ವಿಟ್ಲ: ವಿಟ್ಲ ಠಾಣಾ ವ್ಯಾಪ್ತಿಯ ಅಳಿಕೆ ಗ್ರಾಮದಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿ ಆಕೆ ಗರ್ಭವತಿಯಾಗಲು ಕಾರಣವಾದ ಪ್ರಕರಣದಲ್ಲಿ ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಅವರು ಮೂರು ಲಕ್ಷ ಹಣ ಪಡೆದಿದ್ದಾರೆ ಎಂದು ಜಯ ಕಡೇಶಿವಾಲಯ ಎಂಬವರು ಆನಂದ ಮಂಚಿ ಮತ್ತು ನಾರಾಯಣ ಮಂಚಿ ಅವರಲ್ಲಿ ಹೇಳಿರುವುದು ಸಂಪೂರ್ಣ ಸತ್ಯಕ್ಕೆ ದೂರವಾಗಿದೆ ಎಂದು ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಅಧ್ಯಕ್ಷ ಸೇಸಪ್ಪ ಬೆದ್ರಕಾಡು ದಾಖಲೆಗಳ ಮೂಲಕ ಸ್ಪಷ್ಟಪಡಿಸಿದ್ದಾರೆ.
ಅವರು ಸೋಮವಾರ ವಿಟ್ಲ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪ್ರಕರಣ ತಿರುಚಲು ಲಂಚ ನೀಡಲಾಗಿದೆ ಎಂಬ ಅಪಪ್ರಚಾರದ ಬಗ್ಗೆ ಸ್ಪಷ್ಟೀಕರಣ ನೀಡಿದರು. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ದಲಿತ, ಹಿಂದುಳಿದ ಜನರ ಶ್ರೇಯೋಭಿವೃದ್ಧಿಗಾಗಿ ಹೋರಾಟ ನಡೆಸಿ ಬಲಿಷ್ಠ ನಾಯಕನಾಗುತ್ತಿರುವುದನ್ನು ಸಹಿಸದ ಅವರು ಈ ರೀತಿ ಅಪಪ್ರಚಾರ ಮಾಡಲಾಗುತ್ತಿದ್ದಾರೆ. ಈ ಮಧ್ಯೆ ರಾಘವೇಂದ್ರ ಸುರುಳಿಮೂಲೆ ಎಂಬಾತ ಗುಂಪಿನೊಂದಿಗೆ ಸಂತ್ರಸ್ಥೆಯ ಮನೆಗೆ ಹೋಗಿ ಅತ್ಯಾಚಾರ ಕೃತ್ಯ ತನ್ನ ಸಹೋದರ ಮಾಡಿರುವುದಾಗಿ ಆಕೆ ಒಪ್ಪಿಕೊಂಡಿರುವುದು ಒಳಸಂಚಾಗಿದ್ದು, ಈ ರೀತಿ ಹೇಳಿಕೆ ನೀಡಲು ವಿಟ್ಲ ಪೊಲೀಸ್ ಎಸ್‌ಐ ಮೂರು ಲಕ್ಷ ಲಂಚ ಪಡೆದಿದ್ದಾರೆ, ಈ ಬಗ್ಗೆ ನಮ್ಮಲ್ಲಿ ಸಾಕ್ಷ್ಯಾಧಾರಗಳಿವೆ ಎಂದು ನಂಬಿಸಿದ್ದು, ಆಕೆಯ ಮನೆಯವರನ್ನು ಗೊಂದಲಕ್ಕೀಡು ಮಾಡಿದ್ದಾರೆ. ಈ ಪ್ರಕರಣವನ್ನು ಮರುಶೀಲಿಸಲು ಮತ್ತೊಮ್ಮೆ ದೂರು ಕೊಡಿ, ಸರಕಾರದಿಂದ ಇದಕ್ಕೆ ಪರಿಹಾರವೂ ಸಿಗಲಿದೆ ಎಂದು ಅವರ ಮನಶ್ಯಾಂತಿಯನ್ನು ಕದಡಿದ್ದಾರೆ. ನಾವು ಮನೆಗೆ ಬಂದ ವಿಚಾರವನ್ನು ಯಾರಲ್ಲಿಯೂ ಹೇಳಬೇಡಿ ಎಂದೂ ಹೇಳಿದ್ದು, ಅವರಿಗೆ ಹಣದ ಆಮಿಷವನ್ನೂ ಒಡ್ಡಿದ್ದಾರೆ. ಅವರ ದುರುದ್ದೇಶವನ್ನು ಅರಿತ ಸಂತ್ರಸ್ಥೆಯ ಸಹೋದರಿ ರಾಘವೇಂದ್ರ ಮತ್ತು ಆತನ ಸಹಚರರ ಮೇಲೆ ಜಿಲ್ಲಾ ಎಸ್‌ಪಿ, ಬಂಟ್ವಾಳ ವೃತ್ತ ನಿರೀಕ್ಷಕರು ಹಾಗೂ ವಿಟ್ಲ ಎಸ್‌ಐಗೆ ದೂರು ನೀಡಿದ್ದಾರೆ.
ಜಿಲ್ಲೆಯ ನಿಷ್ಠಾವಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಹಾಗೂ ಇತರರು ನನ್ನ ಮೇಲೆ ಇಟ್ಟಿರುವ ವಿಶ್ವಾಸ, ನಂಬಿಕೆಗೆ ಚ್ಯುತಿ ಬರುವಂತೆ ಮಾಡಿರುವ ವಿಚಾರಕ್ಕೆ ಕಿವಿಗೊಡದೇ ಮುಂದೆಯೂ ನನ್ನ ಸಾಮಾಜಿಕ ಸೇವಾ ಕಾರ್ಯಗಳಿಗೆ ಸಹಕರಿಸಬೇಕೆಂದು ಪತ್ರಿಕಾಗೋಷ್ಠಿಯ ಮೂಲಕ ಮನವಿ ಮಾಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಕಾರ್ಯದರ್ಶಿ ಚಂದ್ರಶೇಖರ್ ಯು., ಸಂಘಟನೆಯ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಗಣೇಶ್ ಸೀಗೆಬಲ್ಲೆ, ಗೌರವಾಧ್ಯಕ್ಷ ಸೋಮಪ್ಪ ಸುರುಳಿಮೂಲೆ, ಸಂತ್ರಸ್ಥೆಯ ಸಹೋದರಿ ವಿಜಯಶ್ರೀ ಮುಳಿಯ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here