Sunday, April 7, 2024

ತಂದೆ ತಾಯಿಯನ್ನು ದೂರ ಮಾಡದಿರಿ

ನಾನು ಆವಾಗ ಇಪ್ಪತ್ತೆರಡು ಇಪ್ಪತ್ತ್ಮೂರರ, ಯುವಕ. ಮನೆಯಲ್ಲಿ ಅಬ್ಬಬ್ಬಾ ಎಂಥ ಸಂಭ್ರಮ ಎಂಥ ಸಡಗರ, ಈ ಸಂಭ್ರಮಕ್ಕೆ ಒಂದು ಕಾರಣ ಇತ್ತು, ಅದೇನೆಂದರೆ ನನ್ನ ಮದುವೆಯ ವಿಷಯ ಹೌದು ಮನೆಯಲ್ಲಿ ನನ್ನ ಮದುವೆಯ ವಿಷಯ ಪ್ರಸ್ತಾಪಿಸಿದ ಸಮಯ ನಮ್ಮ ಮನೆಯಲ್ಲಿ ಇಂತಹ ಶುಭ ಕಾರ್ಯವು ನಡೆಯದೆ ಇಪ್ಪತ್ತೈದು ವರ್ಷಗಳು ಕಳೆದಿದ್ದವು. ಅದು ನನ್ನ ಅಪ್ಪ ಅಮ್ಮನ ಮದುವೆನೇ ಆಗಿತ್ತು. ಹಾಗಾಗಿ ತುಂಬಾ ವರ್ಷಗಳ ನಂತರ ಮನೆಯಲ್ಲೊಂದು ಶುಭ ಕಾರ್ಯ ನಡೆಯಲಿದೆ. ನಡೆಯಲಿದೆ ಅನ್ನುವುದಕ್ಕಿಂತಲೂ ನಮ್ಮ ಮನೆಯವರಿಗೆ ಸಂತೋಷದ ವಿಷಯವೇನೆಂದರೆ ನಮ್ಮ ಮನೆಗೆ ಮನೆಮಗಳು ಬರುತ್ತಾಳೆ ಅನ್ನೋದೇ ಖುಷಿ. ಯಾಕೆಂದರೆ ನನ್ನ ಅಪ್ಪ ಅಮ್ಮನಿಗೆ ಹೆಣ್ಣು ಮಕ್ಕಳಿಲ್ಲ ಅವರ ಪಾಲಿಗೆ ಗಂಡಾಗಿ ಹೆಣ್ಣಾಗಿ ಇರುವುದು ನಾನೊಬ್ಬನೇ.

