ವಿಟ್ಲ: ಮಕ್ಕಳನ್ನು ಶಿಕ್ಷಣ, ಸಂಸ್ಕಾರದೊಂದಿಗೆ ಬೆಳೆಸಿದಾಗ ಅವರು ಜೀವನದಲ್ಲಿ ಎಂದೂ ಸಹ ಸೋಲುವುದಿಲ್ಲ. ಅವರನ್ನು ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳೊಂದಿಗೆ ಮುನ್ನಡೆಸುವ ಅವಶ್ಯಕತೆಯಿದೆ. ತುಳಸಿ ಪರ್ಬದಂತಹ ಆಚರಣೆಗಳು ದೇವರ ನಂಬಿಕೆಗಳೊಂದಿಗೆ ಸಂಘಟನೆ, ಸಹಬಾಳ್ವೆ, ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾಗಿದೆ. ಮಾಣಿ ಯುವವಾಹಿನಿ ಘಟಕ ಹಿರಿಯರಯ ಪಾಲಿಸಿಕೊಂಡು ಬಂದ ಆಚರಣೆಯೊಂದಕ್ಕೆ ವಿಶಿಷ್ಟ ರೀತಿಯಲ್ಲಿ ಅರ್ಥ ತುಂಬಿದ್ದಾರೆ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಂಗಳೂರು ಕೇಂದ್ರ ಯುವವಾಹಿನಿ ಘಟಕದ ಅಧ್ಯಕ್ಷ ನರೇಶ್ ಸಸಿಹಿತ್ಲು ತಿಳಿಸಿದರು.
ಅವರು ಗುರುವಾರ ರಾತ್ರಿ ಇಡ್ಕಿದು ಗ್ರಾಮದ ಸೂರ್ಯಗುತ್ತು ಮನೆಯಲ್ಲಿ ಮಾಣಿ ಯುವವಾಹಿನಿ ಘಟಕದ ವತಿಯಿಂದ ನಡೆದ ತುಳಸಿ ಪರ್ಬ ಕಾರ್ಯಕ್ರಮದ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಶ್ರೀಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತಿಲ್ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲ್ ಮಾತನಾಡಿ ಬಿಲ್ಲವ ಯುವವಾಹಿನಿ ಘಟಕಗಳು ಮದ್ಯಮುಕ್ತ ಮೆಹಂದಿಯಂತಹ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ನಾನಾ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಮಾಣಿ ಘಟಕ ತುಳುನಾಡಿನಿಂದ ಮರೆಯಾಗುತ್ತಿರುವ ತುಳಸಿ ಪೂಜೆಯಂತಹ ಆಚರಣೆಯ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ಒಳ್ಳೆಯ ಪ್ರಯತ್ನ ನಡೆಸಿದೆ ಎಂದರು ತಿಳಿಸಿದರು.
ಮಾಣಿ ಯುವವಾಹಿನಿ ಘಟಕ ಅಧ್ಯಕ್ಷ ರಮೇಶ್ ಮುಜಾಲ ಅಧ್ಯಕ್ಷತೆ ವಹಿಸಿದ್ದ ಸಭೆಯನ್ನು ಸೂರ್ಯಗುತ್ತಿನ ಮನೆಯ ಹಿರಿಯರಾದ ಚಂದ್ರಾವತಿ ಉದ್ಘಾಟಿಸಿದರು. ಮಾಣಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಗೌರವಾಧ್ಯಕ್ಷ ಈಶ್ವರ ಪೂಜಾರಿ ಹಿರ್ತಡ್ಕ ತುಳಸಿ ಪೂಜೆಯ ಮಹತ್ವದ ಬಗ್ಗೆ ಮಾತನಾಡಿದರು. ಶ್ರೀಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತಿಲ್ ಬಂಟ್ವಾಳ ತಾ. ಸಮಿತಿ ಅಧ್ಯಕ್ಷ ಪ್ರೇಮಾನಾಥ ಕೆ, ಮಾಣಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ನಾರಾಯಣ ಸಾಲ್ಯಾನ್, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಬಾಬಣಕಟ್ಟೆ, ರಮೇಶ್ ಸೂರ್ಯಗುತ್ತು ಭಾಗವಹಿಸಿದ್ದರು.
ರಾಜೇಶ್ ಬರಿಮಾರು ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕ ಜನಾರ್ದನ ಕೊಡಂಗೆ ವಂದಿಸಿದರು. ದಿನಕರ ಅಂಚನ್ ಬರಿಮಾರು ಕಾರ್ಯಕ್ರಮ ನಿರೂಪಿಸಿದರು.

ತುಳಸಿ ಪೂಜೆಯ ಅಂಗವಾಗಿ ಅಂಗಳದ ತುಳಸಿಕಟ್ಟೆಯನ್ನು ಸಾಂಪ್ರದಾಯಿಕವಾಗಿ ಅಲಂಕರಿಸಿ, ನೂರಾರು ಹಣತೆಗಳನ್ನು ಹಚ್ಚಿ, ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಯುವವಾಹಿನಿ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here