ಬಂಟ್ವಾಳ: ಈದ್ ಹಬ್ಬ ಶಾಂತಿಯುತವಾಗಿ ನಡೆಯಲು ಎಲ್ಲರ ಸಹಕಾರ ಬೇಕು ಎಂದು ಎ.ಎಸ್.ಪಿ.ಸೈದುಲು ಅಡಾವತ್ ಹೇಳಿದರು.


ಅವರು ಶಾಂತಿಯುತ ಈದ್ ಆಚರಣೆಯ ಹಿನ್ನಲೆಯಲ್ಲಿ ಗುರುವಾರ ಸಂಜೆ ಬಿಸಿರೋಡಿನ ರೋಟರಿ ಭವನದಲ್ಲಿ ನಡೆದ ಶಾಂತಿಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈದ್ ಹಬ್ಬವನ್ನು ಆಚರಿಸುವ ವೇಳೆ ಮೆರವಣಿಗೆ ಬೈಕ್ ರೈಡ್ ಎಲ್ಲವೂ ಶಾಂತಿಯುತ ವಾಗಿರಲಿ ಎಂಬ ವಿಚಾರ ಸಹಿತ ಎಲ್ಲಾ ಸಮಗ್ರವಾದ ವಿಷಯವನ್ನು ತಿಳಿಸಿದರು.
ಸಾಮಾಜಿಕ ಜಾಲತಾಣವನ್ನು ಸದುದ್ದೇಶಗಳಿಗೆ, ಉತ್ತಮ ಕಾರ್ಯಗಳಿಗೆ ಬಳಸಿ , ಕೆಟ್ಟ ಸಂದೇಶ ಗಳನ್ನು ಕಳುಹಿಸುವ ಚಟದಿಂದ ದೂರವಿರಿ.‌
ಕಾನೂನು ಬಾಹಿರ ವಾದ ಯಾವುದೇ ಚಟುವಟಿಕೆಗಳಿಂದ ದೂರವಿರುವಂತೆಯೂ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ವೇದಿಕೆಯಲ್ಲಿ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್, ಬಂಟ್ವಾಳ ನಗರ ಠಾಣಾ ಎಸ್. ಐ.ಚಂದ್ರಶೇಖರ್, ಗ್ರಾಮಾಂತರ ಠಾಣಾ ಎಸ್. ಐ.ಪ್ರಸನ್ನ, ನಗರ ಠಾಣಾ ಅಪರಾಧ ವಿಭಾಗದ ಎಸ್. ಐ.ಸುಧಾಕರ ತೋನ್ಸೆ ಅವರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here