ಬಂಟ್ವಾಳ: ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಬಂಟ್ವಾಳ ಇದರ ಅಧ್ಯಕ್ಷರಾದ ಎನ್ ಸುಬ್ರಮಣ್ಯ ಭಟ್ ನೇತೃತ್ವದಲ್ಲಿ ಬಂಟ್ವಾಳ ವಿಧಾನಸಭಾ ಶಾಸಕ ಉಳಿಪಾಡಿಗುತ್ತು ರಾಜೇಶ್ ನಾಯಕ್ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ದ.ಕ. ಜಿಲ್ಲಾಧಿಕಾರಿ ಅವರನ್ನು ಭೇಟಿಯಾಗಿ ತುಂಬೆ ಡ್ಯಾಂ ಸಂತ್ರಸ್ತ ರೈತರಿ ಗೆ ನ್ಯಾಯೋಚಿತ ಸೂಕ್ತ ಪರಿಹಾರ ದೊರಕದೆ ಇರುವ ಬಗ್ಗೆ ಹಾಗೂ ನೆಲ ಬಾಡಿಗೆ ಲಭಿಸದೆ ಇರುವ ಬಗ್ಗೆ ಲಿಖಿತ ಮನವಿ ಸಲ್ಲಿಸಲಾಯಿತು ತುಂಬೆ ಡ್ಯಾಂ ಸಂತ್ರಸ್ತ ರೈತರ ಜ್ವಲಂತ ಸಮಸ್ಯೆಯನ್ನು ದಶಂಬರ 10 ತಾರೀಖಿನ ಒಳಗಡೆ ಸಂತ್ರಸ್ತ ರೈತರ ಅಧಿಕಾರಿಗ ಳ ಜನಪ್ರತಿನಿಧಿಗಳ ಜಂಟಿ ಸಭೆಯನ್ನು ಕರೆದು ರೈತ ಹಿತಾಸಕ್ತಿಯನ್ನು ಕಾಪಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿದರು ನಿಯೋಗದಲ್ಲಿ ಬಂಟ್ವಾಳ ತಾಲೂಕು ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಎಂ ಸುಬ್ರಮಣ್ಯ ಭಟ್ ಎಂಕೆ ಇದಿನಬ್ಬ ಜಾನ್ ಲೋಬೋ ಅಣ್ಣಪ್ಪಯ್ಯ ಪ್ರಕಾಶ್ ಅಬ್ದುಲ್ ರಹಿಮಾನ್ ಶಶಿಧರ ಧನಂಜಯ ಶೆಟ್ಟಿ ಮೊದಲಾದವರಿದ್ದರು.