ಬಂಟ್ವಾಳ: ತುಳುಕೂಟ ಬಂಟ್ವಾಳ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಬಂಟ್ವಾಳ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ ತುಳು ಕತೆ ಹೇಳುವುದು ಮತ್ತು ತುಳು ಪದ್ಯ ಹಾಡುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸ್ಪರ್ಧೆಯು ನವಂಬರ್ 16 ರಂದು ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಲಿದ್ದು ತಹಶೀಲ್ಧಾರರಾದ ರಶ್ಮಿ ಎಸ್.ಆರ್. ಉಧ್ಘಾಟಿಸುವರು. ತುಳುಕೂಟ ಅಧ್ಯಕ್ಷ ಸುದರ್ಶನ್ ಜೈನ್ ಅಧ್ಯಕ್ಷತೆ ವಹಿಸುವರು. ತುಳುಕೂಟ ಗೌರವಾಧ್ಯಕ್ಷ ಎ.ಸಿ.ಭಂಡಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಪಿ., ಕಲಾವಿದ ಸದಾಶಿವ ಡಿ.ತುಂಬೆ, ಚಲನಚಿತ್ರ ಕಲಾವಿದ ಸುಂದರ ರೈ ಮಂದಾರ ಆತಿಥಿಗಳಾಗಿ ಭಾಗವಹಿಸುವರು.
ಪ್ರತೀ ಸ್ಪರ್ಧೆಗೆ 4+1( 5 ನಿಮಿಷ) ಗಳ ಅವಕಾಶವಿದೆ.
ಪ್ರತೀ ವಿಭಾಗದಲ್ಲಿ ವಿಜೇತರಿಗೆ ಪ್ರಥಮ ಎರಡು ಸಾವಿರ ರೂಪಾಯಿ ನಗದು, ದ್ವಿತೀಯ ಒಂದೂವರೆ ಸಾವಿರ ರೂಪಾಯಿ ನಗದು, ತೃತೀಯ ಒಂದು ಸಾವಿರ ರೂಪಾಯಿ ನಗದು, ಪುಸ್ತಕ ಬಹುಮಾನ ಮತ್ತು ಪ್ರಮಾಣಪತ್ರ ನೀಡಲಾಗುವುದು. ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣಪತ್ರ ನೀಡಲಾಗುವುದು ಎಂದು ತುಳುಕೂಟದ ಪ್ರಧಾನ ಕಾರ್ಯದರ್ಶಿ ಎಚ್ಕೆ. ನಯನಾಡು ಮತ್ತು ಸ್ಪರ್ಧಾ ಸಮಿತಿ ಸಂಚಾಲಕ ಕೆ.ರಮೇಶ್ ನಾಯಕ್ ರಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.