ವಿಟ್ಲ : ಮಂಗಳೂರಿನ ಬಂಟ್ಸ್ ಹಾಸ್ಟೆಲ್‌ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋಪರೇಷನ್ ಸೊಸೈಟಿಯ ವಿಟ್ಲ ಶಾಖೆಯ ಗ್ರಾಹಕ ಸಂಪರ್ಕ ಸಭೆಯು ವಿಟ್ಲ ಶ್ರೀ ಭಗವತೀ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು.
ಸಂಘದ ಅಧ್ಯಕ್ಷ ಕೆ. ಜೈರಾಜ್ ಬಿ. ರೈಯವರು ಬ್ಯಾಂಕಿನ ಅಭಿವೃದ್ಧಿ ವಿಷಯದಲ್ಲಿ ಮಾತಾನಾಡಿ ಸಂಘದ ಒಟ್ಟು ವ್ಯವಹಾರವು 400 ಕೋಟಿ ಗುರಿಯನ್ನು ಕ್ರಮಿಸಿದ್ದು ಗ್ರಾಹಕರಿಗೆ ಉತ್ತಮ ರೀತಿಯಲ್ಲಿ ಸೇವೆಯನ್ನು ನೀಡುತ್ತಾ ಬಂದಿದೆ ಎಂದು ತಿಳಿಸಿದರು.
ಡಿಸೆಂಬರ್‌ನಲ್ಲಿ ಸಂಘದ ಬೆಳ್ಳಿ ಹಬ್ಬವನ್ನು ಆಚರಿಸಲಾಗುವುದೆಂದು ಹೇಳಿದರು. ಸಂಘದ ಉತ್ತಮ ಗ್ರಾಹಕರನ್ನು ಗೌರವಿಸಲಾಯಿತು. ಶಾಖಾ ಸಲಹಾ ಸಮಿತಿಯ ಅಧ್ಯಕ್ಷರಾದ ಡಾ.ವಿ.ಹೆಚ್ ರಮಾನಂದ ಶೆಟ್ಟಿ ಕೂಡೂರು ಪ್ರಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಖಾ ಉಸ್ತುವಾರಿ ನಿರ್ದೇಶಕ ಬಿ. ದಯಾಕರ ಆಳ್ವ ಹಾಗೂ ಶಾಖಾ ಸಲಹಾ ಸಮಿತಿಯ ಸದಸ್ಯರಾದ ಡಾ. ಶರಶ್ಚಂದ್ರ ಶೆಟ್ಟಿ, ಬಿ. ತಿಮ್ಮಪ್ಪ ಶೆಟ್ಟಿ, ಮುರಳಿಧರ ರೈ, ಎನ್. ಕೃಷ್ಣ ಭಟ್, ದಿನಕರ ಆಳ್ವ ಉಪಸ್ಥಿತರಿದ್ದರು. ಕುಮಾರಿ ಅನ್ಛಿ ಪೂಂಜಾ ಪ್ರಾರ್ಥಿಸಿದರು. ಶಾಖಾ ಸಲಹಾ ಸಮಿತಿ ಸದಸ್ಯ ಭಾಸ್ಕರ ರೈ ಸ್ವಾಗತಿಸಿದರು. ಶಾಖಾ ವ್ಯವಸ್ಥಾಪಕ ಬಾಲಕೃಷ್ಣ ರೈ ವರದಿ ಮಂಡಿಸಿದರು. ಸಂಘದ ಮಹಾ ಪ್ರಭಂಧಕ ಗಣೇಶ ಜಿ.ಕೆ. ವಂದಿಸಿದರು. ಸಿಬ್ಬಂದಿ ಪ್ಲಾವಿಯಾ, ಜೇನ್ ಪಿಂಟೋ ಕಾರ್‍ಯಕ್ರಮ ನಿರೂಪಿಸಿದರು.