ವಿಟ್ಲ: ವಿಟ್ಲದ ಬಸವನಗುಡಿಯ ‘ಜಯದುರ್ಗಾ’ ಮನೆಯಲ್ಲಿ ‘ಶರಸೇತು ಬಂಧನ – ದ್ರೌಪದಿ ಪ್ರತಾಪ’ ಯಕ್ಷಗಾನ ತಾಳಮದ್ದಳೆ ಪ್ರದರ್ಶನಗೊಂಡಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಸಾದ ಬಲಿಪ, ಸುಬ್ರಾಯ ಸಂಪಾಜೆ ಹಾಗೂ ಚೆಂಡೆಮದ್ದಳೆಯಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್ಟ, ಕುದ್ರೆಕೂಡ್ಲು ರಾಮಮೂರ್ತಿ, ಬೆಳಾಲು ಗಣೇಶ ಭಟ್ಟ, ವಧ್ವ ರಾಮಪ್ರಸಾದ, ಕುಮಾರಿ ಶರಣ್ಯ ನೆತ್ರಕೆರೆ, ಚಕ್ರತಾಳದಲ್ಲಿ ಶ್ರೀಕೃಷ್ಣ ಜೆಡ್ಡು ಭಾಗವಹಿಸಿದರು.
ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ಶಂಭುಶರ್ಮ ವಿಟ್ಲ, ವೆಂಕಟರಾಮ ಭಟ್ಟ ಸುಳ್ಯ, ವಿಷ್ಣುಶರ್ಮ ವಾಟೆಪಡ್ಪು, ಪಕಳಕುಂಜ ಶ್ಯಾಮ ಭಟ್ಟ, ಹರೀಶ ಬಳಂತಿಮೊಗರು, ಗುಂಡ್ಯಡ್ಕ ಈಶ್ವರ ಭಟ್ಟ, ಶಿಮಿಲಡ್ಕ ಗೋಪಾಲಕೃಷ್ಣ ಭಟ್ಟ, ಗಣೇಶ ಶರ್ಮ ಕೀರಿಕ್ಕಾಡು ಸಿದ್ದಕಟ್ಟೆ, ಚಣಿಲ ಸುಬ್ರಹ್ಮಣ್ಯ ಭಟ್ಟ, ಲಕ್ಷ್ಮೀನರಸಿಂಹ ಭಟ್ಟ ಮಳಿ ಭಾಗವಹಿಸಿದರು.
ರವಿಶಂಕರ ಕುಳಮರ್ವ ಸ್ವಾಗತಿಸಿದರು. ಶಂಕರ ಕುಳಮರ್ವ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕುಳಮರ್ವ ಸುಬ್ರಹ್ಮಣ್ಯ ಭಟ್ಟರು ಕಲಾವಿದರುಗಳನ್ನು ಗೌರವಿಸಿದರು.