ಬಂಟ್ವಾಳ: ಬಿ.ಸಿ.ರೋಡು ಬಸ್ ನಿಲ್ದಾಣದ ಸಮೀಪದಲ್ಲಿರುವ ಬಿಎಸ್‍ಎನ್‍ಎಲ್ ಕಚೇರಿಯ ಬಳಿ ನಿಲ್ಲಿಸಿದ್ದ ಬಜಾಜ್ ಪಲ್ಸರ್ ಬೈಕ್ ಕಳವಾಗಿರುವ ಘಟನೆ ಡಿ. 27ರಂದು ನಡೆದಿದೆ.
ಕುರಿಯಾಳ ನಿವಾಸಿ ಯಜ್ಞೇಶ್ ಪೂಜಾರಿ ಅವರು ಸುಮಾರು 75 ಸಾವಿರ ರೂ.ಮೌಲ್ಯದ ತಮ್ಮ ಬೈಕನ್ನು ಡಿ. 27ರಂದು ರಾತ್ರಿ 9 ಗಂಟೆಗೆ ಬಿಎಸ್‍ಎನ್‍ಎಲ್ ಕಚೇರಿಯ ಬಳಿ ನಿಲ್ಲಿಸಿ ತೆರಳಿದ್ದರು. ಬಳಿಕ 9.50ಕ್ಕೆ ಹಿಂತಿರುಗಿ ಬಂದು ನೋಡಿದಾಗ ಬೈಕ್ ಕಳವಾಗಿರುವುದು ಬೆಳಕಿಗೆ ಬಂದಿದೆ.
ಯಜ್ಞೇಶ್ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬೈಕ್ ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here