Wednesday, October 25, 2023

ಬೈಕ್ ನಿಯಂತ್ರ ಕಳೆದು ರಸ್ತೆಗೆ: ಗ್ರಾ.ಪಂಚಾಯಿತಿ ಸದಸ್ಯ ಸಹಿತ ಇಬ್ಬರು ಸ್ಥಳದಲ್ಲೇ ಸಾವು

Must read

ವಿಟ್ಲ: ಬೈಕ್ ನಿಯಂತ್ರಣ ಕಳೆದು ರಸ್ತೆಗೆ ಉರುಳಿದ ಪರಿಣಾಮ ಗ್ರಾ.ಪಂಚಾಯಿತಿ ಸದಸ್ಯ ಸಹಿತ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ವಿಟ್ಲದ ಕನ್ಯಾನ ಗ್ರಾಮದ ಕೆಳಗಿನಪೇಟೆಯಲ್ಲಿ ನಡೆದಿದೆ.

ಕನ್ಯಾನ ಗ್ರಾಮದ ದೇಲಂತಬೆಟ್ಟು ನಿವಾಸಿ, ಕನ್ಯಾನ ಗ್ರಾಮ ಪಂಚಾಯಿತಿ ಸದಸ್ಯ ವಾಲ್ಟರ್ ಡಿಸೋಜ(45) ಹಾಗೂ ಕನ್ಯಾನ ಗ್ರಾಮದ ಪಂಜಾಜೆ ನಿವಾಸಿ ವಿಲ್ಸನ್ ಡಿಸೋಜ(52) ಮೃತಪಟ್ಟವರು. ಇವರು ಕನ್ಯಾನ ಸರ್ಕಾರಿ ಆಸ್ಪತ್ರೆಯಿಂದ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ನಿಯಂತ್ರಣ ಕಳೆದು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.

More articles

Latest article