ಒಮ್ಮೊಮ್ಮೆ ಈ ಚಿಂತೆಯು ನನ್ನ ಅಪ್ಪ ಅಮ್ಮನನ್ನು ಗಾಢವಾಗಿ ಕಾಡುತ್ತಿತ್ತು. ಹತ್ತಿರದ ಮನೆಯ ಹೆಣ್ಣು ಮಕ್ಕಳನ್ನು ನೋಡಿ ಒಮ್ಮೊಮ್ಮೆ ಅಮ್ಮ ಅಲ್ಲಿಯೇ ನಿಂತು ಬಿಡುತ್ತಿದ್ದಳು, ನಾನು ತುಂಬಾ ಸಲ ಗಮನಿಸಿದೆ ಅಮ್ಮನ ಕಣ್ಣಂಚು ಒದ್ದೆಯಾಗಿರುವುದನ್ನು. ಅಷ್ಟೊತ್ತಿಗಾಗಲೇ ಅಪ್ಪ ಬಂದು ಸಮಾಧಾನ ಮಾಡುತ್ತಿದ್ದರು. ಯಾಕೆ ಕಣ್ಣೀರು ಹಾಕುತ್ತ ನಿಂತಿರುವೆ, ನೋಡುತ್ತಿರು ನಿನಗೆ ಮಗಳಿಗಿಂತ ಚೆನ್ನಾಗಿರುವ ಸೊಸೆಯನ್ನು ಹುಡುಕಿ ತರುತ್ತೇನೆ ಮಕ್ಕಳಂತೆ ಅಳಬಾರದು ಎಂದು ಸಮಾಧಾನ ಮಾಡುವ ಅಪ್ಪ, ಬಚ್ಚಲು ಮನೆಗೆ ಹೋಗಿ ಕಣ್ಣೀರಿಟ್ಟ ಕ್ಷಣಗಳು ಅದೆಷ್ಟೋ. ಈ ಕ್ಷಣಗಳನ್ನು ಕಂಡಾಗ ನನ್ನ ಮನಸ್ಸಿಗೆ ಕೆಲವೊಮ್ಮೆ ಅನ್ನಿಸುತ್ತಿತ್ತು ಇವರಿಗೆ ಇನ್ನೊಂದು ಮಗುವನ್ನು ಪಡೆಯಬಹುದಿತ್ತಲ್ಲ ನನಗೂ ಒಂಟಿತನ ಇರುತ್ತಿರಲಿಲ್ಲ ಎಂದು. ನಾನು ಒಬ್ಬಂಟಿಯಾದ ಕಾರಣನೊ ಏನೋ ಗೊತ್ತಿಲ್ಲ ಅಪ್ಪ ಅಮ್ಮನ ಎದುರು ನಿಂತು ಕೇಳಲು  ಸಂಕೋಚ ಮತ್ತು ಭಯ ಕಾಡುತ್ತಿತ್ತು.
ಅಂತೂ ಇಂತೂ ಬಲ್ಲ ಮೂಲಗಳು ಎಂಬಂತೆ ನನ್ನ ಅಪ್ಪನ ಸ್ನೇಹಿತರಿಂದ ವಿಷಯ ತಿಳಿಯಿತು. ಅದೇನೆಂದರೆ ನನ್ನ ತಾಯಿ ನನ್ನ ಹಾಗೆ ಇನ್ನೊಂದು ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದಳು. ಅದು ಭೂಮಿಗೆ ಬರುವ ಹೊತ್ತಿಗಾಗಲೇ ಅದರ ಉಸಿರು ನಿಂತಿತ್ತು. ಈ ಆಘಾತದಿಂದ ಹೊರಬರಲು ಅಮ್ಮನಿಗೆ ಕೆಲವು ವರ್ಷಗಳೇ ಬೇಕಾಯಿತು, ಆ ಕಾರಣದಿಂದಾಗಿ ಅಪ್ಪ ಇನ್ನೊಂದು ಮಗುವಿನ ಯೋಚನೆಯನ್ನೂ ಮಾಡಿರಲಿಲ್ಲ ಈ ಘಟನೆಯಿಂದಗಿಯ್ಯೋ ಏನೋ ಗೊತ್ತಿಲ್ಲ ನನ್ನ ಅಪ್ಪ ಅಮ್ಮನಿಗೆ ಹೆಣ್ಣೆಂದರೆ ತುಂಬಾ ಪ್ರೀತಿ, ಈ ಕಾರಣ ತಿಳಿದು ನಾನು ಸಣ್ಣ ವಯಸ್ಸಿನಲ್ಲಿ ಮದುವೆಗೆ ಒಪ್ಪಿಕೊಂಡೆ. ಯಾಕೆಂದರೆ ನನ್ನ ಹೆಂಡತಿಯಲ್ಲಿ ಅಪ್ಪ ಅಮ್ಮನಿಗೆ ತನ್ನ ಮಗಳನ್ನು ಕಾಣುವ ಹಂಬಲಕ್ಕೆ ಹೋಲಿಸಿದರೆ ನನ್ನ ವಯಸ್ಸು ನನಗೆ ಕಮ್ಮಿ ಎಂದು ನನಗೆ ಅನ್ನಿಸುತ್ತಿರಲಿಲ್ಲ. ಹಾಗಾಗಿ ಆ ವಯಸ್ಸಿನಲ್ಲಿ ನಾನು ಮದುವೆಗೆ ಒಪ್ಪಿಕೊಂಡೆ.
ತುಂಬಾ ಅದ್ದೂರಿಯಾಗಿ ಮದುವೆಯೂ ಆಯ್ತು. ಸೊಸೆ ಮಗಳಂತೆ ಮನೆಗೆ ಬಂದಾಯ್ತು. ಮೊದಮೊದಲು ಎಲ್ಲವೂ ಸರಿಯಾಗಿ ನಡೆಯುತ್ತಿತ್ತು ಅದರೆ ಯಾರ ದೃಷ್ಟಿ ಬಿತ್ತೊ ಏನೋ ಗೊತ್ತಿಲ್ಲ ಒಂದು ಪುಟ್ಟ ಜೇನುಗೂಡಿನಂತಿದ್ದ ನಮ್ಮ ಸಂಸಾರದಲ್ಲಿ ಅತ್ತೆ ಆಗಿದ್ದ ಅಮ್ಮ ಮತ್ತೆ ಅತ್ತೆಯಾಗಿದ್ದಲು ಅಪ್ಪನಾಗಿದ್ದ ಮಾವ ಮತ್ತೆ ಮಾವನಗಿದ್ದರು ಅಷ್ಟೊತ್ತಿಗಾಗಲೇ ನನ್ನ ಹೆಂಡತಿಗೆ ಏಳು ತಿಂಗಳು ತುಂಬಿತ್ತು, ಇನ್ನೇನು ಸೀಮಂತ ಮಾಡಿ ಅವಳ ಅಮ್ಮನ ಮನೆಗೆ ಕಳಿಸುವ ಹೊತ್ತು ಬಂದಾಗಿತ್ತು. ಮನೆಯಲ್ಲಿ ಇದ್ದವರ ಮನಸ್ಸು ಅಷ್ಟೇನೂ ಚೆನ್ನಾಗಿಲ್ಲದಿದ್ದರೂ ಊರವರ ಹಾಗೂ ನೆಂಟರಿಷ್ಟರ ತೋರಿಕೆಗಾಗಿ ಖುಷಿ ಖುಷಿಯಾಗಿ ಮತ್ತು ಅದ್ದೂರಿಯಾಗಿ ಕಳಿಸಿಕೊಟ್ಟರು.

