Wednesday, April 10, 2024

ಆಧುನಿಕತೆಯ ಭರಾಟೆ ಯಲ್ಲಿ, ಸಂಕುಚಿತ ಮನೋಭಾವದಿಂದ, ಕುಟುಂಬ ವ್ಯವಸ್ಥೆ ಗಳು ಮಾಯವಾಗಿವೆ: ಸಹನಾ ಕುಂದರ್

 ಬಂಟ್ವಾಳ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ (ರಿ.)ಬಂಟ್ವಾಳ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಬಿಸಿರೋಡು ವಲಯದ ವತಿಯಿಂದ ನ.17 ರಂದು ಬಿಸಿರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.
ಆಶೀರ್ವಚನ ನೀಡಿದ ಪೊಳಲಿ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತ್ಯನ್ಯಾಂದ ಸ್ವಾಮೀಜಿ , ಜೀವನದಲ್ಲಿ ಮಾಡಿದ ಉತ್ತಮ ಕಾರ್ಯಗಳು ಸಮಾಜಿಮುಖಿ ಕೆಲಸಗಳು ಜೀವನಕ್ಕೆ ಅರ್ಥ ನೀಡುತ್ತದೆ.


ಹುಟ್ಟು ಸಾವಿನ ಮಧ್ಯ ಇರುವ ಚಕ್ರದಿಂದ ಮುಕ್ತಿ ಸಿಗಬೇಕಾದರೆ ಅಧ್ಯಾತ್ಮಿಕ ಚಿಂತನೆ ನಡೆಸಿದಾಗ ನಿಜಾಂಶ ತಿಳಿಯುತ್ತದೆ ಎಂದು ಅವರು ಹೇಳಿದರು. ‌
ಮಾತು, ಉಡುಗೆತೊಡುಗೆ, ಹೀಗೆ ಎಲ್ಲಾ ರೀತಿಯಲ್ಲಿ ಜೀವನ ಶೈಲಿಯನ್ನು ಅನುಷ್ಠಾನ ಮಾಡಿದಾಗ ಮಾತ್ರ ಸಮಜದಲ್ಲಿ ಗೌರವ ಸಿಗುತ್ತದೆ ಎಂದು ಅವರು ಹೇಳಿದರು. ‌
ದೇಶವನ್ನು ಪ್ರೀತಿ ಮಾಡುವ ನಾವು ಸ್ವಚ್ಚತೆಗೆ ಹೆಚ್ಚು ಗಮನ ನೀಡಬೇಕು, ಗಾಂಧಿಯವರ ಕನಸು ನನಸಾಗಲು , ಮೋದಿಯವರ ಪರಿಕಲ್ಪನೆಗೆ ನಾವು ಕೈಜೋಡಿಸಬೇಕು ಎಂದು ಅವರ ಹೇಳಿದರು. ‌
ನಮ್ಮ ಮನಸ್ಥಿತಿ ಬದಲಾಗದೆ ಸ್ವಚ್ಚ ಭಾರತವಾಗಲು ಸಾಧ್ಯವಿಲ್ಲ, ಪ್ಲಾಸ್ಟಿಕ್ ನಿಷೇಧದಕ್ಕೆ ನಾವು ಬೆಂಬಲ ನೀಡಬೇಕು, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಪರಿಸರ ರಕ್ಷಣೆ ಮಾಡಿ ಎಂದರು.

