿಗೆ ವಿತರಿಸಿದರು.
ಇತ್ತೀಚೆಗೆ ನಾವೂರ ಗ್ರಾಮದ ಬಡಗುಂಡಿ ನಿವಾಸಿ ಪೂವಪ್ಪ ಸಪಲ್ಯ ಅವರು ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದರು, ಅವರ ಕುಟುಂಬಕ್ಕೆ ಪಾಕೃತಿಕ ವಿಕೋಪದಡಿ 5 ಲಕ್ಷ ರೂ ಮೌಲ್ಯದ ಚೆಕ್ ಶಾಸಕರು ಅವರ ಪತ್ನಿ ಗೋಪಿ ಅವರಿಗೆ ವಿತರಿಸಿದರು.
ಇದೇ ಸಂದರ್ಭದಲ್ಲಿ ಕಾವಳಪಡೂರು ಗ್ರಾಮದ ಪ್ರಕಾಶ್ ಅವರ ಚಿಕಿತ್ಸಾ ವೆಚ್ಚಕ್ಕಾಗಿ ಮುಖ್ಯಮಂತ್ರಿ ಪರಿಹಾರದಡಿ 75 ಸಾವಿರ ರೂ ಮೌಲ್ಯದ ಚೆಕ್ ಹಾಗೂ ಪಾಕೃತಿಕ ವಿಕೋಪದಡಿ ತಲಾ 5,200 ರೂ ಅಂತೆ 16 ಜನರಿಗೆ 83,200 ರೂ ಮೌಲ್ಯದ ಚೆಕ್ ವಿತರಿಸಿದರು.
ಈ ಸಂದರ್ಭದಲ್ಲಿ ಸದಾನಂದ ನಾವೂರ, ದೇವದಾಸ್ ಶೆಟ್ಟಿ, ಉದಯಕುಮಾರ್ ರಾವ್, ಚೆನ್ನಪ್ಪ ಆರ್.ಕೋಟ್ಯಾನ್, ಕಂದಾಯ ನಿರೀಕ್ಷಕರಾದ ನವೀನ್, ಗ್ರಾಮಕರಣೀಕರಾದ ರಾಜು ಲಂಬಾಣಿ, ಕುಮಾರ್, ಪ್ರವೀಣ್, ಸದಾನಂದ ನಾವೂರು, ಜನಾರ್ಧನ ಕೊಂಬೆಟ್ಟು, ಪ್ರವೀಣ್ ಗಟ್ಟಿ, ನವೀನ್ ಅಂಚನ್, ಸುಮತಿ ಎಸ್, ದಯಾನಂದ ಸಜಿಪಮುನ್ನೂರು ಉಪಸ್ಥಿತರಿದ್ದರು.
ಮತ್ತಿತರರು ಉಪಸ್ಥಿತರಿದ್ದರು.