ಅಂತು ನವಮಾಸ ತುಂಬಿದ ನನ್ನಕೇ ಒಂದು ಗಂಡು ಮಗುವಿಗೆ ಜನ್ಮ ನೀಡಿದಳು, ಮಗುವಿಗೆ ತೊಟ್ಟಿಲು ಹಾಕುವ ಸಂಪ್ರದಾಯದ ಮುಖಾಂತರ ನಾಮಕರಣವೂ ಆಯಿತು. ಹೆತ್ತು ತಿಂಗಳು ಐದುದಾದರೂ ತವರು ಮನೆಯಿಂದ ಬಾರದಿದ್ದ ಹೆಂಡತಿಯನ್ನು ಹೇಗೋ ಸಮಾಧಾನ ಮಾಡಿ ಮನೆಗೆ ಕರೆದುಕೊಂಡು ಬಂದೆ, ಹೆಂಡತಿಯ ನಡವಳಿಕೆಯಿಂದ ಅಪ್ಪ ಅಮ್ಮ ನನ್ನಾಕೆಗೆ ಮಾವ, ಅತ್ತೆಯಾಗಿಲ್ಲದಿದ್ದರು, ಮಗುವಿಗೆ ಮಾತ್ರ ಪ್ರೀತಿಯ ಅಜ್ಜ ಅಜ್ಜಿಯಾಗಿದ್ದರು. ಹೇಗೂ ಸಂಸಾರ ಅಲ್ಲಿಂದಲ್ಲಿಗೆ ಸುಧಾರಿಸಿಕೊಡು ಹೋಗುತ್ತಿದೆ ಅನ್ನುವಷ್ಟರಲ್ಲಿ, ಮನೆಯಲ್ಲಿ ಸಣ್ಣ ವಿಷಯದಲ್ಲಿ ಒಂದು ದೊಡ್ಡ ರಾದ್ಧಾಂತವೆ ಆಯ್ತು. ಏನೋ ಮಗುವಿಗೆ ತಾಯಿ ಹೊಡೆದಳಂತೆ, ಅಷ್ಟೊತ್ತಿಗೆ ಅಜ್ಜಿ ಅಡ್ಡ ಬಂದರಂತೆ, ಈ ವಿಷಯವನ್ನು ಹಿಡಿದುಕೊಂಡು ಅತ್ತೆ ಸೊಸೆಗೆ ಜಗಳ ಶುರುವಾಯಿತು. ಈ ಜಗಳ ಎಲ್ಲಿಗೆ ಮುಟ್ಟಿತ್ತೆಂದರೆ ನನ್ನ ಅಪ್ಪ ಅಮ್ಮನನ್ನು ಅನಾಥ ಆಶ್ರಮಕ್ಕೆ ಸೇರಿಸುವವರೆಗೆ ಮುಂದುವರಿದಿತ್ತು.

