


ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿಗರ ಮಿನಿ ಬಸ್ ಒಂದು ರಸ್ತೆಯಿಂದ ಬದಿಗೆ ವಾಲಿದ ಘಟನೆ ಮಾರಿಪಳ್ಳ ಸಮೀಪದ ಪುದು ನಾಣ್ಯ ಎಂಬಲ್ಲಿ ಆದಿತ್ಯವಾರ ಮದ್ಯರಾತ್ರಿ ವೇಳೆ ನಡೆದಿದೆ.
ಘಟನೆಯ ಲ್ಲಿ ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣ ಹಾನಿ ಸಂಭವಿಸಿಲ್ಲ, ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಮೈಸೂರು ಕಡೆಯಿಂದ ಮಂಗಳೂರು, ಕೊಲ್ಲೂರು ಮೂಕಾಂಬಿಕಾ ಸಹಿತ ಅನೇಕ ಪ್ರವಾಸಿ ಕೇಂದ್ರ, ಧಾರ್ಮಿಕ ಕೇಂದ್ರ ಗಳಿಗೆ ಬೇಟಿ ನೀಡಿ ಆದಿತ್ಯವಾರ ರಾತ್ರಿ ಮೈಸೂರಿಗೆ ವಾಪಾಸು ಅಗುವ ವೇಳೆ ನಾಣ್ಯ ಎಂಬಲ್ಲಿ ಈ ಘಟನೆ ನಡೆದಿದೆ.
ಸಣ್ಣ ಪುಟ್ಟ ಗಾಯಗೊಂಡ ಸಹಿತ ಪ್ರವಾಸಿಗರನ್ನು ಬದಲಿ ಬಸ್ ವ್ಯವಸ್ಥೆ ಕಲ್ಪಿಸಿ , ಅವರನ್ನು ಮೈಸೂರಿಗೆ ತಲುಪಿಸುವ ಕಾರ್ಯವನ್ನು ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್ ಮಾಡಿದ್ದಾರೆ.


