Saturday, April 6, 2024

ಬಳ್ಳಮಂಜ ಷಷ್ಠಿ ಪ್ರಯುಕ್ತ ರಥೋತ್ಸವ

ಬೆಳ್ತಂಗಡಿ : ಇತಿಹಾಸ ಪ್ರಸಿದ್ಧ ನಾಗಕ್ಷೇತ್ರ ಮಹತೋಭಾರ ಶ್ರೀ ಅನಂತೇಶ್ವರ ದೇವಸ್ಥಾನ ಬಳ್ಳಮಂಜದಲ್ಲಿ ಷಷ್ಠಿ ಮಹೋತ್ಸವ ಪ್ರಯುಕ್ತ ಸೋಮವಾರ ರಥೋತ್ಸವ ನೆರವೇರಿತು. ರಥೋತ್ಸವದಲ್ಲಿ ಸಾವಿರಾರು ಭಕ್ತರು ರಥ ಎಳೆದು ಪುನೀತರಾದರು. ಇದಕ್ಕೂ ಮುನ್ನ 11.10ಕ್ಕೆ ರಥಕ್ಕೆ ಗರುಡ ಪ್ರದಕ್ಷಿಣೆಯನ್ನು ಭಕ್ತರು ಕಣ್ತುಂಬಿಕೊಂಡರು.
ಬೆಳಗ್ಗೆ 6.30ರಿಂದಲೇ ಷಷ್ಠಿ ಉತ್ಸವ ಪ್ರಾರಂಭಗೊಂಡು ರಥ ಕಲಶ ಪೂಜೆ ನಡೆದು ಉತ್ಸವ ಆರಂಭಗೊಂಡಿತು. ಭಕ್ತರು ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು, ಇಷ್ಟಾರ್ಥ ಸಿದ್ಧಿಗೆ ಹರಕೆ ಹಾಕಿ, ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ದೇವರಿಗೆ ಚೆಂಡೆ, ತಂತ್ರ ಸುತ್ತು, ಉಡಿಕೆ ಸುತ್ತು, ಪಲ್ಲಕ್ಕಿ ಸುತ್ತು ನೆರವೇರಿದ ಬಳಿಕ ಮಧ್ಯಾಹ್ನ 11ಕ್ಕೆ ಬ್ರಹ್ಮರಥೋತ್ಸವ ನೆರವೇರಿತು.

 

ರಥೋತ್ಸವ ನಡೆಯುವ ತೇರಬಾಕಿ ಮಾರು (ಕಂಬಳ) ಗದ್ದೆಯ ರಥಬೀದಿ ಯಲ್ಲಿ ಕ್ಷೇತ್ರದ ಕಾರಣಿಕ ದೈವ ವ್ಯಾಗ್ರ ಚಾಮುಂಡಿ ಮತ್ತು ದೇವರ ಭೇಟಿ ನಡೆದು ದೈವವು ಸವಾರಿ ಕಟ್ಟೆಯವರೆಗೆ ಸಾಗಿತು. ಬಳಿಕ ದೇವರು ರಥದಿಂದ ಇಳಿದು, ಹೊಯ್ಗೆಗುಡ್ಡೆ ಲಕ್ಷ್ಮೀ ನಾರಾಯಣ ಭಟ್ ಅವರು ಉತ್ಸವ ಮೂರ್ತಿಯನ್ನು ಹೊತ್ತು ದೇವಸ್ಥಾನ ಪ್ರವೇಶಿಸಿದರು.
ಮಧ್ನಾಹ್ನ 12.30ಕ್ಕೆ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ಪಲ್ಲಪೂಜೆ ನಡೆದು ಸಾವಿರಾರು ಭಕ್ತರಿಗೆ ಮಹಾ ಅನ್ನಸಂತರ್ಪಣೆ ನೆರವೇರಿತು. ಸಂಜೆ ದೇವರಿಗೆ ಕಾರ್ತಿಕ ಪೂಜೆ, ರಾತ್ರಿ 7ರಿಂದ ಅತ್ತಾಳ ಪೂಜೆ, ದರ್ಶನ ಬಲಿ ಉತ್ಸವ ನಡೆದು ದೇವರಿಗೆ ಸಾರಿಕಟ್ಟೆ ಪೂಜೆಯಲ್ಲಿ ಪೂಜೆ ನೆರವೇರಿಸಿ, ವ್ಯಾಗ್ರ ಚಾಮುಂಡಿಗೆ ಪರ್ವ ನಡೆಯಿತು. ಬೆಳಗ್ಗೆಯಿಂದ ಭಕ್ತರು ನಾಗದೇವರಿಗೆ ಪಂಚಾಮೃತ, ವಿಶೇಷ ಸೇವೆ ಸಲ್ಲಿಸಿದರು. ಆನುವಂಶೀಯ ಆಡಳಿತ ಮೊಕ್ತೇಸರ ಡಾ| ಎಂ.ಹರ್ಷ ಸಂಪಿಗೆತ್ತಾಯ ಸಹಿತ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.

