ಬಂಟ್ವಾಳ: ಗ್ರಾಮ ಪಂಚಾಯತ್ ಸದಸ್ಯ ಹಾಗೂ ಅತನ ಪತ್ನಿಗೆ ತಂಡವೊಂದು ಮನೆಗೆ ನುಗ್ಗಿ ತಲವಾರಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಮೇರೆಮಜಲು ಎಂಬಲ್ಲಿ ಇಂದು ಮುಂಜಾನೆ ವೇಳೆ ನಡೆದಿದೆ.
ಮೇರೆಮಜಲು ನಿವಾಸಿ ಪಂಚಾಯತ್ ಸದಸ್ಯ ಯೋಗೀಶ್ ಪ್ರಭು ಮತ್ತು ಆತನ ಪತ್ನಿ ಶೋಭಾ ಅವರು ಗಾಯಗೊಂಡ ವರು.
ಮುಂಜಾನೆ ಸುಮಾರು 4 ಗಂಟೆಯ ವೇಳೆ ಈ ಘಟನೆ ನಡೆದಿದ್ದು ಗಂಭೀರ ಗಾಯಗೊಂಡ ಇಬ್ಬರನ್ನೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೇರೆಮಜಲು ನಿವಾಸಿ ರೌಡಿಶೀಟರ್ ಪ್ರಸಾದ್ ಬೆಳ್ಚಾಡ ಮತ್ತು ಆತನ ಜೊತೆ ಇಬ್ಬರು ಸ್ನೇಹಿತರು ಸೇರಿ ತಲವಾರಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಯೋಗೀಶ್ ಪ್ರಭು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆ ಗೆ ದೂರು ನೀಡಿದ್ದಾರೆ.
ಮುಂಜನೆ 4 ಗಂಟೆಯ ವೇಳೆ ಪ್ರಸಾದ್ ಬೆಳ್ಚಾಡ ಮತ್ತು ಅತನ ಇಬ್ಬರು ಸ್ನೇಹಿತರು ಯೋಗೀಶ್ ಪ್ರಭು ಅವರ ಮನೆಗೆ ಬಂದು ಬಾಗಿಲು ಬಡಿದು ಎಚ್ಚರಿಸಿ ಬಾಗಿಲು ತೆರೆಯುವಂತೆ ಕೇಳಿಕೊಂಡಿದ್ದಾರೆ. ಬಾಗಿಲು ತೆರೆಯುತ್ತಿದ್ದಂತೆ ಮನೆಯೊಳಗೆ ನುಗ್ಗಿ ಏಕಾಏಕಿ ತಲವಾರಿನಿಂದ ಯೋಗೀಶ್ ಪ್ರಭು ಮೇಲೆ ಪ್ರಶಾದ್ ಬೆಳ್ಚಾಡ ಹಲ್ಲೆ ನಡೆಸಿದ್ದಾನೆ ಈ ಸಂದರ್ಭದಲ್ಲಿ ಜೊತೆಯಲ್ಲಿದ್ದ ಪತ್ನಿ ಶೋಭಾ ಅವರಿಗೂ ಗಾಯಗಳಾಗಿವೆ.
ಘಟನಾ ಸ್ಥಳದಲ್ಲಿ ಬಂಟ್ವಾಳ ಎಎಸ್.ಪಿ.ಸೈದುಲು ಅಡಾವತ್, ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್, ಗ್ರಾಮಾಂತರ ಎಸ್.ಐ.ಪ್ರಸನ್ನ ಹಾಗೂ ಸಿಬ್ಬಂದಿ ಗಳು ಬೇಟಿ ನೀಡಿದ್ದು ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.