ಬಂಟ್ವಾಳ: ವಗ್ಗ ಕುಲಾಲ ಸಮಾಜ ಸೇವಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ಸಮಾಜ ಭವನದಲ್ಲಿ ನಡೆಯಿತು. ಅಧ್ಯಕ್ಷರಾಗಿ ವಿಜಯ ಕುಲಾಲ್ ಪಣೆಕಲ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ವಗ್ಗನಾರಾಯಣ ಮೂಲ್ಯ ಇಜ್ಜಿದೊಟ್ಟು, ಕಾರ್ಯದರ್ಶಿಯಾಗಿ ಹರೀಶ್ ಕುಲಾಲ್ ಕಾಡಬೆಟ್ಟು, ಉಪಾಧ್ಯಕ್ಷರಾಗಿ ಸುಕೇಶ್ ಕುಲಾಲ್, ಸಚಿನ್ ಕುಲಾಲ್, ಜತೆಕಾರ್ಯದರ್ಶಿಯಾಗಿ ಚಂದ್ರಶೇಖರ ಕುಲಾಲ್ ವಗ್ಗ, ದಾಮೋದರ ಕುಲಾಲ್ ರಾಜಪಲ್ಕೆ, ಕು.ವನಿತಾ ಉಗ್ಗಬೆಟ್ಟು, ಕೋಶಾಧಿಕಾರಿಯಾಗಿ ಸುರೇಶ್ ಕುಲಾಲ್ ಬಾಂಬಿಲ, ಸಂಘಟನಾ ಕಾಂiiದರ್ಶಿಯಾಗಿ ವಿಠಲ ಕುಲಾಲ್ ಹೆಗೊಟ್ಟು, ಗೌರವ ಸಲಹೆಗಾರರಾಗಿ ಕೃಷ್ಣ ಕುಲಾಲ್ ಕಾಡಬೆಟ್ಟು, ಜಯರಾಮ್ ಕುಲಾಲ್ ಉರುಡಾಯಿ, ಸದಾಶಿವ ಬಂಗೇರ ಉಗ್ಗಬೆಟ್ಟು, ಜಯಂತ ಬಂಗೇರ ಉಗ್ಗಬೆಟ್ಟು, ಶಿವಯ್ಯ ಮೂಲ್ಯ ಹೆರೋಟ್ಟು ಹಾಗೂ ಕಾರ್ಯಕಾರಿ ಸಮಿತಿಗೆ 12 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು ಎಂದು ಸಂಘದ ಕಾರ್ಯದರ್ಶಿ ಹರೀಶ್ ಕುಲಾಲ್ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.