More from the blog

ನೀತಿ ಸಂಹಿತೆ ಉಲ್ಲಂಘನೆ : ಕೋಟಾ ಶ್ರೀನಿವಾಸ್‌ ಪೂಜಾರಿಗೆ ಕೋರ್ಟ್‌ ಸಮನ್ಸ್‌

ಬೆಂಗಳೂರು: ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್‌ ಪೂಜಾರಿ ಅವರಿಗೆ ಕೋರ್ಟ್‌ ಸಮನ್ಸ್‌ ಜಾರಿ ಮಾಡಿದೆ. ಕೋಟಾ ಶ್ರೀನಿವಾಸ ಪೂಜಾರಿ, ಗುರ್ಮೆ ಸುರೇಶ್ ಶೆಟ್ಟಿ, ಲಾಲಾಜಿ ಮೆಂಡನ್ ಹಾಗೂ ಶಾಲಾ ಆಡಳಿತ ಮಂಡಳಿಗೆ ಜನಪ್ರತಿನಿಧಿಗಳ ವಿಶೇಷ...

ಬೆಳ್ತಂಗಡಿ: ಆನ್ ಲೈನ್ ಮೂಲಕ ಸಾಲ ನೀಡುವುದಾಗಿ ನಂಬಿಸಿ ವಂಚನೆ : ದೂರು ದಾಖಲು

ಬೆಳ್ತಂಗಡಿ: ಮಹಿಳೆಯೊಬ್ಬರಿಗೆ ಫೇಸ್‌ಬುಕ್‌ ಆಪ್‌ ಮೂಲಕ ಸಾಲ ನೀಡುವುದಾಗಿ ಅಪರಿಚಿತರರು ನಂಬಿಸಿ ವಂಚನೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದಲ್ಲಿ ನಡೆದಿದೆ. ವಂಚನೆಗೊಳಗಾದ ಮಹಿಳೆ ನೆಬಿಸಾ ಅವರು ಈ ಬಗ್ಗೆ ವೇಣೂರು ಪೋಲಿಸ್‌...

ಸಾವು ಗೆದ್ದು ಬಂದ ಸಾತ್ವಿಕ್ ; ಸತತ 20 ಗಂಟೆಗಳ ಕಾರ್ಯಾಚರಣೆ ಯಶಸ್ವಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ 2 ವರ್ಷದ ಕಂದ ಸಾತ್ವಿಕ್​​ನನ್ನು ಕೊನೆಗೂ ರಕ್ಷಣಾ ಪಡೆಯ ಸಿಬ್ಬಂದಿ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಂಡಿಯ ಲಚ್ಯಾನ ಗ್ರಾಮದ ತೋಟದಲ್ಲಿ ಆಟವಾಡುತ್ತಿದ್ದಾಗ ಮಗು ಕೊಳವೆ ಬಾವಿಗೆ ಬಿದ್ದಿತ್ತು. ಈ ಸಂಬಂಧ...

ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ : ರಕ್ಷಣೆಗೆ ಅರ್ಧ ಅಡಿಯಷ್ಟೇ ಬಾಕಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ ಮಗು ಸಾತ್ವಿಕ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮಗು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಆಶಾದಾಯಕವಾಗಿದೆ. 16 ಅಡಿ ಆಳದಲ್ಲಿರುವ ಸಾತ್ವಿಕ್ ರಕ್ಷಣೆಗಾಗಿ 22 ಅಡಿ ಆಳದವರೆಗೆ ಸುರಂಗ...