ಇತ್ತ ಹೆಂಡತಿಯ ಮಾತು ಕೇಳಲ, ಅತ್ತ ತಂದೆ ತಾಯಿಯ ಮಾತು ಕೇಳಲ ಎಂದು ತಿಳಿಯದೆ ಅಪ್ಪ ಅಮ್ಮನನ್ನು ಅನಾಥ ಆಶ್ರಮಕ್ಕೆ ಬಿಟ್ಟು ಬಂದೆ. ನನ್ನ ಮಗನೂ ಅಜ್ಜ ಅಜ್ಜಿಯನ್ನು ನೋಡದೆ ಎರಡು ದಿನ ಅತ್ತು,  ಒಂದು ವಾರದಲ್ಲಿ ಮರೆತುಬಿಟ್ಟ. ಈಗ ನನ್ನ ಸಂಸಾರದಲ್ಲಿ ಉಳಿದಿರುವುದು ಮೂರು ಜನ. ದಿನಗಳು ಕಳೆದಂತೆ ತಾಯಿ ಮಗನದ್ದು ಒಂದು ಪಂಗಡ ನಾನು ಒಬ್ಬಂಟಿ. ನನ್ನ ಜೀವನದಲ್ಲಿ ನಡೆದ ಈ ಪರಿಸ್ಥಿತಿಗೆ ತಂದೆ ತಾಯಿ ಬೇಗ ಮದುವೆ ಮಾಡಿಸಿದ್ದು ಕಾರಣಾನಾ, ಅಥವಾ ನಾನು ಹೆಂಡತಿಯ ಮಾತು ಕೇಳಿದ್ದು ಕಾರಣಾನಾ ಎಂದು ತಿಳಿಯದಾದಾಗ ನನಗೆ ನೆನಪಾದದ್ದು ನನ್ನ ಅಪ್ಪ ಅಮ್ಮ.