ಧಾರ್ಮಿಕ ಉಪನ್ಯಾಸ ನೀಡಿದ ಉಡುಪಿಯ ಖ್ಯಾತ ವಕೀಲೆ, ವಾಗ್ಮಿ ಸಹನಾ ಕುಂದರ್ ಅವರು,
ಜೀವನದಲ್ಲಿ ಕುಂದರ್ ವ್ಯಕ್ತಿಯಾಗಿ ರೂಪುಗೊಳಿಸಿದ ಕೊಡುಗೆ ಧರ್ಮಸ್ಥಳ ಮತ್ತು ಪರಮಪೂಜ್ಯ ರಾಜರ್ಷಿ ಡಾ! ಡಿ.ವೀರೇಂದ್ರ ಹೆಗ್ಗಡೆ ಯವರಿಗೆ ಸಲ್ಲಬೇಕು. ‌ಬದುಕು ಎಂಬುದು ನಾವು ಅದನ್ನು ಕಟ್ಟು ವುದರಲ್ಲಿದೆ , ತುಳುವನಾಡಿನಲ್ಲಿ ಆಧ್ಯಾತ್ಮಿಕ ವಾಗಿ ಬದುಕು ಕಟ್ಟಬೇಕಾಗಿದೆ, ಆಧುನಿಕತೆಯ
ಭರಾಟೆ ಯಲ್ಲಿ, ಸಂಕುಚಿತ ಮನೋಭಾವದಿಂದ, ಕುಟುಂಬ ವ್ಯವಸ್ಥೆ ಗಳು ಮಾಯವಾಗಿವೆ, ಗುರುಹಿರಿಯರನ್ನು ನಾವು ಮರೆತು ಹೋಗಿದ್ದೇವೆ, ದೈವ ದೇವರ ಮನೆ ಗೊತ್ತಿಲ್ಲದ ಸ್ಥಿತಿ, ನಿರ್ಮಾಣ ವಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.ಸಾಧನೆ ಮಾಡಬೇಕಾದ, ಖುಷಿಯಲ್ಲಿ ಬದುಕಿಬಾಳಬೇಕಾದ , ಮನೆಯವರನ್ನು ಸಾಕಿ ಸಲಹಬೇಕಾದ ಯುವಕ ಯುವತಿಯರು ದುಶ್ಚಟಗಳಿಗೆ ಬಲಿಯಾಗಿ ದಾರಿ ತಪ್ಪುತ್ತಿದ್ದಾರೆ , ಇದು ದುರಂತ ಎಂದು ಅವರು ಹೇಳಿದರು.ದೈವ ದೇವರಿಗೆ ಹೆದರುವವರು ಯಾರು ಕೂಡಾ ತುಳು ನಾಡಿನಲ್ಲಿ ತಪ್ಪು ಮಾಡುವುದಿಲ್ಲ ಎಂಬುದು ಸತ್ಯ ವಿಚಾರ, ಅದು ತುಳುವರ ಅಸ್ತ್ರ ಎಂದು ಅವರು ಹೇಳಿದರು.
ಸಾವು ಎಂಬುದು ಅತ್ಯಂತ ಕಠೋರ, ಜೀವನದ ಕೊನೆಯವರೆಗೂ ಉತ್ತಮ ಕೆಲಸವನ್ನು ಮಾಡೋಣ,
ಸಾಧಿಸುವ ಛಲ, ಪ್ರಯತ್ನ ದಿಂದ ಖುಷಿಯಿಂದ ಬದುಕುವ , ಅತ್ಯಾಚಾರ, ದುಶ್ಚಟಗಳಿಂದ ದೂರವಿರುವ , ಶುದ್ಧ ಮನಸ್ಸು ಇರಲಿ, ಒಟ್ಟಾಗಿ ಬದುಕು ಕಟ್ಟೋಣ ಎಂದು ಅವರು ಹೇಳಿದರು.

ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿಅವರು ಮಾತನಾಡಿ ಸಂಸ್ಕಾರದ ಜೀವನಕ್ಕೆ ಇಂತಹ ಧರ್ಮ ಕಾರ್ಯಗಳು ನಡೆಯುವ ಅಗತ್ಯವಿದೆ ಎಂದು ಅವರು ಹೇಳಿದರು.

