ಬಂಟ್ವಾಳ: ರೋಟರಿ ಕ್ಲಬ್ ಮೂಡಬಿದಿರೆ, ರೋಟರಿ ಸಮುದಾಯ ದಳ ಸಿದ್ಧಕಟ್ಟೆ ಮತ್ತು ರೋಟರಾಕ್ಟ್ ಕ್ಲಬ್ ಮೂಡಬಿದಿರೆ ಇದರ ಆಶ್ರಯದಲಿ ಫಾದರ್ ಮುಲ್ಲರ್‍ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆ, ಮಂಗಳೂರು ಇವರ ಸಹಯೋಗದೂಂದಿಗೆ ನ. 3ನೇ ಆದಿತ್ಯವಾರ ಬೆಳಗ್ಗೆ ಗಂಟೆ 9.30ರಿಂದ ಅಪರಾಹ್ನ 12.30ರ ವರೆಗೆ ಸಿದ್ಧಕಟ್ಟೆ ಸೈಂಟ್ ಪ್ಯಾಟ್ರಿಕ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ ಆರೋಗ್ಯ ತಪಾಸಣೆ, ಕಣ್ಣು, ಕಿವಿ, ಗಂಟಲು, ಮೂಗು ಪರೀಕ್ಷೆ, ಮಕ್ಕಳ ತಪಾಸಣೆ, ಸಕ್ಕರೆ ಖಾಯಿಲೆ, ಚರ್ಮರೋಗ ತಪಾಸಣೆ ಇದರೊಂದಿಗೆ ಇ.ಸಿ.ಜಿ, ಶಸ್ತ್ರ ಚಿಕಿತ್ಸೆ ಮತ್ತು ಸ್ತ್ರಿ ರೋಗ ತಪಾಸಣೆಯನ್ನ ತಜ್ಞ ವೈದ್ಯರ ತಂಡದಿಂದ ನಡೆಸಲಾಗುವುದು. ಕಣ್ಣಿನ ಸಮಸ್ಯೆ ಇರುವವರಿಗೆ ಸ್ಥಳದಲ್ಲೇ ಕನ್ನಡಕವನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುವುದು. ಹಾಗೆಯೇ ಫಾದರ್ ಮುಲ್ಲರ್‍ಸ್ ಆರೋಗ್ಯ ಕಾರ್ಡ್ ನೊಂದಾವಣೆಯ ಅರ್ಜಿ ಫಾರಂಗಳನ್ನು ವಿತರಿಸಲಾಗುವುದು. ಸಾರ್ವಜನಿಕರು ಈ ಶಿಬಿರದ ಪ್ರಯೋಜನವನ್ನು ಪಡೆಯಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here