ಬಂಟ್ವಾಳ: ಕಳೆದ ಹತ್ತು ದಿನಗಳ ಹಿಂದೆ ರಾಷ್ಟ್ರದ ಜನತೆ ಹಾಗೂ ಮಹಿಳಾ ಸಮಾಜವನ್ನೇ ದಿಘ್ಹ್ಭ್ರಮೆಗೊಳಿಸಿದ ತೆಲಂಗಾಣ ರಾಜ್ಯದಲ್ಲಿನ ಹೈದಾರಬಾದ್ ನ ಸರಕಾರಿ ಪಶು ವೈದ್ಯೆ ಪ್ರೀಯಾಂಕ ರೆಡ್ದಿ (ದಿಶಾ) ಯನ್ನು ಅತ್ಯಾಚಾರವೆಸಗಿ ನಂತರ ಕೊಲೆಗೈದು, ಬೆಂಕಿ ಹಾಕಿ ಸುಟ್ಟು ಹಾಕಿಸಿದ ನಾಲ್ವರನ್ನು ಇವತ್ತು ಮುಂಜಾನೆಯ ಹೊತ್ತು ಮಹಜರು ಸಮಯದಲ್ಲಿ ಸ್ಥಳ ಪರಿಶೀಲನೆ ಸಂದರ್ಭದಲ್ಲಿ ತಪ್ಪಿಸಿಕೊಂಡು ಹೋಗಲು ಪ್ರಯತ್ನಿದಾಗ ಎನ್ ಕೌಂಟರ್ ಮೂಲಕ ನಾಲ್ವರನ್ನು ಹತ್ಯೆಗೊಳಿಸಿ ಇಡೀ ದೇಶದಲ್ಲಿನ ಜನತೆಗೆ ಸಾಮಾಜಿಕ ನ್ಯಾಯ ಒದಗಿಸಿದ ಧೀಮಾಂತ ಪೋಲಿಸ್ ಅಧಿಕಾರಿ ವಿಶ್ವನಾಥ್ ಸಜ್ಜನರ್ ಮತ್ತು ಅವರ ತಂಡವನ್ನು ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಅಭಿನಂದಿಸಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಈ ರೀತಿ ಈ ಹಿಂದೆ ನಡೆದ ಮತ್ತು ಮುಂದೆ ನಡೆಯುವ ಪ್ರತಿಯೊಂದು ಪ್ರಕರಣಗಳಲ್ಲಿ ಇಂತಹ ಕಠಿಣವಾದ ಕ್ರಮಕೈಗೊಳ್ಳಲು ರಾಜ್ಯದ ಪೋಲಿಸ್ ಅಧಿಕಾರಿಗಳು ಕಾರ್ಯೊನ್ಮುಖರಾಗಬೇಕು. ಇದರಿಂದ ಪ್ರತಿಯೊಬ್ಬ ಹೆಣ್ಣು ಮಕ್ಕಳು ರಾತ್ರಿ-ಹಗಲು ಎನ್ನದೆ ನಿರ್ಭಿತಿಯಿಂದ ಓಡಾಡುವಂತಿರಬೇಕು ಎಂದು ಪ್ರಭಾಕರ ಪ್ರಭು ಪೋಲಿಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.