ಬಂಟ್ವಾಳ:ಡಿ.8 ರಂದು ಬಿಸಿರೋಡಿನ ಸ್ಪರ್ಶಾ ಕಲಾಮಂದಿರ ದಲ್ಲಿ ಬಿಲ್ಲವ ಕಣ್ಮಣಿಗಳ ಅಭಿನಂದನಾ ಸಮಿತಿ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಬಿಲ್ಲವ ಸಂಘಗಳ ಹಾಗೂ ಯುವವಾಹಿನಿ (ರಿ). ಬಂಟ್ವಾಳ ಮತ್ತು ಮಾಣಿ ಘಟಕ ಸಹಯೋಗದೊಂದಿಗೆ “ನಮ ಬಿರುವೆರ್ ” ಐಕ್ಯತಾ ಸಮಾವೇಶ 2019 ಎಂಬ ಕಾರ್ಯಕ್ರಮ ನಡೆಯಲಿದೆ ಎಂದು ಮಾಜಿ ತಾ.ಪಂ.ಅಧ್ಯಕ್ಷ, ಅಭಿನಂದನಾ ಸಮಿತಿ ಅಧ್ಯಕ್ಷ ಯಶವಂತ ದೇರಾಜೆ ತಿಳಿಸಿದರು.
ಅವರು ಮೆಲ್ಕಾರ್ ಬಿರ್ವ ಸೆಂಟರ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ, ಬಿಲ್ಲವ ಸಮಾಜದ ಸಂಘಟನೆ ಯ ದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ನಮ್ಮ ಯೋಚನೆಗೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆ.
ಪಕ್ಷಬೇದ ಮರೆತು ಬಿಲ್ಲವ ಸಮಾಜದ ಒಗ್ಗೂಡುವುವಿಕೆಯಿಂದ ಯಶಸ್ಸಿನ ಕಾರ್ಯಕ್ರಮವಾಗಲಿದೆ ಎಂದು ಅವರು ತಿಳಿಸಿದರು. ‌
ಈ ಕಾರ್ಯಕ್ರಮದಲ್ಲಿ ಹತ್ತು ಸಾವಿರಕ್ಕೂ ಅಧಿಕ ಸಮಾಜ ಬಾಂದವರು ಭಾಗವಹಿಸುವ ನಿರೀಕ್ಷೆ ಇದೆ.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಲವು ಸಮಾಜದ ಗಣ್ಯರನ್ನು ಅಭಿನಂದನೆ ಸಲ್ಲಿಸಲಿದೆ.

ಕಾರ್ಯದರ್ಶಿ ಜಗದೀಶ್ ಕೊಯಿಲ ಮಾತನಾಡಿ, ಸಮಾಜದ ಒಗ್ಗೂಡಿಸುವ ಬಗ್ಗೆ ಹಿರಿಯರ ಕಾಳಜಿಗೆ ನಮ್ಮೆಲ್ಲರ ಪ್ರಯತ್ನವೇ ಐಕ್ಯತಾ ಸಮಾವೇಶ ಕಾರ್ಯಕ್ರಮ ಎಂದು ಅವರು ಹೇಳಿದರು. ಡಿ.8 ರ ಬಳಿಕ ಬಿಲ್ಲವ ಸಮಾಜದ ಸಂಘಟನಾ ಪರ್ವ ಆರಂಭವಾಗಲಿದೆ ಎಂದು ಅವರು ಹೇಳಿದರು.

ಗೌರವಾಧ್ಯಕ್ಷ ಎ.ರುಕ್ಮಯ ಪೂಜಾರಿ ಮಾತನಾಡಿ, ಬಿಲ್ಲವ ಸಮಾಜ ಶೋಷಣೆಗೊಳಗಾಗಿದ್ದು, ವಿದ್ಯೆ ಮತ್ತು ಸಂಘಟನೆಯ ಮೂಲಕ ಸಮಾಜದ ಶ್ರೇಯಸ್ಸಿಗಾಗಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಪ್ರತಿಗ್ರಾಮದಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ಈ ಕಾರ್ಯಕ್ರಮ ಜಿಲ್ಲೆಗೆ ಪ್ರೇರಣೆಯಾಗಲಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಸಂಜೀವ ಪೂಜಾರಿ, ಉಪಾಧ್ಯಕ್ಷ ಪುರುಷ ಸಾಲಿಯಾನ್, ಸಮಿತಿ ಹಾಗೂ ವಿವಿಧ ವಲಯದ ಪ್ರಮುಖರಾದ ಜಯಂತಿ ವಿ.ಪೂಜಾರಿ, ಮೋನಪ್ಪ ದೇವಸ್ಯ, ಜಯರಾಮ ಪೂಜಾರಿ, ಸುರೇಶ್ ಪಂಜಿಕಲ್ಲು, ಸುಂದರ ಪೂಜಾರಿ ಮೆಲ್ಕಾರ್, ಶೈಲಜಾ ರಾಜೇಶ್, ಅನಂದ ಸಾಲಿಯಾನ್, ಪ್ರೇಮನಾಥ ಕೆ, ಭವಾನಿ ಕೆ ಮತ್ತಿತರರು ಉಪಸ್ಥಿತರಿದ್ದರು.
‌ಕಾರ್ಯಕ್ರಮದಂದು ಬೆಳಿಗ್ಗೆ 8.30 ಕ್ಕೆ ಬಿಸಿರೋಡಿನ ನಾರಾಯಣಗುರು ಮಂದಿರದಲ್ಲಿ ಗುರುಪೂಜೆ, ಸ್ಪರ್ಶ ಕಲಾಮಂದಿರದ ವರೆಗೆ ಚೆಂಡೆ ವಾದ್ಯದೊಂದಿಗೆ ಸ್ವಾಮೀಜಿಗಳಿಗೆ ಮತ್ತು ಅತಿಥಿ ಗಣ್ಯರಿಗೆ ಪೂರ್ಣಕುಂಭ ಸ್ವಾಗತ ನಡೆಯಲಿದೆ. ವಿಶೇಷ ಅಕರ್ಷಣೆಯಾಗಿ ಚಿತ್ರ ನಟ ನಟಿಯರು, ಯಕ್ಷಗಾನ ಕಲಾವಿದರು , ಬಾಲನಟಿಯರು ಭಾಗಹಿಸುವರು. ಮಧ್ಯಾಹ್ನ 2 ಗಂಟೆಯಿಂದ “ನಾರಾಯಣಗುರು” ತುಳು ಚಲನಚಿತ್ರ ಪ್ರದರ್ಶನ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here