ಅಡ್ಯನಡ್ಕ: ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಗಳ ವಾರಣಾಶಿ ಕೃಷ್ಣ ಸಭಾಭವನದಲ್ಲಿ ಕಿನ್ನರ ಮೇಳ ತುಮರಿ ರಂಗತಂಡದ ಹೊಸ ನಾಟಕ ’ಹೀರಾಮೋತಿ’ ಪ್ರದರ್ಶನಗೊಂಡಿತು.
ಜನತಾ ವಿದ್ಯಾಸಂಸ್ಥೆಗಳ ಸಂಚಾಲಕಿ ಡಾ. ಅಶ್ವಿನಿ ಕೃಷ್ಣಮೂರ್ತಿ ಅವರು ಮಾತನಾಡಿ, ಒಳ್ಳೆಯ ಸಾಹಿತ್ಯವು ಸಂಸ್ಕಾರವನ್ನು ಕೊಡುತ್ತದೆ. ನಾಟಕಗಳು ನೀಡುವ ಆನಂದ ಮತ್ತು ಆಶಯಗಳು ಪ್ರೇಕ್ಷಕರಿಗೆ ಮುಖ್ಯವಾಗುತ್ತವೆ. ಮಕ್ಕಳ ನಾಟಕಗಳು ವಿದ್ಯಾರ್ಥಿಗಳಿಗೆ ಜೀವನ ಮೌಲ್ಯವನ್ನು ರವಾನಿಸಲು ಸಹಕಾರಿಯಾಗಿವೆ ಎಂದರು.
ಮೂಲ ಪ್ರೇಮ್‌ಚಂದ್ ಹಿಂದಿಯಲ್ಲಿ ಬರೆದಿರುವ ಈ ನಾಟಕವನ್ನು ಶಾ. ಬಾಲುರಾವ್ ಕನ್ನಡಕ್ಕೆ ಅನುವಾದಿಸಿದ್ದು, ಕೆ. ಜಿ. ಕೃಷ್ಣ ಮೂರ್ತಿ ನಿರ್ದೇಶಿಸಿದ್ದಾರೆ. ’ಹೀರಾಮೋತಿ’ ನಾಟಕದಲ್ಲಿ ಹೀರಾ ಮತ್ತು ಮೋತಿ ಹೆಸರಿನ ಎರಡು ಎತ್ತುಗಳ ಪರಸ್ಪರ ಹೊಂದಾಣಿಕೆ, ಮಮತೆ, ನಿ?, ಮೂಕ ಪ್ರಾಣಿಗಳ ಪ್ರೀತಿ, ಸಂಕಟ, ಸಂವಹನ – ಸ್ವಭಾವವನ್ನು ಅರ್ಥಪೂರ್ಣವಾಗಿ ಚಿತ್ರಿಸಲಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here