ವಿಟ್ಲ: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ಮಂಗಳೂರು ಹಾಗೂ ಬೋಳಂತೂರು ಘಟಕದ ವತಿಯಿಂದ ಡಿ.೧ ರಂದು ಮಗ್ರೀಬ್ ನಮಾಜಿನ ನಂತರ ರಾತ್ರಿ 10 ಗಂಟೆಯವರೆಗೆ ಬಾರೆಬೆಟ್ಟು ತಾಳಿತ್ತನೂಜಿ ಎಂಬಲ್ಲಿ ಧಾರ್ಮಿಕ ಮತಪ್ರವಚನ ಕಾರ್ಯಕ್ರಮ ನಡೆಯಲಿದ್ದು ಪ್ರವಚನಕಾರರಾಗಿ ಡಾ| ಆಹ್ಮದ್ ಕಬೀರ್ ಮುಸ್ಲಿಯಾರ್ ಹಾಗೂ ಮೌಲವಿ ಮುನೀರ್ ಮದನಿ ತೌಹೀದ್ ಎಂಬ ವಿಷಯದಲ್ಲಿ ಪ್ರವಚನ ನೀಡಲಿದ್ದಾರೆ.
ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಸಮಿತಿಯ ಅಧ್ಯಕ್ಷರಾದ ಬಶೀರ್ ಆಹ್ಮದ್ ಶಾಲಿಮಾರ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ದಾವಾ ಕಾರ್ಯದರ್ಶಿ ಒ.ಉ ಮಹಮ್ಮದ್, ರಿಯಾಜ್ ಆಹ್ಮದ್, ಅಬ್ದುಲ್ ರಹಿಮಾನ್ ಉಪ್ಪಿನಂಗಡಿ, ಮಹಮ್ಮದ್ ಹನೀಪ್ ಬೋಳಂತೂರು ಭಾಗವಹಿಸಲಿದ್ದಾರೆ.