ಬಂಟ್ವಾಳ: ಅಟೋ ರಿಕ್ಷಾ ಚಾಲಕ ಮಾಲಕರ ಸಂಘ ಬಿಸಿರೋಡು ಶಾಖೆ, ಇದರ 31 ನೇ ವಾರ್ಷಿಕ ಮಹಾಸಭೆ ನ.26 ರಂದು ಮಂಗಳವಾರ ಬೆಳಿಗ್ಗೆ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮ ವನ್ನು ದೀಪಬೆಳಗಿಸಿ ಉದ್ಘಾಟಿಸಿ ದ ಬಂಟ್ವಾಳ ನಗರ ರೋಟರಿ ಟೌನ್‌ನ ಅಧ್ಯಕ್ಷ
ಜಯರಾಮ ಎಸ್.ಬಂಗೇರ ಅವರು ಮಾತನಾಡಿ ಪ್ರಮಾಣಿಕತೆಯ ವ್ಯಕ್ತಿತ್ವದಿಂದ ಕಷ್ಟದ ಜೀವನ ಸಾಗಿಸುವವರು ರಿಕ್ಷಾ ಚಾಲಕರು ಎಂದು ಅವರು ಹೇಳಿದರು.
ರಿಕ್ಷಾ ಮನುಷ್ಯನ ದೈನಂದಿನ ಜೀವನದಲ್ಲಿ ಒಂದು ಭಾಗವಾಗಿ ಕೆಲಸ ಮಾಡುತ್ತಿದೆ.
ಕಷ್ಟ ಕಾಲದಲ್ಲಿ ರಿಕ್ಷಾ ಚಾಲಕರಿಂದ ಮಾತ್ರ ನೆರವು ಸಿಗಲು ಸಾಧ್ಯ ಎಂದು ಅವರು ಹೇಳಿದರು.
ಬಿ.ಎಂ.ಎಸ್.ನ ರಾಜ್ಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಮಹಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಮಾತನಾಡಿದ ಅವರು
ವೃತ್ತಿಯಲ್ಲಿ ನಿಯಮ ಪಾಲನೆ ಮಾಡಿ , ಯಾವುದೇ ಕೀಳರಿಮೆ ಬೇಡ , ವೃತ್ತಿಗೌರವ ಬೆಳೆಸಿಕೊಳ್ಳಿ,
ಶಿಸ್ತು ಸಂಯಮ ನೀತಿ ನಿಯಮಗಳನ್ನು ರಿಕ್ಷಾ ಚಾಲಕರು ಜೀವನದಲ್ಲಿ ಪರಿಪಾಲನೆ ಮಾಡಿ ಎಂದು ಅವರು ಹೇಳಿದರು.
ಚಾಲಕ ಮಾಲಕರ ಸಂಘಟನೆ ಆರಂಭ ಮಾಡಿದ್ದೇ ಈ ಉದ್ದೇಶದಿಂದ , ಸಾಮಾಜಿಕ ಕಾರ್ಯಕ್ರಮ ಗಳಲ್ಲಿ ರಿಕ್ಷಾ ಚಾಲಕರಿಗೆ ಸಂಘಟನೆ ಯಿಂದ ಮಾತ್ರ ಗೌರವ ಸಿಗುತ್ತಿದೆ ಎಂದು ಅವರು ಹೇಳಿದರು.
ರಿಕ್ಷಾ ಚಾಲಕರಿಗೆ ಎರಡು ಮುಖ ಒಂದು ಉತ್ತಮ ಚಾಲಕನಾದರೆ, ಇನ್ನೊಂದು ಸಾಮಾಜಿಕವಾಗಿ ಸ್ಥಾನ ಮಾನ ಪಡೆಯುವುದು ಎಂದರು.
ಸದಾನಂದ ನಾವೂರ ಮಾತನಾಡಿ ಸಂಘ ಶಾಶ್ವತ, ವ್ಯಕ್ತಿ ಅಲ್ಲ, ಸಂಘದ ಚಟುವಟಿಕೆ ಯಲ್ಲಿ ನಿರಂತರವಾಗಿ ಪಾಲ್ಗೊಂಡು ಸಂಘದ ಬೆಳವಣಿಗೆಯ ಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಿ ಎಂದು ಅವರು ತಿಳಿಸಿದರು.
ಕಾನೂನು ಸಲಹೆಗಾರ ನ್ಯಾಯವಾದಿ ಜಯರಾಮ ರೈ ಮಾತನಾಡಿ, ಸಂಘಟನೆಯಿಂದ, ಸಂಘಟಿರಾದಾಗ ಮತ್ತು ಕಾನೂನುಪ್ರಕಾರ ಇದ್ದಾಗ ಮಾತ್ರ ನಮಗೆ ಮೌಲ್ಯ ಸಿಗುತ್ತದೆ.
ಒಡಿಯೂರು ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ದ ಅಧ್ಯಕ್ಷ ಎ.ಸುರೇಶ್ ರೈ ಎಂ.ಜೆ.ಎಫ್ ರಿಕ್ಷಾ ಚಾಲಕರಿಗೆ ವಿಮೆ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಬಿ.ಎಂ.ಎಸ್.ನ ಜಿಲ್ಲಾ ಕಾರ್ಯದರ್ಶಿ ಗೋಪಾಲಕೃಷ್ಣ, ನೂತನ ಅಧ್ಯಕ್ಷ ಸತೀಶ್ ಭಂಡಾರಿ ಬೆಟ್ಟುಹಾಗೂ ಕಾರ್ಯದರ್ಶಿ ಕೃಷ್ಣ ಮಣಿಹಳ್ಳ
ಉಪಸ್ಥಿತರಿದ್ದರು.
ಮತ್ತಿತರರು ಉಪಸ್ಥಿತರಿದ್ದರು. ರಿಕ್ಷಾ ಚಾಲಕ ಮಾಲಕರ ಸಂಘದ ಕಾರ್ಯದರ್ಶಿ ನಾರಾಯಣ ಅವರು ವರದಿ ವಾಚಿಸಿದರು.ಸಂಘದ ಸಲಹೆಗಾರ ಸದಾನಂದ ಗೌಡ ಸ್ವಾಗತಿಸಿಬಂಟ್ವಾಳ ರಿಕ್ಷಾ ಚಾಲಕ ಮಾಲಕರ ಸಂಘಧ ಆಧ್ಯಕ್ಷ ವಸಂತ ಕುಮಾರ್ ವಿ.ಮಣಿಹಳ್ಳ ವಂದಿಸಿದರು.ಉಮಾಶಂಕರ್ ಕಾರ್ಯಕ್ರಮ ನಿರೂಪಿಸಿದರು.