Thursday, October 19, 2023

ತಂಬಾಕು ಉತ್ಪನ್ನಗಳ ಮಾರಾಟದ ಕುರಿತು ದಾಳಿ : ೨೫೦೦ ರೂ.ದಂಡ

Must read

ಬಂಟ್ವಾಳ, ನ. ೨೦: ಆರೋಗ್ಯ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ತಂಬಾಕು ನಿಯಂತ್ರಣ ಕೋಶವು ಜಂಟಿ ಕಾರ್ಯಾಚರಣೆಯ ಮೂಲಕ ಬುಧವಾರ ಬಂಟ್ವಾಳ ತಾಲೂಕಿನ ೧೭ ಕಡೆಗಳಲ್ಲಿ ಶಾಲಾ ಪರಿಸರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟದ ಕುರಿತು ದಾಳಿ ನಡೆಸಿ ೨೫೦೦ ರೂ.ಮೊತ್ತದ ದಂಡ ವಿದಿಸಿದೆ. .
ಕಾರ್ಯಾಚರಣೆಯಲ್ಲಿ ರಾಜ್ಯ ವಿಭಾಗೀಯ ಸಂಯೋಜಕರಾದ ಸಂಪತ್‌ಕುಮಾರ್, ಜಿಲ್ಲಾ ಕೋಶದ ಶೃತಿ ಸಾಲಿಯಾನ್, ತಾಲೂಕು ಆರೋಗ್ಯಾಽಕಾರಿ ಡಾ| ದೀಪಾ ಪ್ರಭು, ಆರೋಗ್ಯ ನಿರೀಕ್ಷಕ ಕೃಷ್ಣಮೂರ್ತಿ ಹಾಗೂ ಪೊಲೀಸ್ ಸಿಬಂದಿ ಭಾಗವಹಿಸಿದ್ದರು.
ಬಂಟ್ವಾಳ ವಿದ್ಯಾಗಿರಿ, ಲೊರೆಟ್ಟೊ, ಪಾಣೆಮಂಗಳೂರು, ಗೂಡಿನಬಳಿ, ನಂದಾವರ ಪರಿಸರದಲ್ಲಿ ದಾಳಿ ನಡೆಸಿದೆ. ನಿಯಮದ ಪ್ರಕಾರ ಶಾಲೆಯ ೧೦೦ ಮೀ.ವ್ಯಾಪ್ತಿಯಲ್ಲಿ ತಂಬಾಕು ಉತನ್ನಗಳ ಮಾರಾಟಕ್ಕೆ ಅವಕಾಶವಿಲ್ದಿದ್ದು, ಹೀಗಾಗಿ ಆರೋಗ್ಯ ಇಲಾಖೆಯ ತಂಡ ದಾಳಿ ನಡೆಸಿದೆ.
ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧದ ಕುರಿತಂತೆ ಬೋರ್ಡ್ ಹಾಕದೇ ಇರುವ ಕುರಿತು ಸೆಕ್ಷನ್ ೪ ಮತ್ತ ೬ ಬಿ.ಯಡಿಯಲ್ಲಿ ಅಂಗಡಿಗಳಿಗೆ ದಂಡ ವಿದಿಸಿದೆ.

More articles

Latest article