ಬಂಟ್ವಾಳ ಭೂಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ,ಸಂಸ್ಕೃತಿ, ಸಂಸ್ಕಾರ ಧಾರ್ಮಿಕ ಶಕ್ತಿಯ ಜೊತೆಯಲ್ಲಿ ಆರ್ಥಿಕ ವಾಗಿ ಬದುಕು ನೀಡಿದ್ದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ನಾವು ಎದೆ ತಟ್ಟಿ ಹೇಳಲು ಸಂತೋಷವಾಗುತ್ತಿದೆ ಎಂದು ಅವರು ಹೇಳಿದರು. ‌

ವೇದಿಕೆಯಲ್ಲಿ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಮಾದವ ವಳವೂರು, ಜನಜಾಗೃತಿ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು, ಬಂಟ್ವಾಳ ವಲಯದ ಅಧ್ಯಕ್ಷ ವಸಂತ ಮೂಲ್ಯ, ವಲಯ ಮೇಲ್ವಿಚಾರಕ ಕೇಶವ ಮತ್ತಿತರರು ಉಪಸ್ಥಿತರಿದ್ದರು.
ಅಚಾರಿಪಲ್ಕೆ ಒಕ್ಕೂಟದ ಅಧ್ಯಕ್ಷ ರಾಜೇಶ್ ಸ್ವಾಗತಿಸಿದರು. ‌ಬಿಸಿರೋಡು ವಲಯದ ಅಧ್ಯಕ್ಷ ಶೇಖರ ಸಾಮಾನಿ ವಂದಿಸಿದರು. ಶ್ರೀರಾಮ್ ಕಾರ್ಯಕ್ರಮ ನಿರೂಪಿಸಿದರು. ‌

ಬೆಳಿಗ್ಗೆ 7.30 ರಿಂದ ಶ್ರೀ ರಾಧಾಕೃಷ್ಣ ಭಟ್ ಅಪೌರೋಹಿತ್ಯ ದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು.

More from the blog

ಎ.14ರ ಪ್ರಧಾನಿ ಮೋದಿ ಸಮಾವೇಶ ರದ್ದು : ರೋಡ್ ಶೋದಲ್ಲಿ ಮಾತ್ರ ಭಾಗಿ

ಮಂಗಳೂರು: ಏಪ್ರಿಲ್ 14 ರಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಧಾನಿ ಮೋದಿ ಬೃಹತ್ ಸಮಾವೇಶಕ್ಕೆ ಆಯೋಜನೆ ಮಾಡಲಾಗಿತ್ತು. ಆದರೆ ಇದೀಗ ಕೊನೆ ಕ್ಷಣದಲ್ಲಿ ಈ ಸಮಾವೇಶ ರದ್ದುಪಡಿಸಲಾಗಿದೆ. ಏಪ್ರಿಲ್ 14ರಂದು ಮಂಗಳೂರಿನಲ್ಲಿ...

ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ….?​ ಇಲ್ಲಿದೆ ಮಾಹಿತಿ

ಬೆಂಗಳೂರು: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶೇ 81.15 ಮಂದಿ ಉತ್ತೀರ್ಣಗೊಂಡಿದ್ದಾರೆ. 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 1,28,448 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ...

ದ್ವಿತೀಯ ಪಿಯು ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ

ಬೆಂಗಳೂರು: ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ, ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ....

ಶಾಲಾ ಸಮುದಾಯದತ್ತ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಮಾಣಿ: ಶೈಕ್ಷಣಿಕ ವಿಚಾರಗಳ ಸಂಬಂಧಿತವಾದ ಒಳ್ಳೆಯ ಚಚೆ೯ಗಳು ಮೂಡಿಬಂದಾಗ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಕೆಲಸಗಳು ಮೂಡಲು ಸಾಧ್ಯ ‌. ಪ್ರತಿಯೊಬ್ಬ ವಿದ್ಯಾರ್ಥಿ, ಪೋಷಕರು,ತನ್ನ ಶಾಲೆಯ ಬಗ್ಗೆ ಒಳ್ಳೆಯ ಭಾವನೆ, ಸಂಬಂಧ ಇರಬೇಕು...