ಅಷ್ಟೊತ್ತಿಗೆ ಅವಳಿಗೆ ತನ್ನ ಗಂಡನ ಬೆಲೆ ಗೊತ್ತಾಗಿತ್ತು. ನನಗೆ ನನ್ನ ಅಪ್ಪ ಅಮ್ಮನ ಬೆಲೆ ಗೊತ್ತಾಗಿತ್ತು. ನಾನು ಅಪ್ಪ ಅಮ್ಮನಲ್ಲಿ ಕ್ಷಮೆ ಯಾಚಿಸಿದೆ ನನ್ನಲ್ಲಿ ನನ್ನ ಅರ್ಧಾಂಗಿಯದವಳು ಕ್ಷಮೆಯಾಚಿಸಿದಳು. ಮತ್ತೆ ಅನಾಥ ಆಶ್ರಮದಿಂದ ನನ್ನ ಅಪ್ಪ ಅಮ್ಮನನ್ನು ಮನೆಗೆ ಕರೆದುಕೊಂಡು ಬಂದೆ ಈಗ ನನ್ನ ಸಂಸಾರ ಮತ್ತೆ ಆನಂದ ಸಾಗರವಾಗಿದೆ. ಈ ಮೂಲಕ ನಾನು ನಿಮ್ಮಲ್ಲಿ ಕೇಳಿಕೊಳ್ಳುವುದಿಷ್ಟೆ ದಯಮಾಡಿ ತಂದೆ ತಾಯಿಯನ್ನು ದೂರ ಮಾಡದಿರಿ.🙏

ಈ ನನ್ನ ಸಣ್ಣ ಕಥೆ ಕೇವಲ ಕಾಲ್ಪನಿಕ ಮಾತ್ರ

ಗಿರೀಶ್ ತುಳಸೀವನ

 

More from the blog

ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ : ರಕ್ಷಣೆಗೆ ಅರ್ಧ ಅಡಿಯಷ್ಟೇ ಬಾಕಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ ಮಗು ಸಾತ್ವಿಕ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮಗು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಆಶಾದಾಯಕವಾಗಿದೆ. 16 ಅಡಿ ಆಳದಲ್ಲಿರುವ ಸಾತ್ವಿಕ್ ರಕ್ಷಣೆಗಾಗಿ 22 ಅಡಿ ಆಳದವರೆಗೆ ಸುರಂಗ...

ಮಿತಿ ಮೀರಿದ ತಾಪಮಾನ : ಖಡಕ್​ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಬಿರು ಬಿಸಿಲು ಹೆಚ್ಚಳವಾಗುತ್ತಿದ್ದು ಮುಂದಿನ 14 ದಿನಗಳ ಕಾಲ ಬಿಸಿಗಾಳಿ ಬೀಸಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್​...

ಮನೆಯ ಮಹಡಿಯಿಂದ ಬಿದ್ದು ಬಾಲಕ ಸಾವು

ಬಂಟ್ವಾಳ: ಮನೆಯ ಮಹಡಿಯ ಮೇಲಿಂದ ಕೆಳಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಎ.‌ ೧ರ ಮುಂಜಾನೆ ನಡೆದಿದೆ. ಬಂಟ್ವಾಳ ಜಕ್ರಿಬೆಟ್ಟು ನಿವಾಸಿ ದಿನೇಶ್ ಪೂಜಾರಿ ಅವರ ಪುತ್ರ ಆದಿಶ್(೧೫) ಮೃತಪಟ್ಟ ಬಾಲಕ. ಆತ ಮನೆಯಲ್ಲಿ ದೊಡ್ಡಮ್ಮನ...

ಮಾಂಸ ಪ್ರಿಯರಿಗೆ ಬೆಲೆ ಏರಿಕೆ ಶಾಕ್.. ಕೋಳಿ ಮಾಂಸದ ದರ ಏರಿಕೆ

ಮಂಗಳೂರು: ಕೋಳಿಮಾಂಸ, ಮೀನಿನ ದರ ಏರುಗತಿ ಯಲ್ಲಿ ಸಾಗುತ್ತಿದ್ದು ಮಾಂಸಾಹಾರ ಪ್ರಿಯರ ಜೇಬಿಗೂ ಕತ್ತರಿ ಬೀಳುವಂತಾಗಿದೆ. ಪ್ರಸ್ತುತ ಕೋಳಿಮಾಂಸಕ್ಕೆ (ವಿದ್‌ ಸ್ಕಿನ್‌) ಕೆ.ಜಿ.ಗೆ ಬ್ರಾಯ್ಲರ್‌ ಕೆಲವು ಕಡೆ 235-240 ರೂ., ಟೈಸನ್‌ 270 ರೂ....