ಬಂಟ್ವಾಳ: ವಿದ್ಯಾರ್ಥಿಗಳು ಆಟೋಟಗಳಲ್ಲಿ ಭಾಗವಹಿಸಿದಾಗ ಮನಸ್ಸು ಮತ್ತು ಬುದ್ಧಿಯನ್ನು ಪರಿಣಾಮಕಾರಿಯಾಗಿ ಉಪಯೋಗಿಸಬಹುದು. ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಗುಣವನ್ನು ಎಳವೆಯಲ್ಲಿ ರೂಢಿಸಿಕೊಂಡಾಗ ಭವಿಷ್ಯತ್ತಿನ ಜೀವನದಲ್ಲೂ ಸೋಲನ್ನು ಸ್ವೀಕರಿಸುತ್ತಾ ಮುಂದೆ ಯಶಸ್ಸನ್ನುಕಾಣಲು ಸಾಧ್ಯಎಂಬುದಾಗಿ ವಿಟ್ಲದ ಲಯನ್ಸ್‌ಕ್ಲಬ್ ಅಧ್ಯಕ್ಷ ಇಂಜಿನಿಯರ್ ಸಂತೋಷ್ ಶೆಟ್ಟಿ ಪೆಲತ್ತಡ್ಕ ಹೇಳಿದರು.
ಅವರು ತುಂಬೆ ಪದವಿ ಪೂರ್ವಕಾಲೇಜಿನ ಕ್ರೀಡಾಂಗಣದಲ್ಲಿ ಜರಗಿದ ತುಂಬೆ ವಿದ್ಯಾ ಸಂಸ್ಥೆಗಳ 31ನೇ ವರ್ಷದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಮೊಹಿಯುದ್ದೀನ್‌ಎಜುಕೇಶನಲ್‌ಟ್ರಸ್ಟ್‌ನ ಧರ್ಮದರ್ಶಿ ಬಿ.ಅಬ್ದುಲ್ ಸಲಾಂ ಕ್ರೀಡಾಜ್ಯೋತಿ ಬೆಳಗಿಸಿ, ಅತಿಥಿಗಳಾದ ಸಂತೋಷ್ ಶೆಟ್ಟಿ ಪೆಲತ್ತಡ್ಕ ಅವರನ್ನು ಸನ್ಮಾನಿಸಿ, ಮಾತನಾಡುತ್ತ ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನ ಮತ್ತುಕವಾಯತು ಪ್ರದರ್ಶನವನ್ನು ಪ್ರಶಂಶಿಸಿ, ಕೇವಲ ವಿದ್ಯಾವಂತರಾದರೆ ಸಾಲದು, ಸ್ಪೋರ್ಟ್ಸ್ ಎನ್ನುವುದನ್ನು ಜೀವನದ ಒಂದು ಭಾಗವಾಗಿ ಇರಿಸಿಕೊಳ್ಳಬೇಕು ಹಾಗೂ ಆರೋಗ್ಯದಾಯಕ ಸ್ಪರ್ಧೆಗಳಲ್ಲಿ ಸ್ಪೋರ್ಟ್ಸ್ ಒಂದಾಗಿದೆ. ದಿನಕ್ಕೆ ಅರ್ಧಗಂಟೆಯಾದರೂ ಶರೀರಕ್ಕೆ ವ್ಯಾಯಾಮವಾಗತಕ್ಕ ಹವ್ಯಾಸವನ್ನು ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ಅಹ್ಮದ್ ಹಾಜಿ ಮುಹಿಯುದ್ದೀನ್ ಆಗಮಿಸಿ ಶುಭ ಹಾರೈಸಿದರು.
ತುಂಬೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ.ಎನ್. ಗಂಗಾಧರ ಆಳ್ವ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಪಥಸಂಚಲನದ ಉಸ್ತುವಾರಿ ವಹಿಸಿದ್ದರು. ವಿದ್ಯಾರ್ಥಿ ಮೊಹಮ್ಮದ್ ಹುಸೇನ್ ಸಾಹೇಬ್ ಪ್ರತಿಜ್ಞಾ ವಿಧಿ ಬೋಧಿಸಿದರು.
ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಬಶೀರ್ ತಂಡೇಲ್, ಉಪಾಧ್ಯಕ್ಷ ನಿಸಾರ್ ಅಹಮ್ಮದ್ ವಳವೂರು, ಆಡಳಿತಾಧಿಕಾರಿ ಕಿಶೋರ್ ಸುವರ್ಣ, ಕಛೇರಿ ಅಧೀಕ್ಷಕ ಅಬ್ದುಲ್ ಕಬೀರ್ ಬಿ.,ದೈಹಿಕ ಶಿಕ್ಷಣ ಶಿಕ್ಷಕಿ ಮೋಲಿ ಎಡ್ನಾಗೊನ್ಸಾಲ್ವ್‌ಸ್ ಮುಂತಾದವರು ಉಪಸ್ಥಿತರಿದ್ದ ಉದ್ಘಾಟನಾಕಾರ್ಯಕ್ರಮದಲ್ಲಿ ತುಂಬೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸಾಯಿರಾಂಜೆ. ನಾಯಕ್ ಕೆ.ವಂದಿಸಿ, ತುಂಬೆ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶ್ರೀನಿವಾಸ ಕೆ.ನಿರೂಪಿಸಿದರು. ಸಭಾಕಾರ್ಯಕ್ರಮದ ಬಳಿಕ ಇಡೀ ದಿನ ವಿವಿಧಕ್ರೀಡಾ ಸ್ಪರ್ಧೆಗಳು ನಡೆದವು.